ETV Bharat / city

ಕಾಂಗ್ರೆಸ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ಗೆ ಛೀಮಾರಿ ಹಾಕಿದ್ದೇಕೆ? - ಪಂಪ್ ವೆಲ್ ಮೇಲ್ಸೇತುವೆ ಅಣಕು ಉದ್ಘಾಟನೆ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಜನವರಿ ಮೊದಲ ವಾರದಲ್ಲಿ ಪಂಪ್ ವೆಲ್ ಮೇಲ್ಸೇತುವೆ ಲೋಕಾರ್ಪಣೆಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಆದರೆ ಲೋಕಾರ್ಪಣೆ ಆಗದ ಕಾರಣ ಕಾಂಗ್ರೆಸ್ ನಿಂದ ಇಂದು ಸಂಜೆ ಅಣಕು ಉದ್ಘಾಟನೆ ನಡೆಯಿತು.

pumpwell flyover
ಪಂಪ್ ವೆಲ್ ಮೇಲ್ಸೇತುವೆ
author img

By

Published : Jan 1, 2020, 8:08 PM IST

ಮಂಗಳೂರು: ನಗರದಲ್ಲಿರುವ ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿಯು ಕುಂಠಿತಗೊಂಡು ಉದ್ಘಾಟನೆಗೊಳ್ಳದ ಕಾರಣ ಕಾಂಗ್ರೆಸ್ ನಿಂದ ಇಂದು ಸಂಜೆ ಅಣಕು ಉದ್ಘಾಟನೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರ ಮುಖವಾಡ ಧರಿಸಿ, ಪ್ರತಿಕೃತಿಗಳನ್ನು ಹಿಡಿದುಕೊಂಡು ಘೋಷಣೆ ಕೂಗಿದರು.

ಕಾಂಗ್ರೆಸ್ ನಿಂದ ಪಂಪ್ ವೆಲ್ ಮೇಲ್ಸೇತುವೆ ಅಣಕು ಉದ್ಘಾಟನೆ

ಈ ಸಂದರ್ಭ ನಳಿನ್ ಕುಮಾರ್ ಕಟೀಲು ಅವರಿಗೆ ಪ್ರತಿಭಟನಾಕಾರರು ಛೀಮಾರಿ, ಘೋಷಣೆಗಳನ್ನು ಕೂಗಿ ಈರುಳ್ಳಿಯ ಮಾಲೆ ಹಾಕಿ, ಹಗ್ಗವನ್ನು ಕತ್ತರಿಸಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು‌. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್ ಅವರ ಪ್ರತಿಕೃತಿಗಳನ್ನು‌ ಮೇಲ್ಸೇತುವೆಯ ಕೆಳಗೆ ಎಸೆದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ಡಿಸೆಂಬರ್​ಗೆ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಜನವರಿ ಮೊದಲ ವಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಆದರೆ, ಕಾಮಗಾರಿ ಡಿಸೆಂಬರ್ ಅಂತ್ಯದ ವೇಳೆಯಲ್ಲಿಯೂ ಪೂರ್ಣಗೊಳ್ಳದ ಕಾರಣ, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರು ಇಂದು ಅಣಕು ಉದ್ಘಾಟನೆ ನಡೆಸಲಾಗುವುದು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು‌ ಐವನ್ ಡಿಸೋಜ ನೇತೃತ್ವದಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ನಿಂದ ಪಂಪ್ ವೆಲ್ ಮೇಲ್ಸೇತುವೆ ಅಣಕು ಉದ್ಘಾಟನೆ ನೆರವೇರಿಸಿತು.

Intro:ಮಂಗಳೂರು: ನಗರದಲ್ಲಿರುವ ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿಯು ಕುಂಠಿತಗೊಂಡು ಉದ್ಘಾಟನೆಗೊಳ್ಳದ ಕಾರಣ ಕಾಂಗ್ರೆಸ್ ನಿಂದ ಇಂದು ಸಂಜೆ ಅಣಕು ಉದ್ಘಾಟನೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರ ಮುಖವಾಡ ಧರಿಸಿ, ಪ್ರತಿಕೃತಿಗಳನ್ನು ಹಿಡಿದುಕೊಂಡು ಘೋಷಣೆ ಕೂಗಿದರು.

