ETV Bharat / city

ಬಂದರು ನಗರಿ ಮಂಗಳೂರಲ್ಲೂ ಜಲಕ್ಷಾಮ! - undefined

ಮಂಗಳೂರಿನ ಜಲ ಮೂಲಗಳಲ್ಲಿ ಒಂದಾದ ಗುಜ್ಜರಕೆರೆಯನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ನೀರಿನ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಂಗಳೂರು
author img

By

Published : Apr 30, 2019, 1:28 PM IST

Updated : Apr 30, 2019, 3:10 PM IST

ಮಂಗಳೂರು: ಬಂದರು ನಗರಿ ಹಿಂದೆಂದೂ ಇಲ್ಲದಂತಹ ನೀರಿನ ಬವಣೆ ಎದುರಿಸುತ್ತಿದೆ. ಆದರೆ ಮಂಗಳೂರಿನ ಗುಜ್ಜರಕೆರೆಯನ್ನು ಸರಿಯಾಗಿ ನಿರ್ವಹಣೆ ಮಾಡಿದ್ದರೆ ಇಂದು ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ಮಳೆಗಾಲ ಆರಂಭವಾಗುವವರೆಗೂ ಪೂರೈಕೆ ಮಾಡುವಷ್ಟು ನೀರಿಲ್ಲ. ಗುಜ್ಜನಕೆರೆಯನ್ನೂ ಸರಿಯಾಗಿ ನಿರ್ವಹಣೆ ಮಾಡದೇ ಇರುವುದು ಮಂಗಳೂರಿಗರನ್ನು ಸಂಕಷ್ಟಕ್ಕೀಡು ಮಾಡಿದೆ.

ಮಂಗಳೂರು

ಮಂಗಳೂರಿನ ಮಂಗಳಾ ದೇವಿ ದೇವಸ್ಥಾನದ ಬಳಿ ಇರುವ ಗುಜ್ಜರಕೆರೆ 3.43 ಎಕರೆ ಪ್ರದೇಶದಲ್ಲಿದೆ. ಈ ಕೆರೆ ಮಂಗಳೂರು ನಗರಕ್ಕೆ ಅಗತ್ಯವಿರುವ ಒಂದಷ್ಟು ಪ್ರಮಾಣದ ನೀರನ್ನು ಪೂರೈಸಬಲ್ಲದು. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಈ ಕೆರೆಯಲ್ಲಿ ಈಗ ಒಳಚರಂಡಿ ಕೊಳಚೆ ನೀರು ಶೇಖರಣೆಯಾಗಿದೆ.

ಕೆರೆ ಸರಿಪಡಿಸಲು ಸ್ಥಳೀಯರು ಹಲವು ವರ್ಷಗಳಿಂದ ಮಾಡಿದ ಹೋರಾಟಕ್ಕೆ ಮಣಿದ ಸರ್ಕಾರ 6.25 ಕೋಟಿ ಹಣವನ್ನು ಈ ಕೆರೆ ನಿರ್ವಹಣೆಗೆ ವಿನಿಯೋಗಿಸಿದೆ. ಆದರೆ ಕೆರೆಗೆ ಒಳಚರಂಡಿ ನೀರು ಹರಿದು ಬರುವುದನ್ನು ತಡೆಯಲಾಗಿದೆ. ಪರಿಣಾಮ ಕೆರೆ ಸಂಪೂರ್ಣ ಮಲಿನವಾಗಿದೆ.

ಈಗಾಗಲೇ ಒಳಚರಂಡಿ ನೀರು ಬೆರೆತು ಕೆರೆ ಕೆಲವು ವರ್ಷಗಳ ಕಾಲ‌ ಉಪಯೋಗಿಸಲಾಗದಷ್ಟು ಹಾಳಾಗಿದೆ. ಈ ಹಿಂದೆ 1100 ಕೋಲಿಫಾರ್ಮ್ ಅಂಶ ನೀರಿನಲ್ಲಿದ್ದರೆ, ಈಗ 1600ಕ್ಕೇರಿ ನೀರು ವಿಷಕಾರಿಯಾಗಿದೆ. ಅಲ್ಲದೆ, ಕೆರೆಯಲ್ಲಿ ಗಿಡ, ಪಾಚಿ ವ್ಯಾಪಕವಾಗಿ ಹರಿಡಿದೆ.

ಈಗಿನಿಂದ ಕೆರೆ ಸ್ವಚ್ಛತಾ ಕೆಲಸ ಶುರು ಮಾಡಿದರೆ ಒಂದೆರಡು ವರ್ಷಗಳ ಮಳೆಗಾಲದ ಬಳಿಕ ನೀರು ಶುದ್ಧಗೊಳ್ಳಬಹುದು. ಅಂತಹ ಪ್ರಯತ್ನಕ್ಕೆ ಸರ್ಕಾರ ಕ್ರಮ‌ ಕೈಗೊಳ್ಳಬೇಕಾಗಿದೆ ಎಂಬುದು ಸ್ಥಳೀಯರ ಆಗ್ರಹ.

