ಮಂಗಳೂರು : ಸ್ವಾತಂತ್ರ್ಯದ ಬಳಿಕ ಭಾರತದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಏಕತೆಗಾಗಿ ಪಟ್ಟಿರುವ ಶ್ರಮ ಫಲಕೊಟ್ಟಿದೆ. ಭಾರತ ಇದೀಗ ಅಖಂಡತೆಯ ಕೃಷಿ ಪ್ರಧಾನ ದೇಶವಾಗಿದೆ. ನಮ್ಮೊಂದಿಗೆ ಎದುರಿಸುವ ಯಾವುದೇ ಶಕ್ತಿಯೊಂದಿಗೆ ರಾಜಿ ಬೇಡ ಎಂದು ರಾಜ್ಯಸಭಾ ಸದಸ್ಯ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದರು.
ಮಯೂರಿ ಫೌಂಡೇಷನ್ ಆಶ್ರಯದಲ್ಲಿ ಮುಲ್ಕಿಯ ಬಪ್ಪನಾಡು ದೇವಸ್ಥಾನದ ಮುಂಭಾಗ ನಡೆದ ಸಾಮ್ರಾಟ್ ಅಶೋಕ ಚಕ್ರವರ್ತಿ ಜನ್ಮದಿನೋತ್ಸವ ಪ್ರಯುಕ್ತ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಮ್ರಾಟ್ ಅಶೋಕ ಚಕ್ರವರ್ತಿ ಭಾರತದ ರಾಜರಲ್ಲಿಯೇ ಮಹಾನ್ ವ್ಯಕ್ತಿಯಾಗಿದ್ದಾನೆ. ಕೇಂದ್ರ ಸರ್ಕಾರ ಸಾಮ್ರಾಟ್ ಅಶೋಕನ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಸೇರಿಸುವ ಕಾರ್ಯ ಆಗಬೇಕು ಎಂದು ಹೇಳಿದರು.
ಕಾಶ್ಮೀರದ ಕಣ ಕಣದಲ್ಲಿ ನಮ್ಮ ದೇಶ, ಸಂಸ್ಕೃತಿಯ ಸತ್ವ ತುಂಬಿದೆ. ಕಾಶ್ಮೀರದ ರಕ್ಷಣೆ ನಮೆಲ್ಲರ ಜವಾಬ್ದಾರಿ. ಭಾರತವನ್ನು ಅಖಂಡತೆ, ಏಕತೆಯ ಮಾರ್ಗದ ಮೂಲಕ ಬಲಿಷ್ಠವಾಗಿ ಕಟ್ಟಿ ಬೆಳೆಸಬೇಕು. ಈ ಆದರ್ಶವನ್ನು ಪಾಲಿಸುವ ಅಗತ್ಯತೆ ಈಗ ಇದೆ ಎಂದು ಡಾ.ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದರು.
ಇದನ್ನೂ ಓದಿ: ಸಚಿವ ಈಶ್ವರಪ್ಪ ರಾಜೀನಾಮೆಗೂ ಮುನ್ನವೇ ತಮ್ಮ ಇಲಾಖೆಯ 29 PDOಗಳ ವರ್ಗಾವಣೆ!