ಈ ಸಂದರ್ಭ ನಳಿನ್ ಕುಮಾರ್ ಕಟೀಲು ಅವರಿಗೆ ಪ್ರತಿಭಟನಾ ಕಾರರು ಛೀಮಾರಿ, ಘೋಷಣೆ ಗಳನ್ನು ಕೂಗಿ ಈರುಳ್ಳಿಯ ಮಾಲೆ ಹಾಕಿ, ಹಗ್ಗವನ್ನು ಕತ್ತರಿಸಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು‌. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್ ರವರ ಪ್ರತಿಕೃತಿ ಗಳನ್ನು‌ ಮೇಲ್ಸೇತುವೆಯ ಕೆಳಗೆ ಎಸೆದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

Body:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ಡಿಸೆಂಬರ್ ಗೆ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಜನವರಿ ಮೊದಲ ವಾರದಲ್ಲಿ ಲೋಕಾರ್ಪಣೆ ಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಆದರೆ ಕಾಮಗಾರಿ ಡಿಸೆಂಬರ್ ಅಂತ್ಯದ ವೇಳೆಯಲ್ಲಿಯೂ ಪೂರ್ಣಗೊಳ್ಳದ ಕಾರಣ, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರು ಇಂದು ಅಣಕು ಉದ್ಘಾಟನೆ ನಡೆಸಲಾಗುವುದು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು‌ ಐವನ್ ಡಿಸೋಜ ನೇತೃತ್ವದಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ನಿಂದ ಪಂಪ್ ವೆಲ್ ಮೇಲ್ಸೇತುವೆ ಅಣಕು ಉದ್ಘಾಟನೆ ನೆರವೇರಿಸಿತು.

ಈ ಸಂದರ್ಭ ಅಣಕು ಉದ್ಘಾಟನೆಯ ನೇತೃತ್ವ ವಹಿಸಿರುವ ಐವನ್ ಡಿಸೋಜ ಮಾತನಾಡಿ, ದ.ಕ.ಜಿಲ್ಲಾ ಸಂಸದರಾದ ನಳಿನ್ ಕುಮಾರ್ ಕಟೀಲು ಮೂರು ಬಾರಿಗೆ ಈ ಜಿಲ್ಲೆಯಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಎರಡು ಅವಧಿಯಲ್ಲಿ ಅವರದ್ದೇ ಸರಕಾರ ಕೇಂದ್ರದಲ್ಲಿದೆ. ಆದರೆ ಮಂಗಳೂರಿನ ಪಂಪ್ ವೆಲ್ ನಲ್ಲಿರುವ ಮೇಲ್ಸೇತುವೆ ಯನ್ನು‌ಕಳೆದ 10 ವರ್ಷಗಳಿಂದ ಮಾಡಲು ಸಾಧ್ಯವಾಗಿಲ್ಲ. ಆದರೆ ಇಂದು ಟೋಲ್ ನಿಯಮ ಉಲ್ಲಂಘನೆ ಮಾಡಿ,ಬಲಾತ್ಕಾರವಾಗಿ ಟೋಲ್ ಪಡೆಯದ ಹಾಗೆ ಗುತ್ತಿಗೆದಾರರನ್ನು ತಡೆ ಹಿಡಿದಿದ್ದಾರೆ. ಇನ್ನು ಎಷ್ಟು ದಿನಗಳ ಕಾಲ ಟೋಲ್ ಪಡೆಯದಂತೆ ನಿಲ್ಲಿಸುತ್ತಾರೆ ಎಂದು ಅವರು ಪ್ರಶ್ನಿಸಿದರು.

ರಸ್ತೆಯ ಕಾಮಗಾರಿಯೂ ಅವೈಜ್ಞಾನಿಕತೆಯಿಂದ ಕೂಡಿದೆ. ಅಧಿಕಾರಿಗಳ ಎಫ್ಐಆರ್ ದಾಖಲೆ ಮಾಡುವುದು ಬೇಡ. ಇದರಲ್ಲಿ ಎಫ್ಐಆರ್ ದಾಖಲೆ ಮಾಡಬೇಕಾಗುವುದು ನಳಿನ್ ಕುಮಾರ್ ಕಟೀಲು ಅವರ ಮೇಲೆ ಎಫ್ ಐಆರ್ ದಾಖಲಿಸಬೇಕಾಗುತ್ತದೆ. ಕಂಪೆನಿಗೆ ಕಾಮಗಾರಿಗೆ ಬೇಕಾದ ಹಣ ನೀಡದೆ, ಸಮಸ್ಯೆಗಳ ಬಗ್ಗೆ ಸಭೆ ನಡೆಸದೆ ಅಧಿಕಾರಿಗಳ ಮೇಲೆ ಈಗ ಎಫ್ಐಆರ್ ದಾಖಲು ಮಾಡಿರೋದು ತಪ್ಪು. ಹಾಗಾಗಿ ನಾವು ಇಂದು ಅಣಕು ಉದ್ಘಾಟನೆ ನಡೆಸಿದ್ದೇವೆ ಎಂದು‌ ಹೇಳಿದರು.

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.