ETV Bharat / city

ಮಂಗಳೂರು: ಬಾಲಕಿ ಮೇಲೆ ಅತ್ಯಾಚಾರ ಯತ್ನ... ವೃದ್ಧ ಬಂಧನ

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಸಂಬಂಧ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

author img

By

Published : Aug 26, 2021, 4:21 AM IST

ಮಂಗಳೂರು
ಮಂಗಳೂರು

ಮಂಗಳೂರು: ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ವೃದ್ಧನೋರ್ವನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ನಗರದ ಕಟೀಲು ಪೆರ್ಮುದೆ ನಿವಾಸಿ ರಾಮಕೃಷ್ಣ ಬಂಧಿತ ಆರೋಪಿ.

ಆರೋಪಿ ರಾಮಕೃಷ್ಣನ ಮನೆಯಲ್ಲಿ ಶಿವಮೊಗ್ಗ ಮೂಲದ ಮಹಿಳೆ ಬಾಡಿಗೆಗೆ ವಾಸವಾಗಿದ್ದರು. ಆ.21ರಂದು ಬಾಲಕಿಯ ತಾಯಿ ಕಾರ್ಯ ನಿಮಿತ್ತ ಹೊರಗೆ ಹೋಗಿದ್ದರು. ಆಗ ತನ್ನ ಮೂವರು ಮಕ್ಕಳನ್ನು ಪೆರ್ಮುದೆಯ ಬಾಡಿಗೆ ಮನೆಯಲ್ಲೇ ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆಯ ಮೂವರು ಮಕ್ಕಳು ಅದೇ ದಿನ ಸಂಜೆ ಆರೋಪಿ ಮನೆಗೆ ಟಿ.ವಿ. ನೋಡಲು ಹೋಗಿದ್ದಾರೆ. ಆಗ ಆರೋಪಿಯ ಪತ್ನಿ ಕಟ್ಟಿಗೆ ತರಲು ಇಬ್ಬರು ಮಕ್ಕಳನ್ನು ಕರೆದೊಯ್ದಿದ್ದಾರೆ.

ಈ ವೇಳೆ ಎಂಟು ವರ್ಷ ಬಾಲಕಿ ಮನೆಯಲ್ಲೇ ಉಳಿದು, ಟಿ.ವಿ. ನೋಡುತ್ತಿದ್ದಳು. ಈ ವೇಳೆ ಆರೋಪಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮರುದಿನವೂ ಇದೇ ವರ್ತನೆ ಮುಂದುವರಿಸಿದ್ದಾನೆ ಎನ್ನಲಾಗಿದೆ. ತಾಯಿ ಮರಳಿ ಮನೆಗೆ ವಾಪಸ್ ಆದಾಗ ಬಾಲಕಿ ನಡೆದ ಘಟನೆಯನ್ನು ವಿವರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಮಂಗಳೂರು ಮಹಿಳಾ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.