ಮಂಗಳೂರು: ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಇಂದು ಮತ್ತು ಮೇ 19 ರಂದು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಮತ್ತು ನಾಳೆ (ಮೇ 18 ) ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ನಿನ್ನೆ ಸಂಜೆವರೆಗೆ ಮೋಡ ಕವಿದ ವಾತವರಣವಿದ್ದು ಸಂಜೆಯ ಬಳಿಕ ಭಾರಿ ಮಳೆಯಾಗಿತ್ತು.
ಮಳೆಯಿಂದ ಜಿಲ್ಲೆಯಲ್ಲಿ ಜನಸಂಚಾರ ಅಸ್ತವ್ಯಸ್ತವಾಗಿದ್ದು, ಮಾತ್ರವಲ್ಲದೇ, ನಿನ್ನೆ(ಸೋಮವಾರ) ವಿಮಾನ ಸಂಚಾರಕ್ಕೂ ಸಮಸ್ಯೆಯಾಗಿತ್ತು. ನಿನ್ನೆ ಸಂಜೆ ಲ್ಯಾಂಡ್ ಆಗಬೇಕಿದ್ದ ಹುಬ್ಬಳ್ಳಿ, ಬೆಂಗಳೂರು ಮತ್ತು ಮಸ್ಕತ್ ನಿಂದ ಬರಬೇಕಿದ್ದ ವಿಮಾನ ಇಳಿಯಲು ಸಾಧ್ಯವಾಗಿರಲಿಲ್ಲ. ರಾತ್ರಿ ಸಹಜ ಸ್ಥಿತಿಗೆ ಬಂದ ಬಳಿಕ ಈ ವಿಮಾನಗಳು ಮಂಗಳೂರಿನಲ್ಲಿ ಇಳಿದಿದ್ದವು. ಇಂದು ವಿಮಾನ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿದೆ. ಇಂದು ಜಿಲ್ಲೆಯಲ್ಲಿ ಅಲ್ಲಲ್ಲಿ ಸಣ್ಣಮಟ್ಟಿನ ಮಳೆಯಾಗಿದೆ. ನಗರದಲ್ಲಿ ಪೂರ್ತಿ ಮೋಡಕವಿದ ವಾತವರಣವಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದು, ನಾಳೆ ಭಾರಿ ಮಳೆ: ಆರೆಂಜ್ ಅಲರ್ಟ್ ಘೋಷಣೆ