ETV Bharat / city

ತುಳುನಾಡಿಗೆ ಮೈಸೂರು ಸಂಸ್ಕೃತಿ ಪರಿಚಯಿಸಲು ಮುಂದಾದ ನಮ್ಮವರು ಸಂಘಟನೆ - ಶ್ರೀಕೃಷ್ಣ

ದಸರಾ ಹಬ್ಬದ ಸಂದರ್ಭ ಮೈಸೂರು ಭಾಗದಲ್ಲಿ ದಸರಾ ಗೊಂಬೆಗಳನ್ನು ಮನೆಯಲ್ಲಿಟ್ಟು ಆರಾಧಿಸುವುದು ಸಾಮಾನ್ಯ. ಆದರೆ ಈ ಸಂಸ್ಕೃತಿ ಇದೀಗ ಕರಾವಳಿ ಜಿಲ್ಲೆಯಲ್ಲೂ ಸಹ ಕಾಣಿಸಿಕೊಂಡಿದ್ದು, ನಮ್ಮವರು ಎಂಬ ಸಂಘಟನೆ ಕಳೆದ ಕೆಲವು ವರ್ಷಗಳಿಂದ ಈ ಸಂಪ್ರದಾಯವನ್ನು ಅನುಸರಿಸಿಕೊಂಡು ಬರುತ್ತಿದೆ.

ಮಂಗಳೂರಿನಲ್ಲಿ‌ ಗೊಂಬೆ ಪ್ರದರ್ಶನ
author img

By

Published : Oct 3, 2019, 11:43 PM IST

ಮಂಗಳೂರು: ದಸರಾ ಹಬ್ಬದ ಸಂದರ್ಭ ಮೈಸೂರು ಭಾಗದಲ್ಲಿ ದಸರಾ ಗೊಂಬೆಗಳನ್ನು ಮನೆಯಲ್ಲಿಟ್ಟು ಆರಾಧಿಸುವುದು ಸಾಮಾನ್ಯ. ಆದರೆ ಈ ಸಂಸ್ಕೃತಿ ಇದೀಗ ಕರಾವಳಿ ಜಿಲ್ಲೆಯಲ್ಲೂ ಸಹ ಕಾಣಿಸಿಕೊಂಡಿದ್ದು, ನಮ್ಮವರು ಎಂಬ ಸಂಘಟನೆ ಕಳೆದ ಕೆಲವು ವರ್ಷಗಳಿಂದ ಈ ಸಂಪ್ರದಾಯವನ್ನು ಅನುಸರಿಸಿಕೊಂಡು ಬರುತ್ತಿದೆ.

ಮಂಗಳೂರಿನಲ್ಲಿ‌ ಗೊಂಬೆ ಪ್ರದರ್ಶನ

ಹೌದು, ಮಂಗಳೂರಿನಲ್ಲಿ ವಾಸವಾಗಿರುವ ಹಳೆ ಮೈಸೂರಿನ ಜನರು ಸೇರಿ 'ವಿಪ್ರಕೂಟ ನಮ್ಮವರು' ಎಂಬ ಸಂಘಟನೆಯನ್ನು ಕಟ್ಟಿಕೊಂಡು ದಸರಾ ಸಂದರ್ಭದಲ್ಲಿ ಮಂಗಳೂರಿನಲ್ಲಿ‌ ಗೊಂಬೆ ಪ್ರದರ್ಶನ ಮಾಡುವ ಮೂಲಕ ಮೈಸೂರಿನ ಸಂಸ್ಕೃತಿಯನ್ನು ತುಳುನಾಡಿನವರಿಗೆ ಪರಿಚಯಿಸುತ್ತಿದ್ದಾರೆ.

ಕಳೆದ ಒಂದು ದಶಕಗಳಿಂದ ನಮ್ಮವರು ಸಂಘಟನೆ ದಸರಾ ಗೊಂಬೆ ಪ್ರದರ್ಶನ ಮಾಡುತ್ತಿದ್ದು, ಈ ಬಾರಿ ಜಿಲ್ಲೆಯ ಶರಣು ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಈ ದಸರಾ ಗೊಂಬೆ ಪ್ರದರ್ಶನ ನಡೆಯುತ್ತಿದೆ. ಪ್ರತಿ ವರ್ಷವೂ ವಿಶೇಷ ವಿಷಯದೊಂದಿಗೆ ಗೊಂಬೆ ಪ್ರದರ್ಶನ ಏರ್ಪಡಿಸಲಾಗುತ್ತಿದ್ದು, ಜನರು ತಂಡೋಪತಂಡವಾಗಿ ಬಂದು ಪ್ರದರ್ಶನ ವೀಕ್ಷಿಸುತ್ತಿದ್ದಾರೆ.

