ETV Bharat / city

Mangalore college Covid: ಮಂಗಳೂರಿನಲ್ಲಿ ಮೂರನೇ ನರ್ಸಿಂಗ್ ಕಾಲೇಜ್​ನಲ್ಲಿ ಕೊರೊನಾ ಸೋಂಕು - ಮಂಗಳೂರಿನ ನರ್ಸಿಂಗ್ ಕಾಲೇಜ್​

ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇದೀಗ ಮತ್ತೊಂದು ನರ್ಸಿಂಗ್​ ಕಾಲೇಜ್​ನಲ್ಲಿ ಮಹಾಮಾರಿ ಪತ್ತೆಯಾಗಿದೆ.

Mangalore college Covid
Mangalore college Covid
author img

By

Published : Dec 18, 2021, 12:39 AM IST

ಮಂಗಳೂರು: ನಗರದ ನರ್ಸಿಂಗ್ ಕಾಲೇಜಿನ ಏಳು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಇದರ ಬೆನ್ನಲ್ಲೇ ಕಾಲೇಜ್​​ನ್ನ ಕಂಟೈನ್ಮೆಂಟ್​ ವಲಯ ಎಂದು ಘೋಷಣೆ ಮಾಡಲಾಗಿದೆ.

ನರ್ಸಿಂಗ್​ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಇವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಲೇಜಿನ ಪ್ರಥಮ ವರ್ಷದ ತರಗತಿಯ 43 ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ ಏಳು ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ನರ್ಸಿಂಗ್​​ ಕಾಲೇಜನ್ನು ಕಂಟೈನ್ಮೆಂಟ್ ಎಂದು ಘೋಷಿಸಿರುವ ಆರೋಗ್ಯ ಇಲಾಖೆ ವಿಶೇಷ ನಿಗಾ ಇರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ತಗುಲಿ ಕಂಟೈನ್ಮೆಂಟ್ ವಲಯವಾಗುತ್ತಿರುವ ಮೂರನೇ ನರ್ಸಿಂಗ್ ಕಾಲೇಜು ಆಗಿದೆ. ವಾರದ ಹಿಂದೆ ಎರಡು ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಪರಿಣಾಮ ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿತ್ತು.

ಇದನ್ನೂ ಓದಿರಿ: ದೇಶದಲ್ಲಿ ಶತಕ ಬಾರಿಸಿದ 'Omicron'... ಅನಗತ್ಯ ಪ್ರಯಾಣ,ಜನಸಂದಣಿ ತಡೆಯುವಂತೆ ಕೇಂದ್ರ ಸೂಚನೆ

ಮಂಗಳೂರಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಎಂ.ವಿ. ಶೆಟ್ಟಿ ಕಾಲೇಜಿನಲ್ಲಿ 15 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಬಂದಿರುವುದು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಮತ್ತೊಂದು ನರ್ಸಿಂಗ್ ಕಾಲೇಜ್​ನಲ್ಲಿ ಇದೀಗ ಸೋಂಕು ಪತ್ತೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.