ಮಂಗಳೂರು (ದಕ್ಷಿನ ಕನ್ನಡ): ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ಮಾಡಬೇಕು ಮತ್ತು 40% ಕಮಿಷನ್ ಭ್ರಷ್ಟಾಚಾರ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಆಗ್ರಹಿಸಿದರು. ಮಂಗಳೂರಿನಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಈಶ್ವರಪ್ಪ ಅವರ ನಿರ್ಲಕ್ಷ್ಯದಿಂದ ನಡೆದಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿಂದೆ ಅನುಮಾನದ ಹುತ್ತ ಬೆಳೆದಿದೆ : ಸಿ.ಟಿ ರವಿ
ಘಟನೆಯ ಸತ್ಯ ಜನರಿಗೆ ತಿಳಿಯಬೇಕು. ಈಶ್ವರಪ್ಪ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿ ಸಂತೋಷ್ ಪಾಟೀಲ್ ಅವರು ಕಾಮಗಾರಿಗೆ ಖರ್ಚು ಮಾಡಿರುವ ಹಣವನ್ನು ನೀಡಬೇಕು. ಶಿವಮೊಗ್ಗದಲ್ಲಿ ಹರ್ಷ ಹತ್ಯೆಯಾದಾಗ ಹಿಂದೂ ಎಂದು ಆತನಿಗೆ ಬಿಜೆಪಿ ನಾಯಕರು ಪರಿಹಾರ ನೀಡಿದರು. ಸಂತೋಷ್ ಪಾಟೀಲ್ ಕೂಡ ಹಿಂದೂ ಆಗಿದ್ದರೂ ಅವರ ಬಗ್ಗೆ ಮಾತನಾಡುವವರಿಲ್ಲ ಎಂದರು.
ಇದೇ ವೇಳೆ, ರಮೇಶ್ ಜಾರಕಿಹೊಳಿ ಅವರ ಮಹಾನಾಯಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರ ಪ್ರಕರಣದ ಬಗ್ಗೆ ಜನರಿಗೆ ಸ್ವಲ್ಪ ಮರೆತು ಹೋಗಿತ್ತು, ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.