Intro:ಮಂಗಳೂರು; ಮಂಗಳೂರು ನಗರ ಈ ಹಿಂದೆಂದು ಇಲ್ಲದಂತಹ ನೀರಿನ ಸಮಸ್ಯೆ ಎದುರಿಸುತ್ತಿದೆ. ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ಮಳೆಗಾಲ ಆರಂಭವಾಗುವವರೆಗೆ ನಿರಂತರ ಪೂರೈಕೆಗೆ ನೀರಿಲ್ಲ. ಆದರೆ ಮಂಗಳೂರಿನ ಈ ಕೆರೆಯೊಂದನ್ನು ಸರಿಯಾಗಿ ನಿರ್ವಹಣೆ ಮಾಡಿದ್ದರೆ ಇಂದು ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ.

Body:ಇದು ಮಂಗಳೂರು ನಗರದಲ್ಲಿರುವ ಗುಜ್ಜರಕೆರೆ. ಮಂಗಳೂರಿನ ಮಂಗಳಾ ದೇವಿ ದೇವಸ್ಥಾನದ ಬಳಿ ಇರುವ ಈ ಗುಜ್ಜರಕೆರೆ 3.43 ಎಕರೆ ಪ್ರದೇಶದಲ್ಲಿ ಇದೆ. ಈ ಕೆರೆ ನಿರ್ವಹಣೆ ಮಾಡಿದರೆ ಮಂಗಳೂರು ನಗರಕ್ಕೆ ಬೇಕಾದ ನೀರಿನ ಅಗತ್ಯತೆಯ ಒಂದಂಶವನ್ನು ಪೂರೈಸಬಲ್ಲದು. ಆದರೆ ಈ ಕೆರೆ ಈಗ ಒಳಚರಂಡಿಯನ್ನು ಶೇಖರಿಸಿಕೊಂಡ ಕೆರೆಯಾಗಿ ಮಾರ್ಪಟ್ಟಿದೆ.
ಬೈಟ್- ನೇಮು ಕೊಟ್ಟಾರಿ, ಗುಜ್ಜರಕೆರೆ ನಿವಾಸಿ ( ಬಿಳಿ ಬಣ್ಣದ ಶರ್ಟ್ ಹಾಕಿದವರು)

ಕೆರೆ ಸುತ್ತಲೂ ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದ ಪರಿಣಾಮ ಸುತ್ತಲಿನ ಒಳಚರಂಡಿ ತ್ಯಾಜ್ಯ ನೀರು ಈ ಕೆರೆ ಸೇರಿದೆ. ಇದನ್ನು ಸರಿಪಡಿಸಲು ಇಲ್ಲಿನ ಸ್ಥಳೀಯರು ಹಲವು ವರ್ಷಗಳಿಂದ ಮಾಡಿದ ಹೋರಾಟ ಇನ್ನೂ ಯಶಸ್ವಿಯಾಗಿಲ್ಲ. ಇವರ ಹೋರಾಟಕ್ಕೆ ಮಣಿದು ಸರಕಾರ ವಿವಿಧ ಹಂತದಲ್ಲಿ 6.25 ಕೋಟಿ ಹಣವನ್ನು ಈ ಕೆರೆಗೆ ವಿನಿಯೋಗಿಸಿದೆ.
ಈ ಕೆರೆಗೆ ಈಗ ಒಳಚರಂಡಿ ನೀರು ಹರಿದು ಬರುವುದನ್ನು ತಡೆಯಲಾಗಿದೆ.

ಬೈಟ್- ದಿನೇಶ್, ಗುಜ್ಜರಕೆರೆ ನಿವಾಸಿ ( ಆರೆಂಜ್, ಬ್ಲಾಕ್ ಟೀ ಶರ್ಟ್ ಹಾಕಿದವರು)

ಆದರೆ ಈಗಾಗಲೇ ಒಳಚರಂಡಿ ನೀರು ಈ ಕೆರೆ ನೀರು ಇನ್ನೂ ಕೆಲವು ವರ್ಷಗಳ ಕಾಲ‌ ಉಪಯೋಗಿಸಲಾರದಷ್ಟು ಆಗಿದೆ. ಹಿಂದೆ 1100 ಕೋಲಿಫಾರ್ಮ್ ಅಂಶ ನೀರಿನಲ್ಲಿದ್ದರೆ ಈಗ 1600 ಕ್ಕೇರಿ ನೀರು ವಿಷಕಾರಿಯಾಗಿದೆ. ಈ ಕೆರೆಯಲ್ಲಿಗ ತ್ಯಾಜ್ಯದ ನೀರಿಗೆ ಗಿಡಗಂಟಿಗಳು, ಪಾಚಿಗಳು ತಲೆಎತ್ತಿದೆ. ಒಳಚರಂಡಿ ನೀರು ‌ಕೆರೆಗೆ ಹರಿಯುವುದನ್ನು ಸಂಪೂರ್ಣ ತಡೆದು‌ , ಕೆರೆಯನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಕೆರೆಯ ನೀರನ್ನು ಖಾಲಿ ಮಾಡಿ , ಇನ್ನು ಒಂದೆರಡು ವರ್ಷದ ಮಳೆಗಾಲದ ಬಳಿಕ ಈ ನೀರು ಶುದ್ದಗೊಳಬಹುದು. ಅಂತಹ ಪ್ರಯತ್ನಕ್ಕೆ ಸರಕಾರ ಕ್ರಮ‌ಕೈಗೊಳ್ಳಬೇಕಾಗಿದೆ.

end PTC
ವಿನೋದ್ ಪುದು
ಈಟಿವಿ ಭಾರತ್ , ಮಂಗಳೂರು

Conclusion:
Last Updated : Apr 30, 2019, 3:10 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.