ETV Bharat / city

ಸತ್ಯಕ್ಕೆ ದೂರವಾದ ವಿಚಾರಗಳು ಪ್ರಸಾರವಾಗುತ್ತಿವೆ.. ಮಾಧ್ಯಮಗಳ ಬಗ್ಗೆ ಪೊಲೀಸ್ ಆಯುಕ್ತರ ಖೇದ

ಬಹಳಷ್ಟು ಪ್ರಕರಣಗಳಲ್ಲಿ ನಮಗೇ ಅದರ ವಿಚಾರಗಳು ತಿಳಿದಿರೋದಿಲ್ಲ. ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕವೇ ನಮಗೆ ತಿಳಿದು ಬರುತ್ತದೆ. ಅಧಿಕಾರಿಗಳ ವರ್ಗಾವಣೆಯ ಬಗ್ಗೆ ಸುದ್ದಿಗಳು ಪ್ರಸಾರವಾಗುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಅಧಿಕಾರಿಗಳ ಮೇಲೆ ಯಾವುದೇ ಒತ್ತಡವಿಲ್ಲ. ಈ ಬಗ್ಗೆ ಸುದ್ದಿ ಮಾಧ್ಯಮಗಳು ನಮ್ಮಲ್ಲಿ ಕೇಳಲಿ ಅದರ ಬಗ್ಗೆ ಸ್ಪಷ್ಟನೆ ನೀಡುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದರು.

police-commissioner-vikas-kumar-talk-about-fake-media-news
ಸತ್ಯಕ್ಕೆ ದೂರವಾದ ವಿಚಾರಗಳು ಪ್ರಸಾರವಾಗುತ್ತಿದೆ, ಮಾಧ್ಯಮಗಳ ಬಗ್ಗೆ ಪೊಲೀಸ್ ಆಯುಕ್ತರು ಖೇದ
author img

By

Published : Oct 3, 2020, 5:45 PM IST

ಮಂಗಳೂರು: ಸತ್ಯಕ್ಕೆ ದೂರವಾದ ವಿಚಾರಗಳು ಕೆಲವೊಂದು ಪತ್ರಿಕೆ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಬಹಳ ಖಚಿತವೆನಿಸುವ ರೀತಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಖೇದ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಸುದ್ದಿಯನ್ನು ಪ್ರಕಟ ಅಥವಾ ಪ್ರಸಾರ ಮಾಡುವ ಮೊದಲು ನಮ್ಮಲ್ಲಿ ಕೇಳಿ ಖಚಿತಪಡಿಸಿಕೊಳ್ಳಿ. ಯಾವುದೇ ಸುದ್ದಿಯೂ ನಮ್ಮ ವ್ಯಾಪ್ತಿಯಲ್ಲಿ ಕೊಡಲು ಸಾಧ್ಯವಿದ್ದಲ್ಲಿ ಖಂಡಿತಾ ಅದನ್ನು ಮುಕ್ತವಾಗಿ ನೀಡುತ್ತೇವೆ ಎಂದು ಹೇಳಿದರು.

ಬಹಳಷ್ಟು ಪ್ರಕರಣಗಳಲ್ಲಿ ನಮಗೇ ಅದರ ವಿಚಾರಗಳು ತಿಳಿದಿರೋದಿಲ್ಲ. ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕವೇ ನಮಗೆ ತಿಳಿದು ಬರುತ್ತದೆ. ಅಧಿಕಾರಿಗಳ ವರ್ಗಾವಣೆಯ ಬಗ್ಗೆ ಸುದ್ದಿಗಳು ಪ್ರಸಾರವಾಗುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಅಧಿಕಾರಿಗಳ ಮೇಲೆ ಯಾವುದೇ ಒತ್ತಡವಿಲ್ಲ. ಈ ಬಗ್ಗೆ ಸುದ್ದಿ ಮಾಧ್ಯಮಗಳು ನಮ್ಮಲ್ಲಿ ಕೇಳಲಿ ಅದರ ಬಗ್ಗೆ ಸ್ಪಷ್ಟನೆ ನೀಡುತ್ತೇವೆ. ಅದನ್ನ ಬಿಟ್ಟು ಖಚಿತವಾದ ರೀತಿಯಲ್ಲಿ ಸತ್ಯಕ್ಕೆ ದೂರವಾದ ವಿಚಾರಗಳನ್ನು ಪ್ರಚಾರ ಮಾಡಬೇಡಿ ಎಂದು ಅವರು ಮನವಿ ಮಾಡಿದರು.

