ಮಂಗಳೂರು: ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿರುವ ಕರ್ನಾಟಕ ಬ್ಯಾಂಕ್, ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ "ವರ್ಷದ ಅತ್ಯುತ್ತಮ ಎಂಎಸ್‌ಎಂಇ ಬ್ಯಾಂಕ್” ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ASSOCHAM ಸಂಸ್ಥೆಯು ಮಾರ್ಚ್ 9 ರಂದು ನವದೆಹಲಿಯಲ್ಲಿ ಆಯೋಜಿಸಿದ್ದ ಎಂಎಸ್‌ಎಂಇ ಆಧಾರಿತ 8ನೇ ಶೃಂಗಸಭೆಯ ಪ್ರಶಸ್ತಿ ಸಮಾರಂಭದಲ್ಲಿ, ಕೇಂದ್ರ ಸರ್ಕಾರದ ಎಂಎಸ್‌ಎಂಇ ಸಚಿವ ನಾರಾಯಣ ಟಿ ರಾಣೆ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕರ್ನಾಟಕ ಬ್ಯಾಂಕ್‌ನ ಪರವಾಗಿ ಕ್ರೆಡಿಟ್ ಮಾರ್ಕೆಟಿಂಗ್ ವಿಭಾಗದ ಡಿಜಿಎಂ ಗೋಪಾಲಕೃಷ್ಣ ಸಾಮಗ ಬಿ ಅವರು ಪ್ರಶಸ್ತಿ ಸ್ವೀಕರಿಸಿದರು.
ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಶ್ರೀ ಮಹಾಬಲೇಶ್ವರ ಎಂ ಎಸ್ ಅವರು ಬ್ಯಾಂಕಿನ ಈ ಸಾಧನೆಯ ಬಗ್ಗೆ ತಮ್ಮ ಸಂತಸ ಹಂಚಿಕೊಂಡು, “ಕರ್ನಾಟಕ ಬ್ಯಾಂಕ್ ವಿವಿಧ ಡಿಜಿಟಲ್ ಉತ್ಪನ್ನಗಳೊಂದಿಗೆ ಎಂಎಸ್‌ಎಂಇ ವಲಯದ ಸಾಲಗಳಿಗೆ ಆದ್ಯತೆ ನೀಡುತ್ತಿದೆ. ಎಲ್ಲಾ ಗುಣಮಟ್ಟದ ಮಾನದಂಡಗಳನ್ನು ಸರಿಯಾಗಿ ಅನುಸರಿಸುವ ಮೂಲಕ ಎಂಎಸ್‌ಎಂಇ ಸಾಲಗಳನ್ನು ಬ್ಯಾಂಕ್ ತ್ವರಿತವಾಗಿ ವಿಲೇವಾರಿ ಮಾಡುತ್ತಿದೆ ಎಂದು ಹೇಳಿದ್ದಾರೆ.
ಜೊತೆಗೆ ಕರ್ನಾಟಕ ಬ್ಯಾಂಕ್, ಎಂಎಸ್‌ಎಂಇ ಆಧಾರಿತ ವಿವಿಧ ಸಾರ್ವಜನಿಕ,ಖಾಸಗಿ ಉಪಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಎಂಎಸ್‌ಎಂಇ ವಲಯಕ್ಕೆ ನಾವು ನೀಡುತ್ತಿರುವ ಆದ್ಯತೆಯನ್ನು ಮುಂದುವರಿಸುವ ನಮ್ಮ ಸಂಕಲ್ಪವನ್ನು ಈ ಪ್ರಶಸ್ತಿ ಬಲಪಡಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಓದಿ : ಉಕ್ರೇನ್ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿ, ನ್ಯಾಯ ಒದಗಿಸುವ ಸಮಯ ಬಂದಿದೆ: ಝೆಲೆನ್ಸ್ಕಿ