ಮಂಗಳೂರು: ನಗರದ ಕುತ್ತೆತ್ತೂರು ಗ್ರಾಮದ ಎಂಆರ್ಪಿಎಲ್ನ ಸಿಐಎಸ್ಎಫ್ ಯುನಿಟ್ನಲ್ಲಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಗ್ಗಿ ಡಿ.ಎಸ್.(34) ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಡಿಗ್ಗಿ ಡಿ.ಎಸ್. ಅವರು ಡಿಸೆಂಬರ್ 20ರಂದು ಸಿಐಎಸ್ಎಫ್ ಕ್ಯಾಂಪಸ್ನಲ್ಲಿ ಬ್ಯಾಚುಲರ್ ಬ್ಯಾರಕ್ನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದವರು ನಸುಗಪ್ಪು ಮೈಬಣ್ಣ, ಸಾಧಾರಣ ಶರೀರವನ್ನು ಹೊಂದಿದ್ದಾರೆ. 165 ಸೆಂ.ಮೀ ಎತ್ತರವಿರುವ ಇವರು ಕ್ರೀಂ ಕಲರ್ ಟೀಶರ್ಟ್, ಬೂದು ಬಣ್ಣದ ಪ್ಯಾಂಟ್ ಧರಿಸಿದ್ದರು. ಹಿಂದಿ ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಲಭ್ಯವಾದವರು ಸುರತ್ಕಲ್ ಠಾಣೆಗೆ ತಿಳಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ವೈದ್ಯ ಆತ್ಮಹತ್ಯೆ: ಕೌಟುಂಬಿಕ ಕಲಹ ಶಂಕೆ