ETV Bharat / city

11E ಅರ್ಜಿ ವಿಲೇವಾರಿಗೆ ಅಧಿಕಾರಿಗಳ ವಿಳಂಬ ಧೋರಣೆ: ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿದ ಅರ್ಜಿದಾರ

ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಧರ್ಮಪಾಲ ಎಂಬವರು 156/1ಡಿ8 ಸರ್ವೆ ನಂಬರ್​​​ನ​ 2.31 ಎಕರೆ ಜಾಗದ 11E ನಕ್ಷೆ ತಯಾರಿಸಲು 17/03/2020 ರಂದು ಅರ್ಜಿ ಸಲ್ಲಿಸಿ ಹಣ ಪಾವತಿಸಿದ್ದರು. ಬಳಿಕ ಕಡಬ ಗ್ರಾಮಕರಣಿಕರ ಕಚೇರಿಗೆ ಅರ್ಜಿದಾರರು ಹಲವಾರು ಬಾರಿ ಬಂದು ವಿಚಾರಿಸಿದರೂ ಯಾವುದೇ ಸ್ಪಂದನೆ ಸಿಗಲಿಲ್ಲ. ಇದರಿಂದಾಗಿ ನೊಂದ ಅರ್ಜಿದಾರರು ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿ ಮನವಿ ಸಲ್ಲಿಸಿದ್ದರು.

author img

By

Published : Aug 11, 2021, 11:04 PM IST

Kadaba
ಅರ್ಜಿದಾರ ಧರ್ಮಪಾಲ

ಕಡಬ: ಸುಮಾರು 16 ತಿಂಗಳು ಕಳೆದರೂ ಅರ್ಜಿದಾರರೊಬ್ಬರು ನೀಡಿದ 11E ಅರ್ಜಿಯನ್ನು ಕಚೇರಿಯಲ್ಲಿಟ್ಟುಕೊಂಡು ಅರ್ಜಿಗೆ ಸಂಬಂಧಿಸಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಅರ್ಜಿದಾರರು ಪ್ರಧಾನಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದು, ಪರಿಣಾಮ ಅರ್ಜಿಯನ್ನು ತ್ವರಿತಗತಿಯಲ್ಲಿ ವಿಲೇವಾರಿ ನಡೆಸಿ ವರದಿ ನೀಡುವಂತೆ ಪ್ರಧಾನಿ ಕಾರ್ಯಾಲಯದಿಂದ ಸೂಚನೆ ಬಂದಿದೆ.

ಈ ಹಿನ್ನಲೆ ರಾಜ್ಯ ಮುಖ್ಯ ಕಾರ್ಯದರ್ಶಿಗಳು ದ.ಕ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಜಿಲ್ಲಾಧಿಕಾರಿ ಕಡಬ ತಹಶೀಲ್ದಾರ್​​ಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ದ.ಕ ಜಿಲ್ಲೆಯ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಧರ್ಮಪಾಲ ಎಂಬವರು 156/1ಡಿ8 ಸರ್ವೆ ನಂಬರ್​​​​​​ನ 2.31 ಎಕರೆ ಜಾಗದ 11E ನಕ್ಷೆ ತಯಾರಿಸಲು 17/03/2020 ರಂದು ಅರ್ಜಿ ಸಲ್ಲಿಸಿ ಹಣವನ್ನು ಪಾವತಿಸಿದ್ದರು. ಬಳಿಕ ಕಡಬ ಗ್ರಾಮಕರಣಿಕರ ಕಚೇರಿಗೆ ಅರ್ಜಿದಾರರು ಹಲವಾರು ಬಾರಿ ಬಂದು ವಿಚಾರಿಸಿದರೂ ಯಾವುದೇ ಸ್ಪಂದನೆ ಸಿಗಲಿಲ್ಲ ಎನ್ನಲಾಗಿದೆ.

complaint copy
ದೂರು ಪ್ರತಿ

ಇದರಿಂದಾಗಿ ನೊಂದ ಅರ್ಜಿದಾರರು ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಸೂಚಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ದ.ಕ ಜಿಲ್ಲಾಧಿಕಾರಿಗಳ ಮೂಲಕ ತಕ್ಷಣ ವಿಲೇವಾರಿ ಮಾಡಿ ವರದಿ ನೀಡುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡ ಎಲ್ಲಾ ಪತ್ರಗಳು ಪ್ರಧಾನಿ ಕಾರ್ಯಾಲಯದಿಂದ ಅರ್ಜಿದಾರರಿಗೆ ತಲುಪಿಸಲಾಗಿದೆ.

complaint copy
ದೂರು ಪ್ರತಿ

ಈ ಬಗ್ಗೆ ನನಗೆ ಜಿಲ್ಲಾಧಿಕಾರಿ ಕಚೇರಿಯಿಂದ ಯಾವುದೇ ಪತ್ರಗಳು ಬಂದಿಲ್ಲ. ಘಟನೆಯ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದು ಕಡಬ ತಹಶೀಲ್ದಾರ್ ಅನಂತ ಶಂಕರ್ ಅವರು ಹೇಳಿದ್ದಾರೆ.

complaint copy
ದೂರು ಪ್ರತಿ

ಈ ಬಗ್ಗೆ ಮಾತಾಡಿದ ಅರ್ಜಿದಾರ ಧರ್ಮಪಾಲ ಅವರು, ಕಡಬ ಗ್ರಾಮಕರಣಿಕರ ಕಚೇರಿಗೆ ಅಲೆದಾಟ ನಡೆಸಿ ಸಾಕಾಗಿದೆ. ಈ ಬಗ್ಗೆ ದಾಖಲೆ ಸಮೇತ ನಾನು 17-03-2020ರಂದು ಅರ್ಜಿ ಸಲ್ಲಿಸಿದ್ದು, ಅದರ ಬಳಿಕ ಹಲವಾರು ಬಾರಿ ಗ್ರಾಮ ಕರಣಿಕರ ಕಚೇರಿಗೆ ಅಲೆದಾಟ ನಡೆಸಿದ್ದೇನೆ. ಇದರಿಂದ ಮಾನಸಿಕವಾಗಿ ನೊಂದ ನಾನು ಪ್ರಧಾನಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದೆ. ಇದೀಗ ಪ್ರಧಾನಿ ಕಾರ್ಯಾಲಯದಿಂದ ಅರ್ಜಿಯ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿ ಅಧಿಕಾರಿಗಳಿಗೆ ಕಳುಹಿಸಲಾದ ಪತ್ರಗಳ ಪ್ರತಿ ನನಗೆ ಕೈ ಸೇರಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.