ಮಂಗಳೂರು: ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ 108 ಆಂಬ್ಯುಲನ್ಸ್ನಲ್ಲೇ ಶುಶ್ರೂಷಕ, ಚಾಲಕ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ.
ಕುಳಾಯಿಯ ಮಹಿಳೆಗೆ ರಾತ್ರಿ ಸುಮಾರು 11.10 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ 108 ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಪಣಂಬೂರು ಎಂಬಲ್ಲಿ ಹೆರೆಗೆ ನೋವು ಜಾಸ್ತಿಯಾಗಿದೆ.
ನಂತರ ಆಂಬ್ಯುಲನ್ಸ್ ಶುಶ್ರೂಷಕ ಅವಿನಾಶ್, ಚಾಲಕ ಬಶೀರ್ ಅಹ್ಮದ್ ಖಾನ್ ಸೇರಿ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಲೇಡಿಗೋಷನ್ ಆಸ್ಪತ್ರೆ ದಾಖಲು ಮಾಡಲಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.