ETV Bharat / city

ಮಂಗಳೂರು: BSC ವಿದ್ಯಾರ್ಥಿ, ವಿದ್ಯಾರ್ಥಿನಿ ಮೇಲೆ ದಾಳಿ..6 ಮಂದಿ ಬಂಧನ - ದಕ್ಷಿಣ ಕನ್ನಡ ಜಿಲ್ಲಾ ಸುದ್ದಿ

ನಿನ್ನೆ ರಾತ್ರಿ ವಿದ್ಯಾರ್ಥಿಗಳಿಬ್ಬರು ಬೈಕ್​ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಯುವಕರ ಗುಂಪೊಂದು ದಾಳಿ (Attack on students) ನಡೆಸಿದ ಘಟನೆ ನಗರದ ಸುರತ್ಕಲ್​​ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ 6 ಮಂದಿಯನ್ನು ಬಂಧಿಸಲಾಗಿದೆ.

moral policing on Surathkal students
ನೈತಿಕ ಪೊಲೀಸ್ ಗಿರಿ
author img

By

Published : Nov 16, 2021, 9:29 AM IST

Updated : Nov 16, 2021, 10:58 AM IST

ಮಂಗಳೂರು: ಬೈಕ್​ ಮೇಲೆ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಯುವಕರ ಗುಂಪೊಂದು ದಾಳಿ (Attack on students) ನಡೆಸಿದ ಘಟನೆ ನಗರದ ಸುರತ್ಕಲ್​​ನಲ್ಲಿ ರಾತ್ರಿ ವೇಳೆ ಜರುಗಿದೆ.

ನಿನ್ನೆ ರಾತ್ರಿ ವಿದ್ಯಾರ್ಥಿಗಳಿಬ್ಬರು ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ ತಡೆದು, ಯುವಕರ ಗುಂಪೊಂದು ದಾಳಿ ನಡೆಸಿದೆ. ಸುರತ್ಕಲ್​ ಪೊಲೀಸ್​ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಹ್ಲಾದ್, ಪ್ರಶಾಂತ್, ಗುರುಪ್ರಸಾದ್, ಪ್ರತೀಶ್, ಭರತ್ ಮತ್ತು ಸುಕೇಶ್ ಸೇರಿ 6 ಮಂದಿಯನ್ನು(Six persons arrested) ಬಂಧಿಸಲಾಗಿದೆ.

ಘಟನೆ ವಿವರ: ಸುರತ್ಕಲ್​ನ ಮುಕ್ಕ ಶ್ರೀನಿವಾಸ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿ ಮೊಹಮ್ಮದ್ ಯಾಸೀನ್​ ತನ್ನ ಕಾಲೇಜು ಸಹಪಾಠಿ ವಿದ್ಯಾರ್ಥಿನಿಯನ್ನು ರಾತ್ರಿ 10 ಗಂಟೆಗೆ ಮುಕ್ಕದಿಂದ ಆಕೆಯ ಅಪಾರ್ಟ್ ಮೆಂಟ್​ಗೆ ಬೈಕ್​ನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಅಪಾರ್ಟ್​​ಮೆಂಟ್​ಗೆ ಬರುವ ವೇಳೆ ಅಲ್ಲಿಗೆ ಬಂದ ಕೆಲ ಯುವಕರು, ಯುವಕನ ಹೆಸರು ತಿಳಿದುಕೊಂಡು ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಯುವತಿಯ ಮೈ ಮೇಲೆ ಕೈ ಹಾಕಿ ಮಾನಹಾನಿಯನ್ನೂ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಯುವಕ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದನು.

Last Updated : Nov 16, 2021, 10:58 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.