ಮಂಗಳೂರು: ಮಂಗಳೂರಿನಲ್ಲಿ ಅಪ್ರಾಪ್ತೆಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಮುಡಿಪುವಿನ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ಅಪ್ರಾಪ್ತೆಯನ್ನು ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಾಲಕಿಯ ತಾಯಿ ನೀಡಿದ ದೂರಿನಲ್ಲಿ ತನ್ನ ಮಗಳನ್ನು ಮೂವರು ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ ಎಂದು ದೂರಿದ್ದಾರೆ.
ಆರೋಪಿಗಳು ಆಕೆಗೆ ಮದ್ಯಸೇವನೆ ಮತ್ತು ಅಮಲು ಪದಾರ್ಥ ನೀಡಿ ಅತ್ಯಾಚಾರ ಮಾಡಿದ್ದಾರೆ. ಮೂವರನ್ನು ಬಂಧಿಸಲಾಗಿದ್ದು, ಇದರಲ್ಲಿ ಇಬ್ಬರು ಮಂಗಳೂರಿನವರಾಗಿದ್ದಾರೆ. ಒಬ್ಬ ಕೇರಳದವನಾಗಿದ್ದಾನೆ ಎಂದರು.
ಆರೋಪಿಗಳಲ್ಲಿ ಓರ್ವ ಇದೇ ಬಾಲಕಿಯ ಜೊತೆಗೆ ಅನುಚಿತ ವರ್ತನೆ ಮಾಡಿದ ಬಗ್ಗೆ ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದಾನೆ. ಚಿಲಿಂಬಿಗುಡ್ಡೆ ಎಂಬಲ್ಲಿ ಬಾಲಕಿಯನ್ನು ಕರೆದುಕೊಂಡು ಹೋಗಿ ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿ ಆತನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು. ಇದಲ್ಲದೇ, ನಾಗಬನ ಹಾನಿ ಮಾಡಿದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ ಎಂದರು.
ಹೆಡ್ಕಾನ್ಸ್ಟೇಬಲ್ ಅಮಾನತು
ಪ್ರಕರಣ ಸಂಬಂಧ ಠಾಣೆಗೆ ಬಂದಿದ್ದ ಈ ಅಪ್ರಾಪ್ತೆಯ ಮೊಬೈಲ್ ನಂಬರ್ ಪಡೆದು ಆಕೆಯ ಜೊತೆಗೆ ಮೆಸೇಜ್ ಮಾಡಿ ಅನುಚಿತವಾಗಿ ವರ್ತಿಸಿದ ಹೆಡ್ಕಾನ್ಸ್ಟೇಬಲ್ನನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಈ ಚಹಾಪುಡಿ ಕೆ.ಜಿಗೆ ಜಸ್ಟ್ 1 ರೂ. ಕಡಿಮೆ 1 ಲಕ್ಷ ರೂ.. ಏನಿದೆ ಅಂಥಾದ್ದು ಈ ಟೀ ಪೌಡರ್ನಲ್ಲಿ!
ಠಾಣೆಗೆ ದೂರು ನೀಡಲು ಬಂದ ಅಪ್ರಾಪ್ತೆಯ ಸಂಪರ್ಕ ಸಂಖ್ಯೆ ಪಡೆದು ಸಂದೇಶ ಕಳುಹಿಸಿ ಅನುಚಿತವಾಗಿ ವರ್ತಿಸಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ಸಿಬ್ಬಂದಿಯನ್ನ ಬಂಧಿಸಲಾಗಿತ್ತು. ಆತನನ್ನು ಇದೀಗ ಅಮಾನತಿನಲ್ಲಿಡಲಾಗಿದೆ ಎಂದು ತಿಳಿಸಿದರು.