ಮಂಗಳೂರು : ಕುಖ್ಯಾತ ರೌಡಿಶೀಟರ್ ಕಾಲಿಯಾ ರಫೀಕ್ನ ಹತ್ಯೆ (Rowdy sheeter Kalia Rafiq murder case) ಪ್ರಕರಣದಲ್ಲಿ ಮಂಗಳೂರು ಪೊಲೀಸರಿಗೆ (Mangalore Police) ಬೇಕಾಗಿದ್ದ ಮತ್ತೋರ್ವ ಆರೋಪಿ ಜಿಯಾ ಎಂಬಾತನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai International Airport) ಕೇರಳದ ಎಟಿಎಸ್ (The Anti-Terrorism Squad) ಬಂಧಿಸಿದೆ.
ಆರೋಪಿ ಜಿಯಾ (Kalia Rafiq killer Jia ) ತನ್ನ ಪಾತಕ ಕೃತ್ಯಗಳಿಂದ ಕೇರಳ ಮತ್ತು ಮಂಗಳೂರು ಪೊಲೀಸರಿಗೆ ಬೇಕಾಗಿದ್ದ. ಜಿಯಾ ರೌಡಿಶೀಟರ್ ಕಾಲಿಯಾ ರಫೀಕ್ ಮತ್ತು ತಸ್ಲೀಮ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾನೆ.
ಕಾಲಿಯಾ ರಫೀಕ್ (Rowdy sheeter Kalia Rafiq) ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳವನ್ನು ಕೇಂದ್ರೀಕರಿಸಿ ಕಾರ್ಯಾಚರಣೆ ನಡೆಸುತ್ತಿದ್ದ. ಈತನನ್ನು ಕೆಲ ವರ್ಷಗಳ ಹಿಂದೆ ಮಂಗಳೂರಿನ ಕೋಟೆಕಾರಿನಲ್ಲಿ ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಈತ ಮಂಗಳೂರು ಪೊಲೀಸರಿಗೆ ಜಿಯಾ ಬೇಕಾಗಿದ್ದ.
ಆ ನಂತರ ಈತ ಕೇರಳದಲ್ಲಿ ತಸ್ಲೀಮ್ ಎಂಬಾತನ ಹತ್ಯೆ ಪ್ರಕರಣ, ಬಾಲಿಕಾ ಅಜೀಜ್ ಹತ್ಯೆ ಪ್ರಕರಣದಲ್ಲಿ ಕೇರಳದ ಮಂಜೇಶ್ವರ ಪೊಲೀಸರಿಗೆ ಬೇಕಾಗಿದ್ದನು. ಕೇರಳದ ಪೈವಳಿಕೆ ನಿವಾಸಿಯಾಗಿರುವ ಈತ ಹತ್ಯೆಗಳ ನಂತರ ವಿದೇಶಕ್ಕೆ ಪರಾರಿಯಾಗಿದ್ದ.
ಇತ್ತೀಚೆಗೆ ವಿದೇಶದಿಂದ ಬಂದಿದ್ದ ಈತ ಮತ್ತೆ ವಾಪಸ್ ತೆರಳಲು ಗುರುವಾರ ಮುಂಬೈ ವಿಮಾನ ನಿಲ್ದಾಣಕ್ಕೆ (Chhatrapati Shivaji Maharaj International Airport) ಬಂದಿದ್ದ ವೇಳೆ ಕೇರಳದ ಭಯೋತ್ಪಾದನಾ ನಿಗ್ರಹ ದಳ (The Anti-Terrorism Squad) ಈತನನ್ನು ಬಂಧಿಸಿದೆ.
ಏನಿದು ಪ್ರಕರಣ? : 2017ರ ಫೆಬ್ರುವರಿ 14ರಂದು ಮುಹಮ್ಮದ್ ಜಾಹಿದ್ ಎಂಬುವವರು ತನ್ನ ಸ್ನೇಹಿತ ಕಾಲಿಯಾ ರಫೀಕ್‌ನೊಂದಿಗೆ (Rowdy sheeter Kalia Rafiq) ಮುಜಿಬ್ ಹಾಗೂ ಫಿರೋಜ್ ಜೊತೆಯಲ್ಲಿ ತಡರಾತ್ರಿ 11:30ಕ್ಕೆ ಮಾರುತಿ ಕಾರಿನಲ್ಲಿ ಹೊಸಂಗಡಿಯಿಂದ ರಾಷ್ಟ್ರೀಯ ಹೆದ್ದಾರಿ 66ರ (National Highway 66) ಮೂಲಕ ರಾತ್ರಿ 12 ಗಂಟೆಗೆ ಮಂಗಳೂರು ಕೋಟೆಕಾರು ಪೆಟ್ರೋಲ್ ಬಂಕ್ ತಲುಪಿದ್ದರು.
ಈ ವೇಳೆ ಆರೋಪಿಗಳ ಪೈಕಿ ಚಾಲಕ ರಶೀದ್ ಹೊಂಚು ಹಾಕಿದಂತೆ ಪೆಟ್ರೋಲ್ ಬಂಕ್ ಬಳಿ ಟಿಪ್ಪರ್ ಲಾರಿ ನಿಲ್ಲಿಸಿದ್ದ. ಕಾಲಿಯಾ ರಫೀಕ್ ಇದ್ದ ಕಾರು ಎದುರು ಬರುತ್ತಿದ್ದಂತೆ ಆರೋಪಿ ಏಕಾಏಕಿ ಟಿಪ್ಪರ್‌ನ್ನು ಡಿಕ್ಕಿ ಹೊಡೆಸಿದ್ದಾನೆ. ಕಾರನ್ನು ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿದ್ದಾನೆ.
ಇದರ ಮಧ್ಯೆ ಆರೋಪಿಗಳ ತಂಡದ ಮತ್ತೊಂದು ಎರ್ಟಿಕಾ ಕಾರು (Ertica Car) ಕಾಲಿಯಾ ರಫೀಕ್‌ನನ್ನು ಬೆನ್ನತ್ತಿಕೊಂಡು ಬಂದಿದೆ. ದುಷ್ಕರ್ಮಿಗಳ ಕೈಯಲ್ಲಿ ಸಿಕ್ಕಿಬೀಳುವುದು ಖಾತರಿಯಾಗುತ್ತಿದ್ದಂತೆ ಕಾಲಿಯಾ ರಫೀಕ್ (Rowdy sheeter Kalia Rafiq)ಮತ್ತು ಸಹಚರರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಈ ಸಮಯ ಆರೋಪಿಗಳ ಪೈಕಿ ನೂರ್ ಅಲಿ ಹಾಗೂ ಇನ್ನೋರ್ವ ಆರೋಪಿಯು ಪಿಸ್ತೂಲ್‌ನಿಂದ ಕಾಲಿಯಾ ರಫೀಕ್ ಮೇಲೆ ಗುಂಡು ಹಾರಿಸಿದ್ದಾರೆ. ಅಲ್ಲದೆ, ಇತರ ಆರೋಪಿಗಳು ಬೆನ್ನಟ್ಟಿ ತಲವಾರಿನಿಂದ ಕಡಿದು ಕೊಲೆಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಓದಿ: ಕುಖ್ಯಾತ ರೌಡಿ ಕಾಲಿಯಾ ರಫೀಕ್ ಕೊಲೆ ಪ್ರಕರಣ: ಪ್ರಮುಖ ಆರೋಪಿಯ ಬಂಧನ