ETV Bharat / city

ದೇಹಬಲವಿಲ್ಲವೆಂದು ಕುಂದದ ಆತ್ಮವಿಶ್ವಾಸ: ಕಲ್ಲಡ್ಕ ಕಾಲೇಜಿನ ಸಾಧಕನಿಗೆ ಸನ್ಮಾನ - Kalladka Sri Rama Vidya center felicitation to Aditya

2021ನೇ ಸಾಲಿನ ಅಂತಿಮ ಬಿ.ಕಾಂ ಪದವಿಯಲ್ಲಿ ಶೇ.93.8 ಅಂಕ ಗಳಿಸಿದ ಆದಿತ್ಯ ಅವರಿಗೆ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅಂಗವೈಕಲ್ಯ ಸಾಧನೆಗೆ ಅಡ್ಡಿ ಅಲ್ಲ ಎಂಬುದನ್ನು ಈ ವಿದ್ಯಾರ್ಥಿ ಸಾಧಿಸಿ ತೋರಿಸಿದ್ದಾರೆ.

Aditya felicitated at Kalladka Sri Rama Vidya centre Aditya felicitated at Kalladka Sri Rama Vidya centre
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಆದಿತ್ಯ ಅವರಿಗೆ ಸನ್ಮಾನ
author img

By

Published : Apr 11, 2022, 12:28 PM IST

ಬಂಟ್ವಾಳ(ದಕ್ಷಿಣ ಕನ್ನಡ): ಓದುವುದರಲ್ಲಿ ಮೊದಲಿಗ, ಬರೆಯುವುದರಲ್ಲಿ ಬಹುಮಾನಿತ. ಭಾಷಣಕ್ಕೆ ಹೊರಟರೆ, ಉತ್ತಮ ವಾಕ್ಪಟು. ರಸಪ್ರಶ್ನೆ ಕೇಳಿ, ಪಟಪಟನೆ ಉತ್ತರ ಕೊಡುವ ಈ ಯುವಕನ ಹೆಸರು ಆದಿತ್ಯ. ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2021ನೇ ಸಾಲಿನ ಅಂತಿಮ ಬಿ.ಕಾಂ ಪದವಿಯಲ್ಲಿ ಶೇ.93.8 ಅಂಕ ಗಳಿಸಿದ್ದು, ಅಧಿಕೃತ ರ‍್ಯಾಂಕ್ ಘೋಷಣೆಯಷ್ಟೇ ಬಾಕಿ ಇದೆ. ವಿವಿಗೆ 9ನೇ ಸ್ಥಾನದಲ್ಲಿರುವ ಹಿನ್ನೆಲೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದಿತ್ಯ ಅವರನ್ನು ಸನ್ಮಾನಿಸಲಾಯಿತು.

ಹುಟ್ಟಿನಿಂದ ಮಾಂಸಖಂಡಗಳ ಬಲಹೀನತೆಯ ಸ್ಥಿತಿಯೊಂದಿಗೆ ಇನ್ನೊಬ್ಬರನ್ನು ಅವಲಂಬಿಸಿಯೇ ತನ್ನ ನಿತ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದ ಆದಿತ್ಯ, ಉತ್ತಮ ಅಂಕ ಗಳಿಸಿರುವುದು ಇತರ ಯುವಕರಿಗೆ ಮಾದರಿ. ಪ್ರಾಥಮಿಕ, ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಮಾಣಿ ಬಾಲವಿಕಾಸ ಶಾಲೆಯಲ್ಲಿ ಮಾಡಿದ ಬಳಿಕ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪಿಯುಸಿಯಲ್ಲಿ ಕಾಮರ್ಸ್ ತೆಗೆದುಕೊಂಡರು. ಪದವಿಯಲ್ಲಿ ಬಿ.ಕಾಂ ಓದಿದ ಆದಿತ್ಯ, ಅಕೌಂಟೆನ್ಸಿಯಲ್ಲಿ ಆರು ಸೆಮಿಸ್ಟರ್​​ಗಳಲ್ಲಿ ಶೇ. 100 ಅಂಕ ಗಳಿಸಿದ್ದಾರೆ.

Kalladka Sri Rama Vidya center felicitation to Aditya
ಸ್ನೇಹಿತರೊಂದಿಗೆ ಆದಿತ್ಯ

ಭಾಷಣ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದುಕೊಂಡಿದ್ದಾರೆ. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ತನ್ನ ಕ್ರೀಡೋತ್ಸವಕ್ಕೆ ಪ್ರಸಿದ್ಧಿ. ಅದರಲ್ಲಿಯೂ ಪಾಲ್ಗೊಂಡಿರುವ ಆದಿತ್ಯ ಅಲ್ಲಿ ಕೂಡ ತನ್ನ ಛಾಪು ಮೂಡಿಸಿದ್ದಾರೆ. ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಇವರು ಎಸ್​​ಎಸ್​​ಎಲ್​​ಸಿ ಪರೀಕ್ಷೆಯಲ್ಲಿ ಶೇ.96.4 ಅಂಕ ಹಾಗೂ ಪಿಯುಸಿಯಲ್ಲಿ ಶೇ. 96 ಅಂಕ ಗಳಿಸಿದ್ದರು.