ಈ ಬಾರಿ ಶ್ರೀಕೃಷ್ಣನ ಗೊಂಬೆಗಳಿಗೆ ಪ್ರಾಧಾನ್ಯತೆ ನೀಡಲಾಗಿದ್ದು, ದಸರಾ ಗೊಂಬೆ ಪ್ರದರ್ಶನದಲ್ಲಿ ಸಾವಿರಕ್ಕೂ ಅಧಿಕ ಗೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ. ಈ ಪ್ರದರ್ಶನದ ಮೂಲಕ ಮೈಸೂರಿನ ಶ್ರೀಮಂತ ಪರಂಪರೆಯನ್ನು ಕರಾವಳಿಗರಿಗೆ ಪರಿಚಯಿಸುತ್ತಿದ್ದು, ಸ್ಥಳೀಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Intro:ಮಂಗಳೂರು: ದಸರ ಹಬ್ಬದ ಸಂದರ್ಭದಲ್ಲಿ ಮೈಸೂರು ಭಾಗದಲ್ಲಿ ದಸರ ಗೊಂಬೆಗಳನ್ನು ಮನೆ ಮನೆಯಲ್ಲಿಟ್ಟು ಆರಾಧಿಸುವುದು ಸಾಮಾನ್ಯ. ಆದರೆ ಈ ಸಂಸ್ಕೃತಿ ಕರಾವಳಿ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ಮೈಸೂರು ಭಾಗದ ಸಂಸ್ಕೃತಿ ಯನ್ನು ನಮ್ಮವರು ಎಂಬ ಸಂಘಟನೆ ಕಳೆದ ಕೆಲವು ವರ್ಷಗಳಿಂದ ಮಂಗಳೂರಿನಲ್ಲಿ ಪರಿಚಯಿಸುತ್ತಾ ಬಂದಿದೆ.

Body:ಮಂಗಳೂರಿನಲ್ಲಿ ವಾಸವಾಗಿರುವ ಹಳೆ ಮೈಸೂರಿನ ವಿಪ್ರಕೂಟ ನಮ್ಮವರು ಎಂಬ ಸಂಘಟನೆಯನ್ನು ಕಟ್ಟಿಕೊಂಡು ಈ ಒಂದು ವಿಶಿಷ್ಟ ಪ್ರಯತ್ನ ಮಾಡುತ್ತಿದೆ. ದಸರ ಸಂದರ್ಭದಲ್ಲಿ ಮಂಗಳೂರಿನಲ್ಲಿ‌ ದಸರ ಗೊಂಬೆ ಪ್ರದರ್ಶನ ಮಾಡುವ ಮೈಸೂರಿನ ಸಂಸ್ಕೃತಿಯನ್ನು ತುಳುವರಿಗೆ ಪರಿಚಯಿಸುತ್ತಿದೆ.
ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ದಸರ ಗೊಂಬೆ ಪ್ರದರ್ಶನ ನಡೆಯುತ್ತಿದ್ದು ಮಂಗಳೂರು ಜನತೆ ತಮಗೆ ಅಪರಿಚಿತವಾಗಿರುವ ದಸರ ಗೊಂಬೆ ಪ್ರದರ್ಶನ ವೀಕ್ಷಿಸಲು ಬರುತ್ತಿದ್ದಾರೆ.

ಕಳೆದ ಒಂದು ದಶಕಗಳಿಂದ ನಮ್ಮವರು ಸಂಘಟನೆ ದಸರ ಗೊಂಬೆ ಪ್ರದರ್ಶನ ಮಾಡುತ್ತಿದ್ದು ಪ್ರತಿವರ್ಷ ವಿಶೇಷ ವಿಷಯದೊಂದಿಗೆ ದಸರ ಗೊಂಬೆ ಪ್ರದರ್ಶನ ಏರ್ಪಡಿಸುತ್ತಿದೆ. ಈ ಬಾರಿ ಶ್ರೀಕೃಷ್ಣನ ಗೊಂಬೆಗಳಿಗೆ ಪ್ರಾಧಾನ್ಯತೆ ನೀಡಿ ದಸರ ಗೊಂಬೆ‌ಪ್ರದರ್ಶನ ಮಾಡುತ್ತಿದೆ.
ಮಂಗಳೂರಿನಲ್ಲಿ ನಡೆಯುವ ಈ ದಸರ ಗೊಂಬೆ ಪ್ರದರ್ಶನದಲ್ಲಿ ಸಾವಿರಕ್ಕೂ ಅಧಿಕ ಗೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ.ಈ ಪ್ರದರ್ಶನದ ಮೂಲಕ ಮೈಸೂರಿನ ಶ್ರೀಮಂತ ಪರಂಪರೆಯನ್ನು ಕರಾವಳಿಗರಿಗೆ ನಮ್ಮವರು ಪರಿಚಯಿಸಿದ್ದು ಕರಾವಳಿಗರು ದಸರ ಗೊಂಬೆ ವೀಕ್ಷಣೆ ಮಾಡುವ ಮೂಲಕ ಖುಷಿಪಡುತ್ತಿದ್ದಾರೆ.

ಬೈಟ್-ಶ್ರೀಧರ ಶಾಸ್ತ್ರೀ, ಸ್ಥಾಪಕ ಸದಸ್ಯ, ನಮ್ಮವರು

ಬೈಟ್- ಮಮತಾ, ನಮ್ಮವರು ಸಂಘಟನೆ ಸದಸ್ಯೆ

reporter: vinodpudu

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.