ETV Bharat / city

ಹೆಚ್ಚುತ್ತಿರುವ ಅಪಘಾತ.. ಮೃತ್ಯು ಕೂಪವಾಗುತ್ತಿದೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಿಂಗಳೊಂದರಲ್ಲೇ ಹತ್ತಕ್ಕೂ ಹೆಚ್ಚು ಅವಘಡ ಟಿಪ್ಪರ್ ಲಾರಿಗಳಿಂದಲೇ ಸಂಭವಿಸಿದೆ. ಈ ಲಾರಿಗಳ ಓಡಾಟದ ಮೇಲೆ ಕ್ರಮ ಜರುಗಿಸಬೇಕು ಎನ್ನುವ ಆಗ್ರಹ ಸಾರ್ವಜನಿಕರದ್ದಾಗಿದೆ.

Mani-Mysore National Highway
ದಿನೇ ದಿನೇ ಮೃತ್ಯು ಕೂಪವಾಗುತ್ತಿರುವ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ
author img

By

Published : May 4, 2022, 8:29 PM IST

ಪುತ್ತೂರು(ದಕ್ಷಿಣ ಕನ್ನಡ): ಟಿಪ್ಪರ್ ಚಾಲಕನ ಅಜಾಗರೂಕತೆಯ ಚಾಲನೆಗೆ ಸ್ಕೂಟರ್ ಸವಾರನೊಬ್ಬ ಮೃತಪಟ್ಟಿದ್ದು, ಹಿಂಬದಿ ಕುಳಿತ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ನಗರದ ಬೈಪಾಸ್​ನಲ್ಲಿ ಸಂಭವಿಸಿದೆ. ಟಿಪ್ಪರ್ ಸ್ಕೂಟರ್ ಸವಾರನ ತಲೆ ಮೇಲೆ ಹರಿದ ಹಿನ್ನೆಲೆಯಲ್ಲಿ ತಲೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪುತ್ತೂರು ಡಿವೈಎಸ್​ಪಿ ಗಾನ ಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೆದ್ದಾರಿಯಲ್ಲಿ ಟಿಪ್ಪರ್ ಲಾರಿಗಳು ಹಲವರ ಬಲಿ ಪಡೆದಿವೆ. ಈ ಲಾರಿಗಳನ್ನು‌ ನಿಯಂತ್ರಿಸುವಲ್ಲಿ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಯಾವುದೇ ಕ್ರಮ‌ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ತಿಂಗಳೊಂದರಲ್ಲೇ 10ಕ್ಕೂ ಹೆಚ್ಚು ಅವಘಡಗಳು ಟಿಪ್ಪರ್ ಲಾರಿಗಳಿಂದಲೇ ಸಂಭವಿಸಿವೆ. ಈ ಲಾರಿಗಳ ಓಡಾಟದ ಮೇಲೆ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ದಿನೇ ದಿನೇ ಮೃತ್ಯು ಕೂಪವಾಗುತ್ತಿರುವ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ

ಯಮ ಸ್ವರೂಪಿ ಟಿಪ್ಪರ್ ಲಾರಿಗಳು: ಮರಳು , ಕಲ್ಲಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೇಡಿಕೆಯಿದೆ. ಈ ಕಾರಣಕ್ಕಾಗಿ ಕೇರಳ ಹಾಗೂ ಹೊರ ಜಿಲ್ಲೆಗಳಿಂದ ಹೆಚ್ಚಿನ ಪ್ರಮಾಣದ ಲಾರಿಗಳು ಜಿಲ್ಲೆಯಲ್ಲಿ ಪ್ರವೇಶಿಸುತ್ತಿವೆ. ಅದರಲ್ಲೂ ಟಿಪ್ಪರ್ ಲಾರಿಗಳ ಸಂಖ್ಯೆಯೇ ಹೆಚ್ಚಾಗಿದ್ದು, ಮರಳು ಹಾಗೂ ಮಣ್ಣು ಸಾಗಣೆಯ ನೆಪದಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ. ಗ್ರಾಮೀಣ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಾಗಿ ಸಂಚರಿಸುವ ಈ ಟಿಪ್ಪರ್ ಲಾರಿಗಳ ಚಾಲಕರು ತಮಗೆ ತೋಚಿದ ರೀತಿಯಲ್ಲಿ ವಾಹನವನ್ನು ಚಲಾಯಿಸುವುದರಿಂದಾಗಿ ದ್ವಿಚಕ್ರ ವಾಹನ ಹಾಗೂ ಇತರ ವಾಹನಗಳಿಗೆ ಇವು ಯಮಸ್ವರೂಪಿಯಾಗುತ್ತಿವೆ.

ಏಕಮುಖ ಚಾಲನೆಯಿರುವ ಹೆದ್ದಾರಿಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸುವುದು, ಅತೀ ವೇಗದ ಚಾಲನೆಯಿಂದಾಗಿ ಹಲವು ಅಫಘಾತಗಳಿಗೆ ಕಾರಣವಾಗುತ್ತಿದೆ. ವೇಗ ನಿಯಂತ್ರಕಗಳನ್ನು ಪ್ರತೀ ವಾಹನಗಳಿಗೂ ಅಳವಡಿಸಬೇಕೆಂಬ ಕಾನೂನಿದ್ದರೂ, ಟಿಪ್ಪರ್ ವಾಹನಗಳು ಮಾತ್ರ ಈ ಕಾನೂನನ್ನು ಪಾಲಿಸುತ್ತಿಲ್ಲ ಎನ್ನುವ ಆರೋಪವಿದೆ.

ತುರ್ತು ಸೇವೆ ವಾಹನಗಳಿಗಿಂತಲೂ ಹೆಚ್ಚಿನ ವೇಗ: ತುರ್ತು ಸೇವೆಗಳನ್ನು ನೀಡುವ ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳದ ವಾಹನಗಳಿಗಿಂತಲೂ ಹೆಚ್ಚಿನ ವೇಗದಲ್ಲಿ ಈ ಟಿಪ್ಪರ್ ಗಳನ್ನು ಚಲಾಯಿಸುವ ಮೂಲಕ ಜನರ ಪ್ರಾಣಕ್ಕೆ ಕುತ್ತು ತರಲಾಗುತ್ತಿದೆ. ಅಲ್ಲದೆ ಕೆಲವು ಟಿಪ್ಪರ್​ಗಳ ಮುಂದೆ ನಂಬರ್ ಪ್ಲೇಟ್ ಇದ್ದರೆ, ಹಿಂದೆ ಇರುವುದಿಲ್ಲ. ರಸ್ತೆಗಳಲ್ಲಿ ಮರಳು, ಮಣ್ಣು ಸಾಗಣೆ ಸಂದರ್ಭದಲ್ಲಿ ಅವುಗಳಿಗೆ ಹೊದಿಕೆಯನ್ನು ಹಾಕಿ ಚಾಲನೆ ಮಾಡಬೇಕು ಎನ್ನುವ ಕಾನೂನಿದೆ. ಆದರೆ ಯಾವುದೂ ಪಾಲನೆಯಾಗುತ್ತಿಲ್ಲ. ಈ ಬಗ್ಗೆ ಸಂಚಾರಿ ಪೊಲೀಸರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಇದನ್ನೂ ಓದಿ: ರಾಜ್ಯಾದ್ಯಂತ ನಾಳೆಯಿಂದ ಮೇ 20ರ ವರೆಗೆ ಟ್ರಾನ್ಸ್​ಫಾರ್ಮರ್ ನಿರ್ವಹಣಾ ಅಭಿಯಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.