ಸಹಪಾಠಿಗಳು, ಶಿಕ್ಷಕರ ಅಕ್ಕರೆ: ಕಲ್ಲಡ್ಕ ಸಮೀಪ ಮಾಣಿ ಸನಿಹದ ಸೂರಿಕುಮೇರು ಬಳಿಯ ಕೃಷಿಕ ಗಣೇಶ್ ಭಟ್ ಹಾಗೂ ಉಷಾ ದಂಪತಿಯ ಮೊದಲ ಪುತ್ರ ಆದಿತ್ಯ. ತಾನು ಎಲ್ಲರಂತಿಲ್ಲ, ವ್ಹೀಲ್ ಚೇರ್​​ನಲ್ಲಿ ಓಡಾಡಬೇಕೆಂದು ಧೃತಿಗೆಡಲಿಲ್ಲ. ಎಳವೆಯಿಂದಲೇ ದೇಹದ ಮಾಂಸಖಂಡಗಳು ಕ್ಷೀಣಿಸುವ ಸಮಸ್ಯೆ ಇರುವ ಹಿನ್ನೆಲೆ ಪ್ರತಿಯೊಂದಕ್ಕೂ ಅವಲಂಬಿತನಾಗಬೇಕಲ್ಲ ಎಂದು ಸುಮ್ಮನೆ ಕೂರಲಿಲ್ಲ.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಗಣೇಶ್ ಭಟ್ ಅವರು ಮಗನನ್ನು ಕಾರಿನಲ್ಲಿ ಕರೆ ತಂದು ವ್ಹೀಲ್ ಚೇರ್​​ನಲ್ಲಿ ಕರೆದುಕೊಂಡು ಬಿಟ್ಟರೆ, ಸಂಜೆ ವಾಪಸ್ ಕರೆದುಕೊಂಡು ಹೋಗುತ್ತಿದ್ದರು. ಅಷ್ಟು ಹೊತ್ತು ಕಾಲೇಜಿನಲ್ಲಿ ಶಿಕ್ಷಕರು, ಸಹಪಾಠಿಗಳ ಅಕ್ಕರೆಯಲ್ಲಿ ಆದಿತ್ಯ ಚಟುವಟಿಕೆಯಿಂದ ಇರುತ್ತಿದ್ದರು. ಆತನಿಗಾಗಿಯೇ ಕೆಳ ಅಂತಸ್ತಿನಲ್ಲಿ ಬಿಕಾಂ ತರಗತಿಯನ್ನು ಮೂರು ವರ್ಷಗಳ ಕಾಲ ನಡೆಸಲಾಗಿತ್ತು ಎನ್ನುತ್ತಾರೆ ಪ್ರಿನ್ಸಿಪಾಲ್ ಕೃಷ್ಣ ಪ್ರಸಾದ್ ಕಾಯರಕಟ್ಟೆ.

ಮಾಂಸಖಂಡಗಳ ಕ್ಷೀಣಿಸುವಿಕೆಯ ಸ್ಥಿತಿ ಹೊಂದಿರುವ ಆದಿತ್ಯ, ಪ್ರಾಥಮಿಕ, ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ, ಬುತ್ತಿ ತೆಗೆದುಕೊಂಡು ಹೋಗುತ್ತಿದ್ದ. ಕೈತೊಳೆಯಲು ಹಾಗೂ ಅತ್ತಿಂದಿತ್ತ ಚಲಿಸಲು ಇನ್ನೊಬ್ಬರ ಸಹಾಯ ಬೇಕಾಗಿತ್ತು. ಅಲ್ಲಿಯೂ ಶಿಕ್ಷಕಿಯರು, ಸಹಪಾಠಿಗಳು ನೆರವಾಗುತ್ತಿದ್ದರು. ಕಲ್ಲಡ್ಕಕ್ಕೆ ಬಂದ ಮೇಲೆ ವ್ಹೀಲ್ ಚೇರ್ ಉಪಯೋಗಿಸಲಾರಂಭಿಸಿದರು. ಈ ಸಂದರ್ಭ ಊಟ ಮಾಡಲು, ತಟ್ಟೆ ತೊಳೆಯಲು ಹಾಗೂ ಬರೆಯಲು ಸಹಕರಿಸಲು ಸಹಿತ ಲವಲವಿಕೆಯಿಂದಿರಲು ಸಹಪಾಠಿಗಳು ಸಹಕರಿಸಿದರು. ಎಲ್ಲ ಮಕ್ಕಳೂ ಆದಿತ್ಯನನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎನ್ನುತ್ತಾರೆ ತಂದೆ ಗಣೇಶ್ ಭಟ್.

ನನಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯುವ ಆಸೆ ಇದೆ. ಇದಕ್ಕಾಗಿ ಆನ್​​​ಲೈನ್ ನಲ್ಲಿ ಕಲಿಯುತ್ತಿದ್ದೇನೆ. ಶಾಲಾ, ಕಾಲೇಜುಗಳಲ್ಲಿ ನನ್ನ ಸಹಪಾಠಿಗಳ ಪ್ರೋತ್ಸಾಹ, ಹೆತ್ತವರ ಮಾರ್ಗದರ್ಶನ ಸದಾ ಸ್ಮರಣೀಯ ಎನ್ನುತ್ತಾರೆ ಸಾಧಕ ಆದಿತ್ಯ.

ಇದನ್ನೂ ಓದಿ: ವಿಶೇಷ ಚೇತನರ ಬದುಕಿಗೆ ಆಸರೆಯಾದ ಸೊಸೈಟಿ: ಸಂತಸದಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳು!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.