ETV Bharat / city

ದಿನ ಬಿಟ್ಟು ದಿನ ರಸ್ತೆ ಬದಿ ಸ್ಥಳವಿದ್ದಲ್ಲಿ ಮಾತ್ರ ಪಾರ್ಕಿಂಗ್ : ಪುತ್ತೂರು ನಗರ ಸಭೆಯಿಂದ ಹೊಸ ಪ್ರಯೋಗ

ನಗರಸಭೆ ಅಧ್ಯಕ್ಷ ಜೀವಂಧರ ಜೈನ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಗರಸಭೆಯಲ್ಲಿ ನಡೆದ ಸಭೆಯೊಳಗೆ ಈ ಬಗ್ಗೆ ನಿರ್ಧರಿಸಲಾಯಿತು. ಪೊಲೀಸ್ ಇಲಾಖೆ, ಸಂಚಾರ ಪೊಲೀಸ್, ಸಾರಿಗೆ ಪ್ರಾಧಿಕಾರ, ನಗರ ಯೋಜನಾ ಪ್ರಾಧಿಕಾರ ಮತ್ತು ನಗರಸಭೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು..

author img

By

Published : Sep 27, 2021, 8:45 PM IST

Puttur
ಪಾರ್ಕಿಂಗ್ ಸಮಸ್ಯೆ ಬಗೆ ಹರಿಸಲು ಪುತ್ತೂರು ನಗರಸಭೆಯಿಂದ ಹೊಸ ಪ್ರಯೋಗ

ಪುತ್ತೂರು : ನಗರ ಪ್ರದೇಶಗಳು ಬೆಳೆಯುತ್ತಿದ್ದಂತೆ ಪಾರ್ಕಿಂಗ್ ಸಮಸ್ಯೆಗಳು ಉಂಟಾಗುತ್ತಿವೆ. ಬದಲಿ ದಿನ ಬಿಟ್ಟು ದಿನ ಪಾರ್ಕಿಂಗ್ ವ್ಯವಸ್ಥೆಯನ್ನು ಅಳವಡಿಸುವ ಹೊಸ ಪ್ರಯೋಗವನ್ನು ಪುತ್ತೂರು ನಗರಸಭೆ ಕೈಗೊಂಡಿದೆ.

ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಪುತ್ತೂರು ನಗರಸಭೆಯಿಂದ ಹೊಸ ಪ್ರಯೋಗ..

ಈ ಕುರಿತು ನಗರಸಭೆ ಇಂಜಿನಿಯರ್, ಪುಡಾ ಇಂಜಿನಿಯರ್, ಸಂಚಾರ ಪೊಲೀಸರು ಜಂಟಿಯಾಗಿ ಸಮೀಕ್ಷೆ ನಡೆಸಿ ನಿರ್ಧಾರ ಕೈಗೊಳ್ಳುವ ಕುರಿತು ನಗರಸಭೆ ಸಂಚಾರ ಸಮಸ್ಯೆಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.

ನಗರಸಭೆ ಅಧ್ಯಕ್ಷ ಜೀವಂಧರ ಜೈನ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಗರಸಭೆಯಲ್ಲಿ ನಡೆದ ಸಭೆಯೊಳಗೆ ಈ ಬಗ್ಗೆ ನಿರ್ಧರಿಸಲಾಯಿತು. ಪೊಲೀಸ್ ಇಲಾಖೆ, ಸಂಚಾರ ಪೊಲೀಸ್, ಸಾರಿಗೆ ಪ್ರಾಧಿಕಾರ, ನಗರ ಯೋಜನಾ ಪ್ರಾಧಿಕಾರ ಮತ್ತು ನಗರಸಭೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.

ನಗರಸಭೆ ಸ್ಥಾಯಿ ಸಮಿತಿ ಉಪಾಧ್ಯಕ್ಷೆ ಗೌರಿ ಬನ್ನೂರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪೌರಾಯುಕ್ತ ಮಧು ಎಸ್. ಮನೋಹರ್, ಡಿವೈಎಸ್​ಪಿ ಡಾ. ಗಾನ ಪಿ ಕುಮಾರ್, ನಗರ ಪೊಲೀಸ್ ಠಾಣೆ ಎಸ್ ಐ ಸುತೇಶ್, ಸಂಚಾರ ಪೊಲೀಸ್ ಠಾಣೆ ಎಸ್‌ಐ ರಾಮ ನಾಯ್ಕ್, ಪುಡಾ ಕಾರ್ಯದರ್ಶಿ ಅಭಿಲಾಷ್, ಜಲಸಿರಿ ಕಾರ್ಯಪಾಲಕ ಇಂಜಿನಿಯರ್ ಮಾಂತೇಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಗೌಡ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.