ಮಂಗಳೂರು : ಮಂಗಳೂರಿನ ಪಿಲಿಕುಳ ಮೃಗಾಲಯಕ್ಕೆ (Pilikula Biological Park in Mangalore) ವಿನಿಮಯದ ಮೂಲಕ ಮೂರು ಹೊಸ ಅತಿಥಿಗಳು ಬಂದಿದ್ದಾರೆ.
ಬರಿಂಕ, ದೊಡ್ಡ ಬೆಳ್ಳಕ್ಕಿ, ನೀರು ಹಕ್ಕಿಗಳನ್ನು ಇಲ್ಲಿಗೆ ತರಲಾಗಿದೆ. ನಾಲ್ಕು ಬರಿಂಕ, ಆರು ದೊಡ್ಡ ಬೆಳ್ಳಕ್ಕಿ ಮತ್ತು ಎರಡು ನೀರು ಹಕ್ಕಿಗಳನ್ನು ತರಲಾಗಿದೆ. ಇವುಗಳು ವೀಕ್ಷಣೆಗೆ ಲಭ್ಯವಿದೆ. ಇವುಗಳನ್ನು ಹೈದರಾಬಾದ್ ಮೃಗಾಲಯ(Hyderabad Zoo)ದಿಂದ ಇಲ್ಲಿಗೆ ತರಲಾಗಿದೆ.
ಮಂಗಳೂರಿಗೆ ಆಗಮಿಸಿದ ಪ್ರಾಣಿ-ಪಕ್ಷಿಗಳ ವಿನಿಮಯವಾಗಿ ಪಿಲಿಕುಳ ಜೈವಿಕ ಉದ್ಯಾನವನದಿಂದ ನಾಲ್ಕು ಕಾಡು ನಾಯಿ, ನಾಲ್ಕು ಹೆಬ್ಬಾವು ಮತ್ತು ನಾಲ್ಕು ವಿಟೇಕರ್ಸ್ ಹಾವು ಅನ್ನು ಹೈದರಾಬಾದ್ ಮೃಗಾಲಯಕ್ಕೆ ನೀಡಲಾಗಿದೆ.