ಬಂಟ್ವಾಳ (ದಕ್ಷಿಣ ಕನ್ನಡ): ಮನೆಯಂಗಳಕ್ಕೆ ಚಿರತೆ ಬಂದು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಂಟ್ವಾಳ ಸಮೀಪದ ನರಿಕೊಂಬು ಗ್ರಾಮದ ನಿರ್ಮಲ್ ಎಂಬಲ್ಲಿ ಚಿರತೆ ಅಡ್ಡಾಡಿರುವುದು ಸೆರೆಯಾಗಿದೆ.
ಡಿ. 1ರಂದು ತಡರಾತ್ರಿ 2ರ ಸುಮಾರಿಗೆ ನಿರ್ಮಲ್ ನಿವಾಸಿ ಜಯಂತ್ ಅವರ ಮನೆಯ ಅಂಗಳಕ್ಕೆ ಚಿರತೆ ಬಂದಿದೆ. ನಾಯಿಯನ್ನು ಹುಡುಕಿಕೊಂಡು ಚಿರತೆ ಬಂದಿರುವ ಸಾಧ್ಯತೆ ಇದೆ. ಯಾವುದೋ ಶಬ್ದ ಕೇಳಿ ಚಿರತೆ ಓಡಿ ಹೋಗಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಈ ಕುರಿತು ನರಿಕೊಂಬು ಗ್ರಾಪಂಗೆ ಮಾಹಿತಿ ನೀಡಿರುವುದಾಗಿ ಮನೆಯವರು ತಿಳಿಸಿದ್ದಾರೆ. ಇನ್ನು ಚಿರತೆ ಕಾಣಿಸಿಕೊಂಡಿರುವ ಸುದ್ದಿ ತಿಳಿದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
(ಇದನ್ನೂ ಓದಿ: ಭಾರತಕ್ಕೆ ಲಗ್ಗೆ ಹಾಕಿದ ರೂಪಾಂತರಿ: ಕರ್ನಾಟಕದಲ್ಲಿ ಎರಡು ಒಮಿಕ್ರೋನ್ ಕೇಸ್ ಪತ್ತೆ)