ಸತ್ಯಕ್ಕೆ ದೂರವಾದ ವಿಚಾರಗಳು ಪ್ರಸಾರವಾಗುತ್ತಿದೆ, ಮಾಧ್ಯಮಗಳ ಬಗ್ಗೆ ಪೊಲೀಸ್ ಆಯುಕ್ತರು ಖೇದ

ಡ್ರಗ್ಸ್ ಪ್ರಕರಣದಲ್ಲಿ‌ ಕೊನೆಯ ಕೊಂಡಿಯವರೆಗೂ ಕೂಲಂಕಷವಾಗಿ ತನಿಖೆ ನಡೆಯುತ್ತದೆ:

ಡ್ರಗ್ಸ್ ಪ್ರಕರಣದಲ್ಲಿ ತನಿಖೆ ಮುಂದುವರಿಯುತ್ತಿದ್ದು, ಒಂದಕ್ಕೊಂದು ಲಿಂಕ್ ಗಳು ಕಂಡು ಬರುತ್ತಿದೆ. ಖಂಡಿತವಾಗಿಯೂ ಕೊನೆಯ ಕೊಂಡಿಯವರೆಗೂ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದೇವೆ. ಈಗಾಗಲೇ ಆರು ಜನ ಅಪರಾಧಿಗಳನ್ನು ಬಂಧಿಸಲಾಗಿದ್ದು, ಇವರನ್ನು ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ. ಪ್ರತಿದಿನವೂ ತನಿಖೆ ನಡೆಯುವಾಗ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಅವಶ್ಯಕತೆ ಇದೆ ಅನಿಸಿದ್ದಲ್ಲಿ ನೋಟಿಸ್ ಜಾರಿಗೊಳಿಸುತ್ತೇವೆ ಎಂದು ಹೇಳಿದರು.

ಟ್ರಾಫಿಕ್ ಸ್ಮಾರ್ಟ್ ಆಗದೆ ಸಿಟಿ ಕೂಡಾ ಸ್ಮಾರ್ಟ್ ಆಗಲು ಸಾಧ್ಯವಿಲ್ಲ:

ಮಂಗಳೂರು ಸ್ಮಾರ್ಟ್ ಸಿಟಿಯಾಗುತ್ತಿರುವ ಕಾರಣ ಪಾರ್ಕಿಂಗ್ ಕೂಡಾ ಸ್ಮಾರ್ಟ್ ಆಗಬೇಕಾಗಿದೆ. ಟ್ರಾಫಿಕ್ ಸ್ಮಾರ್ಟ್ ಆಗದೆ ಸಿಟಿ ಕೂಡಾ ಸ್ಮಾರ್ಟ್ ಆಗಲು ಸಾಧ್ಯವಿಲ್ಲ. ಪ್ರತೀ ವರ್ಷ ವಾಹನಗಳ ಸಂಖ್ಯೆ ಕೂಡಾ ಅಧಿಕವಾಗುತ್ತಿದೆ. ನಗರ ಸುಂದರವಾಗಿ ಕಾಣಬೇಕಾದಲ್ಲಿ ಟ್ರಾಫಿಕ್ ನಿಯಮ ಕೂಡಾ ಸ್ವಲ್ಪ ಕಠಿಣ ಆಗಲೇ ಬೇಕು. ಇದೀಗ ನಾವು ನೂತನ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.