ETV Bharat / city

ದೆಹಲಿ‌ ಏಮ್ಸ್ ಆಸ್ಪತ್ರೆ ವೈದ್ಯನೆಂದು ಮಂಗಳೂರು ಹೋಟೆಲ್​​ಗಳಲ್ಲಿ ವಸತಿ ಪಡೆದು ಮೋಸ.. ಆರೋಪಿ ಅರೆಸ್ಟ್

ಈತ ನವಭಾರತ ವೃತ್ತದಲ್ಲಿರುವ ಪ್ಯಾಪಿಲಾನ್ ಪ್ಯಾಲೇಸ್ ಎನ್ನುವ ಹೋಟೆಲ್ ನಲ್ಲಿಯೂ ಇದೇ ರೀತಿ ಮೋಸಗೈದಿರುವುದಾಗಿ ತಿಳಿದು ಬಂದಿದೆ. ಸಿಟಿವಾಕ್ ಹೋಟೆಲ್​​​ಗಿಂತ ಮೊದಲು ಪ್ಯಾಪಿಲಾನ್ ಪ್ಯಾಲೇಸ್ ಹೋಟೆಲ್​ನಲ್ಲಿ ಒಂದಷ್ಟು ದಿನ ಇದ್ದು, ಬಳಿಕ ಅಲ್ಲಿ ಹಣ ಕೊಡದೆ ಪರಾರಿಯಾಗಿದ್ದ..

man cheated in mangalore hotels by telling he is Doctor of Delhi Aims Hospital
ಹೋಟೆಲ್​​ಗಳಲ್ಲಿ ವಸತಿ ಪಡೆದು ಮೋಸ
author img

By

Published : Aug 21, 2021, 9:00 PM IST

ಮಂಗಳೂರು : ದೆಹಲಿ ಏಮ್ಸ್ ಆಸ್ಪತ್ರೆಯ ವೈದ್ಯನೆಂದು ಹೇಳಿಕೊಂಡು ವ್ಯಕ್ತಿಯೊಬ್ಬ ನಗರದ ವಿವಿಧ ಹೋಟೆಲ್​​​​ಗಳಲ್ಲಿ ವಸತಿ ಪಡೆದು ಬಿಲ್ ಪಾವತಿ ಮಾಡದೆ ಮೋಸಗೈದಿರುವ ಆರೋಪದಡಿ ಬಂದರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ತನ್ನನ್ನು ಶ್ರೀನಿವಾಸ ಕೆ ಎಂದು ಪರಿಚಯಿಸಿಕೊಂಡಿದ್ದಾನೆ. ತಾನು ಏಮ್ಸ್ ನಲ್ಲಿ ಪ್ರೊಫೆಸರ್ ಮತ್ತು ಸರ್ಜನ್ ಆಗಿರುವುದಾಗಿ ಐಡಿಯನ್ನು ತೋರಿಸಿದ್ದಾನೆ. ಈತ ಸ್ಟೇಟ್ ಬ್ಯಾಂಕ್ ಬಳಿಯ ನೆಲ್ಲಿಕಾಯಿ ರಸ್ತೆಯಲ್ಲಿರುವ ಸಿಟಿ ವಾಕ್ ರೆಸಿಡೆನ್ಸಿಯಲ್ಲಿ ರೂಮ್ ಪಡೆದು ಕೊನೆಗೆ ಚೆಕ್ ಔಟ್ ವೇಳೆ ಹಣ ಕೊಡದೆ ಪರಾರಿಯಾಗಿದ್ದ.

ಈತನ ಹೋಟೆಲ್ ಬಾಡಿಗೆ ನಾಲ್ಕು ಸಾವಿರ ರೂಪಾಯಿ ಬಾಕಿಯಿತ್ತು. ಈ ಬಗ್ಗೆ ಹೋಟೆಲ್​​ ಮಾಲೀಕರು, ಮಂಗಳೂರು ಹೋಟೆಲ್ ಅಸೋಸಿಯೇಶನ್​​ನಲ್ಲಿ ಖಜಾಂಚಿಯೂ ಆಗಿರುವ ಅಬ್ರಾರ್ ಎಂಬುವರು ಬಂದರು ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಆ ಬಳಿಕ ಆತ ನೀಡಿರುವ ಐಡಿ ಕಾರ್ಡ್​​ ಅನ್ನು ಹೋಟೆಲ್ ಅಸೋಸಿಯೇಶನ್ ಗ್ರೂಪ್​​ನಲ್ಲಿ ಶೇರ್ ಮಾಡಿದ್ದರು.

ಇದನ್ನೂ ಓದಿ: ನವೆಂಬರ್​​ 2022ರಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶ ಹಮ್ಮಿಕೊಳ್ಳಲಾಗುವುದು : ಮುರುಗೇಶ್ ನಿರಾಣಿ

ಈತ ನವಭಾರತ ವೃತ್ತದಲ್ಲಿರುವ ಪ್ಯಾಪಿಲಾನ್ ಪ್ಯಾಲೇಸ್ ಎನ್ನುವ ಹೋಟೆಲ್ ನಲ್ಲಿಯೂ ಇದೇ ರೀತಿ ಮೋಸಗೈದಿರುವುದಾಗಿ ತಿಳಿದು ಬಂದಿದೆ. ಸಿಟಿವಾಕ್ ಹೋಟೆಲ್​​​ಗಿಂತ ಮೊದಲು ಪ್ಯಾಪಿಲಾನ್ ಪ್ಯಾಲೇಸ್ ಹೋಟೆಲ್​ನಲ್ಲಿ ಒಂದಷ್ಟು ದಿನ ಇದ್ದು, ಬಳಿಕ ಅಲ್ಲಿ ಹಣ ಕೊಡದೆ ಪರಾರಿಯಾಗಿದ್ದ.

ಈ ವಿಚಾರ ತಿಳಿಯುತ್ತಲೇ ಹೋಟೆಲ್​​ ಅಸೋಸಿಯೇಶನ್ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮತ್ತು ಜನರಲ್ ಸೆಕ್ರೆಟರಿ ನಿಶಾಂಕ್ ಸುವರ್ಣ, ಪ್ಯಾಪಿಲಾನ್ ಹೋಟೆಲ್ ಗೆ ಭೇಟಿ ನೀಡಿದ್ದು, ಬಂದರು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ.

ಇದೀಗ ಎಸಿಪಿ ಪಿಎ ಹೆಗಡೆ ಮತ್ತು ಬಂದರು ಇನ್ಸ್ ಪೆಕ್ಟರ್ ರಾಘವೇಂದ್ರ ವ್ಯಕ್ತಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಿದಾಗ ಆತನಲ್ಲಿರುವುದು ಫೇಕ್ ಐಡಿಯೆಂದು ಗೊತ್ತಾಗಿದೆ. ಅಲ್ಲದೇ, ಈ ಹಿಂದೆ ಇದೇ ವ್ಯಕ್ತಿ ತಮಿಳುನಾಡಿನ ಸೇಲಂನಲ್ಲಿ ನಳಂದಾ ಎನ್ನುವ ಹೋಟೆಲ್​ನಲ್ಲಿ ಉಳಿದುಕೊಂಡು 15 ಸಾವಿರ ರೂ. ಮೋಸ ಮಾಡಿದ್ದನೆಂದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.