ETV Bharat / city

ವಿವಾಹವಾಗುವುದಾಗಿ ಯುವತಿಯೊಂದಿಗೆ ದೈಹಿಕ ಸಂಪರ್ಕ: ಮಂಗಳೂರಲ್ಲಿ ಕೈಕೊಟ್ಟ ವಂಚಕ ಅರೆಸ್ಟ್​ - ವಿವಾಹವಾಗುವೆನೆಂದು ನಂಬಿಸಿ ದೈಹಿಕ ಸಂಪರ್ಕ

ಯುವತಿಯೋರ್ವಳಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಮೋಸ ಮಾಡಿದ್ದ ಯುವಕನನ್ನು ಬಂಧಿಸಲಾಗಿದೆ. ಮಂಗಳೂರಲ್ಲಿ ಈ ಪ್ರಕರಣ ನಡೆದಿದ್ದು, ಸಂತ್ರಸ್ತೆ ನೀಡಿದ ದೂರು ಆಧರಿಸಿ ಕೇಸ್​ ದಾಖಲಾಗಿದೆ.

ಮಂಗಳೂರು
ಮಂಗಳೂರು
author img

By

Published : May 22, 2021, 11:44 AM IST

Updated : May 22, 2021, 12:04 PM IST

ಮಂಗಳೂರು: ವಿವಾಹವಾಗುವೆನೆಂದು ನಂಬಿಸಿ ದೈಹಿಕ ಸಂಪರ್ಕದ ಬಳಿಕ ವಂಚನೆಗೈದ ಆರೋಪಿಯನ್ನು ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯ ಮಹಿಳಾ ಪೊಲೀಸರು ಬಂಧಿಸಿದ್ದಾರೆ.

ಅರುಣ್ ರಾಜ್ ಕಾಪಿಕಾಡ್(39) ಬಂಧಿತ ಆರೋಪಿ. ಅರುಣ್ ರಾಜ್ ಕಾಪಿಕಾಡ್ ಕಳೆದ ಡಿಸೆಂಬರ್​ನಲ್ಲಿ ನಗರದ ಹೋಟೆಲೊಂದಕ್ಕೆ ಯುವತಿಯನ್ನು ಕರೆತಂದಿದ್ದ. ಅಲ್ಲಿ ಜ್ಯೂಸ್ ನೀಡಿ ಪ್ರಜ್ಞೆ ತಪ್ಪಿಸಿ ಬಲಾತ್ಕಾರವಾಗಿ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಬಳಿಕ ಮದುವೆಯಾಗುತ್ತೇನೆ, ಈ ವಿಚಾರ ಯಾರಲ್ಲೂ ಹೇಳಬಾರದು ಎಂದು ತಿಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅದಾದ ಬಳಿಕ ಮದುವೆಯಾಗುವ ಭರವಸೆ ನೀಡಿ ತನ್ನ ಫ್ಲ್ಯಾಟ್​ನಲ್ಲಿಯೂ ದೈಹಿಕ ಸಂಪರ್ಕ ಬೆಳೆಸಿದ್ದು, ಪರಿಣಾಮ ಯುವತಿ ಗರ್ಭಿಣಿಯಾಗಿದ್ದಾಳೆ. ಆ ಬಳಿಕ ಆಕೆಗೆ ಗರ್ಭಪಾತ ಮಾಡಿಸಿ, ಬಳಿಕ ವಿವಾಹವಾಗದೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಯುವತಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ: ಕೋವಿಡ್​ ನಿಯಮ ಉಲ್ಲಂಘನೆ: ಪೊಲೀಸರಿಂದ ಏಟು ತಿಂದ ಬಾಲಕ ಸಾವು

Last Updated : May 22, 2021, 12:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.