ಭಟ್ಕಳ: ಪುರಸಭಾ ಘನತ್ಯಾಜ್ಯ ಘಟಕದಲ್ಲಿ ಸ್ಥಳ ಪರಿಶೀಲನೆ ವೇಳೆ ಹಂದಿಗಳು ಅಧಿಕಾರಿ ಹಾಗೂ ಸಾರ್ವಜನಿಕರ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.
ಸಾಗರ ರಸ್ತೆಯಲ್ಲಿನ ಪುರಸಭೆ ಘನತ್ಯಾಜ್ಯ ಘಟಕದಲ್ಲಿ ಪುರಸಭೆ ಅಧಿಕಾರಿಗಳು, ಪೊಲೀಸರು ಹಾಗೂ ತಹಶೀಲ್ದಾರ್ ವಿ.ಪಿ.ಕೊಟ್ರಳ್ಳಿ ಸ್ಥಳ ಪರಿಶೀಲನೆ ಮುಗಿಸಿದ್ದಾರೆ. ನಂತರ ವಾಪಸ್ ಬರುವ ವೇಳೆ ಘಟಕದ ಕಸದ ರಾಶಿಯಲ್ಲಿದ್ದ ಕಾಡುಹಂದಿಗಳ ಗುಂಪು ಏಕಾಏಕಿ ಎಲ್ಲರ ಮೇಲೂ ದಾಳಿ ನಡೆಸಿದೆ. ಅದೃಷ್ಟವಶಾತ್ ಹಂದಿ ದಾಳಿಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.