ಮಂಗಳೂರು: ಕ್ರಿಕೆಟ್ ಟೀಮ್ಗಳು ಉಳಿಯಬೇಕಾದರೆ ಕ್ರಿಕೆಟ್ನಲ್ಲಿರುವ ಎಲ್ಲಾ ಮಾದರಿಗಳಲ್ಲೂ ಪರಿಣಿತಿ ಪಡೆಯುವುದು ಅಗತ್ಯ ಎಂದು ಕ್ರಿಕೆಟ್ನ ಗೋಡೆ ಎಂದೆ ಪ್ರಸಿದ್ಧಿ ಹೊಂದಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ನಗರದ ಟಿಎಂಎ ಪೈ ಕನ್ವೆಷನ್ ಹಾಲ್ನಲ್ಲಿ ಮಣಿಪಾಲ ಆಸ್ಪತ್ರೆಗಳ ರಾಯಭಾರಿಯಾಗಿ ಮಣಿಪಾಲ ಆರೋಗ್ಯ ಕಾರ್ಡ್‌ನ ಬಿಡುಗಡೆ ಮಾಡಿ ಮಾತನಾಡಿದ ಅವರು, ಭಾರತದ ಕ್ರಿಕೆಟ್ ತಂಡ ಕಳೆದ ಎರಡು ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ತಂಡದ ಆಟಗಾರರೂ ಫಾರ್ಮ್ನಲ್ಲಿ ಇದ್ದಾರೆ. ಇದು ವಿಶ್ವಕಪ್ಗೆ ಪೂರಕವಾಗಲಿದೆ. ಬರುವ ವರ್ಲ್ಡ್‌ಕಪ್‌ನಲ್ಲಿ ಭಾರತದ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದ ಆಟಗಾರ ಕೆ.ಎಲ್.ರಾಹುಲ್ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆತ ವಿಶೇಷ ಆಟಗಾರ. ಆತನ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಅವನು ಕ್ರಿಕೆಟ್ ಎಲ್ಲಾ ಮಾದರಿಗಳಲ್ಲಿ ತನ್ನ ಸಾಧನೆ ತೋರಿದ್ದಾನೆ. ಭಾರತ ತಂಡಕ್ಕೆ ಸೇರ್ಪಡೆಗೊಂಡ ಬಳಿಕ ಆತನ ನಿರ್ವಹಣೆ ಸಾಕಷ್ಟು ಉತ್ತಮವಾಗಿದೆ. ಅಲ್ಲದೆ ಕಳೆದ ಎರಡು ವರ್ಷಗಳಲ್ಲಿ ಆತನ ಆಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ ಎಂದು ಹೇಳಿದರು.
ಬಳಿಕ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಬ್ಯಾಟ್ಗೆ ಸಹಿ ಹಾಕಿ ಮಕ್ಕಳ ಜೊತೆ ಕ್ರಿಕೆಟ್ ಆಡಿ ಸಂಭ್ರಮಿಸಿದರು.