ETV Bharat / city

ಸುರತ್ಕಲ್ ಟೋಲ್ ಗೇಟ್ ತೆರವಿಗೆ ಅಹೋರಾತ್ರಿ ಧರಣಿ : 'ಆಪದ್ಬಾಂಧವ' ಆಸೀಫ್ ಪೊಲೀಸ್ ವಶಕ್ಕೆ

ಸುರತ್ಕಲ್ ಟೋಲ್​ಗೇಟ್ ಅನ್ನು ತೆರವುಗೊಳಿಸಬೇಕೆಂದು 'ಆಪದ್ಬಾಂಧವ' ಆಸೀಫ್ ಅವರು ಕಳೆದ 15 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

mangaluru-toll-gate-issue-police-detained-three-person
ಸುರತ್ಕಲ್ ಟೋಲ್ ಗೇಟ್ ತೆರವಿಗೆ ಅಹೋರಾತ್ರಿ ಧರಣಿ : 'ಆಪದ್ಬಾಂಧವ' ಆಸೀಫ್ ಪೊಲೀಸ್ ವಶಕ್ಕೆ
author img

By

Published : Feb 22, 2022, 1:37 AM IST

ಮಂಗಳೂರು: ನಗರದ ಸುರತ್ಕಲ್ ಬಳಿಯ ಎನ್ಐಟಿಕೆ ಟೋಲ್ ಗೇಟ್ ಬಳಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ 'ಆಪದ್ಬಾಂಧವ' ಆಸೀಫ್ ಅವರು ಸೇರಿದಂತೆ ಸ್ಥಳದಲ್ಲಿದ್ದ ಮೂವರನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

ಸುರತ್ಕಲ್ ಟೋಲ್​ಗೇಟ್​​ ಅನಧಿಕೃತವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಈ ಟೋಲ್ ಗೇಟ್ ಅನ್ನು ತೆರವುಗೊಳಿಸಬೇಕೆಂದು 'ಆಪದ್ಬಾಂಧವ' ಆಸೀಫ್ ಅವರು ಕಳೆದ 15 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಈ ನಡುವೆ ಮಂಗಳಮುಖಿಯರು ಅವರ ಮೇಲೆ ಅನುಚಿತವೆನಿಸುವ ದಾಳಿ‌ ನಡೆಸಿದ್ದರು. ಅಲ್ಲದೆ ಆಸೀಫ್ ಹಾಗೂ ಅವರ ತಂಡ ತಮ್ಮ ಮೇಲೆ ಅಸಭ್ಯವಾಗಿ ವರ್ತಿಸಿ, ಹಲ್ಲೆ ನಡೆಸಲು ಯತ್ನಿಸುತ್ತಿದ್ದಾರೆ ಎಂದು ಮಂಗಳಮುಖಿಯರೂ ದೂರಿದ್ದರು‌.

ಅಲ್ಲದೆ ಟೋಲ್ ಗೇಟ್ ಅನಧಿಕೃತವಾಗಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಆಸೀಫ್ ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ. ಜೊತೆಗೆ ಸಾಕಷ್ಟು ವಾಹನಗಳ ಸಂಚಾರವಿರುವ ರಾಷ್ಟ್ರೀಯ ಹೆದ್ದಾರಿ ಬಳಿಯೇ ಈ ಧರಣಿ ನಡೆಸುತ್ತಿದ್ದರಿಂದ ತೊಂದರೆಯಾಗುತ್ತಿದೆ ಎಂದು ಎನ್ಎಚ್ಎ ದೂರು ನೀಡಿತ್ತು. ಜೊತೆಗೆ ಆಪದ್ಬಾಂಧವ ಆಸೀಫ್ ಅವರು ಈ ಪ್ರತಿಭಟನೆ ನಡೆಸಲು ಯಾವುದೇ ಪರವಾನಿಗೆ ಪಡೆದಿರಲಿಲ್ಲ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ಆಪದ್ಬಾಂಧವ ಆಸೀಫ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಆದರೆ ಅವರನ್ನು ಬಂಧಿಸಿಲ್ಲ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ: 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಶಾಸಕ ಎಂಪಿ ರೇಣುಕಾಚಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.