ETV Bharat / city

ಮಂಗಳೂರು : ಆಹಾರವನ್ನರಸಿಕೊಂಡು ಬಂದು ಬೋನಿಗೆ ಬಿತ್ತು ಚಿರತೆ - ಬೋನಿಗೆ ಬಿದ್ದ ಚಿರತೆ

ಕಿನ್ನಿಗೋಳಿ-ತಾಳಿಪಾಡಿ ಪರಿಸಕ್ಕೆ ಹಲವು ತಿಂಗಳಿನಿಂದ ಚಿರತೆ ಬಂದು ಹೋಗುತ್ತಿತ್ತು. ಹಾಗಾಗಿ ಕೆಲ ದಿನಗಳ ಹಿಂದೆ ಅರಣ್ಯಾಧಿಕಾರಿಗಳು ಚಿರತೆ ಹಿಡಿಯಲು ಬೋನು ಇರಿಸಿದ್ದರು. ಇದೀಗ ಆಹಾರವನ್ನರಸಿಕೊಂಡು ಬಂದ ಚಿರತೆ ಬೋನಿಗೆ ಬಿದ್ದಿದೆ..

Leopard captured in Mangalore
ಮಂಗಳೂರಿನಲ್ಲಿ ಚಿರತೆ ಸೆರೆ
author img

By

Published : Dec 26, 2021, 1:11 PM IST

Updated : Dec 26, 2021, 1:22 PM IST

ಮಂಗಳೂರು (ದ.ಕನ್ನಡ): ನಗರದ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಗ್ರಾಮದ ಅಂತಲಚ್ಚಿಲ್ ನಾಗಬನದ ಗುಡ್ಡೆಯ ಬಳಿ ಆಹಾರವನ್ನರಸಿಕೊಂಡು ಬಂದಿರುವ ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದೆ.

ಮಂಗಳೂರಿನಲ್ಲಿ ಚಿರತೆ ಸೆರೆ

ಕಿನ್ನಿಗೋಳಿ-ತಾಳಿಪಾಡಿ ಪರಿಸರದಲ್ಲಿ ಹಲವು ತಿಂಗಳಿನಿಂದ ಚಿರತೆಯು ಜನವಸತಿ ಪ್ರದೇಶಕ್ಕೆ ಬಂದು ಸಾಕು ನಾಯಿ ಹಾಗೂ ಇನ್ನಿತರ ಪ್ರಾಣಿಗಳನ್ನು ಹೊತ್ತೊಯ್ಯುತ್ತಿತ್ತು. ಚಿರತೆ ಜನವಸತಿ ಪ್ರದೇಶಕ್ಕೆ ಬರುತ್ತಿರುವುದು ಸಾರ್ವಜನಿಕರ ಭೀತಿಗೆ ಕಾರಣವಾಗಿತ್ತು. ಇಲ್ಲಿನ ಜನರು ರಾತ್ರಿ ವೇಳೆ ಸಂಚರಿಸಲು ಭಯಪಡುತ್ತಿದ್ದರು.

ಇದನ್ನೂ ಓದಿ: ಚಾಮರಾಜನಗರದ ಗಡಿ ಗ್ರಾಮದಲ್ಲಿ 14 ಆನೆಗಳು.. ಜಮೀನಿನಲ್ಲೇ ಬೀಡುಬಿಟ್ಟ ಗಜಪಡೆ!

ಈ ಹಿನ್ನೆಲೆ, ಸ್ಥಳೀಯರು ಚಿರತೆಯ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರು. ಹಾಗಾಗಿ, ಕೆಲ ದಿನಗಳ ಹಿಂದೆ ಅರಣ್ಯಾಧಿಕಾರಿಗಳು ಚಿರತೆ ಹಿಡಿಯಲು ಬೋನು ಇರಿಸಿದ್ದರು. ನಿನ್ನೆ ರಾತ್ರಿ 9 ಗಂಟೆ ವೇಳೆಗೆ ಆಹಾರ ಹುಡುಕಿ ಬಂದ ಚಿರತೆಯೊಂದು ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಬಿದ್ದಿದೆ. ಮೂಡುಬಿದಿರೆ ವಲಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಚಿರತೆಯನ್ನು ಕಾಡಿಗೆ ಬಿಡುವ ಕಾರ್ಯವನ್ನು ಮಾಡಿದ್ದಾರೆ.

Last Updated : Dec 26, 2021, 1:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.