ಮಂಗಳೂರು: ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಇಂದು ಆದೇಶಿಸಿದೆ.
ವಿಕಾಸ್ ಕುಮಾರ್ ಅವರನ್ನು ಈ ತಕ್ಷಣದಿಂದಲೇ ರಾಜ್ಯ ರಿಸರ್ವ್ ಪೊಲೀಸ್ನ ಡೆಪ್ಯೂಟಿ ಇನ್ಸ್‌ಪೆಕ್ಟರ್ ಆಫ್ ಜನರಲ್ ಪೊಲೀಸ್ ಆಗಿ ನೇಮಕ ಮಾಡಲಾಗಿದೆ. ವಿಕಾಸ್ ಕುಮಾರ್ ಅವರು 2020 ಜೂನ್ 29ರಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು. ಆರು ತಿಂಗಳ ಕಾಲ ಅವರು ಮಂಗಳೂರಿನಲ್ಲಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
ಇದೀಗ ಮಂಗಳೂರು ನಗರ ಪೊಲೀಸ್ ಆಯುಕ್ತರ ತೆರವಾದ ಸ್ಥಾನಕ್ಕೆ ಎನ್.ಶಶಿಕುಮಾರ್ ಅವರನ್ನು ನೇಮಕ ಮಾಡಲಾಗಿದೆ.