ETV Bharat / city

ಹೆಲ್ಮೆಟ್ ಧರಿಸದೆ ಬೈಕ್​ನಲ್ಲಿ ಮಹಿಳಾ ಫಾರೆಸ್ಟ್ ಗಾರ್ಡ್ ಪ್ರಯಾಣ: ದಂಡ ಜಡಿದ ಪೊಲೀಸ್ರು

ಹೆಲ್ಮೆಟ್ ಧರಿಸದೆ ಬೈಕ್​ನಲ್ಲಿ ಹಿಂಬದಿ ಚಾಲಕರಾಗಿ ಪ್ರಯಾಣಿಸುತ್ತಿದ್ದ ಮಹಿಳಾ ಫಾರೆಸ್ಟ್ ಗಾರ್ಡ್​ ಫೋಟೋವೊಂದು ಕರಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಖಾಕಿ ಸಮವಸ್ತ್ರಧಾರಿಗಳಿಂದ ಸಾರಿಗೆ ನಿಯಮ ಉಲ್ಲಂಘನೆ ಎಂದು ನೆಟ್ಟಿಗರು ಫೋಟೊ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲೀಸರು ಫಾರೆಸ್ಟ್ ಗಾರ್ಡ್​ಗೆ ದಂಡ ವಿಧಿಸಿದ್ದಾರೆ.

ಹೆಲ್ಮೆಟ್
author img

By

Published : Aug 2, 2019, 3:25 AM IST

ಮಂಗಳೂರು: ಹೆಲ್ಮೆಟ್ ಧರಿಸದೆ ಬೈಕ್​ನಲ್ಲಿ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದ ಮಹಿಳಾ ಫಾರೆಸ್ಟ್ ಗಾರ್ಡ್​ವೋರ್ವರಿಗೆ ದಂಡ ವಿಧಿಸಿದ ಪ್ರಕರಣ ನಗರದಲ್ಲಿ ನಡೆದಿದೆ.

ಉಪ್ಪಿನಂಗಡಿಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಮಹಿಳಾ ಗಾರ್ಡ್​, ನಗರದ ಬಲ್ಮಠ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ತಮ್ಮ ಪತಿಯೊಂದಿಗೆ ಪ್ರಯಾಣ ಮಾಡಿದ್ದರು. ಇದನ್ನು ಕಂಡ ಹಿಂಬದಿ ವಾಹನ ಚಾಲಕರು ಇವರ ಫೋಟೊ ತೆಗೆದು ಖಾಕಿ ಸಮವಸ್ತ್ರಧಾರಿಗಳಿಂದ ಸಾರಿಗೆ ನಿಯಮ ಉಲ್ಲಂಘನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

Penalty by police
ಪೊಲೀಸರಿಂದ ದಂಡ

ಸಾಮಾಜಿಕ‌ ಜಾಲತಾಣಗಳಲ್ಲಿ ಫೋಟೊ ವೈರಲ್ ಆಗುತ್ತಿದ್ದಂತೆಯೇ ಮಂಗಳೂರು ನಗರ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ವಾಹನದ ನಂಬರ್ ಪ್ಲೇಟ್ ಆಧಾರದಲ್ಲಿ ಸ್ವಯಂ ಪ್ರೇರಿತವಾಗಿ ಮಹಿಳಾ ಫಾರೆಸ್ಟ್ ಗಾರ್ಡ್​ ಅವರನ್ನು ಠಾಣೆಗೆ ಕರೆದು ದಂಡ ವಿಧಿಸಿದ್ದಾರೆ.

Intro:ಮಂಗಳೂರು: ಹೆಲ್ಮೆಟ್ ಧರಿಸದೆ ಬೈಕ್ ನಲ್ಲಿ ಹಿಂಬದಿ ಚಾಲಕರಾಗಿ ಪ್ರಯಾಣಿಸುತ್ತಿದ್ದ ಮಹಿಳಾ ಫಾರೆಸ್ಟ್ ಗಾರ್ಡ್ ಗೆ ದಂಡ ವಿಧಿಸಿದ ಘಟನೆ ಇಂದು ನಡೆದಿದೆ.

ಉಪ್ಪಿನಂಗಡಿಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ನಗರದ ಬಲ್ಮಠ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ತಮ್ಮ ಪತಿಯೊಂದಿಗೆ ಪ್ರಯಾಣ ಮಾಡುತ್ತಿದ್ದರು. ಇದನ್ನು ಕಂಡ ಹಿಂಬದಿ ವಾಹನ ಚಾಲಕರು ಇವರ ಫೋಟೋ ತೆಗೆದು ಖಾಕಿ ಸಮವಸ್ತ್ರಧಾರಿಗಳಿಂದ ಸಾರಿಗೆ ನಿಯಮ ಉಲ್ಲಂಘನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

Body:ಸಾಮಾಜಿಕ‌ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಫೋಟೋವನ್ನು ಕಂಡ ನಗರ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ವಾಹನದ ನಂಬರ್ ಪ್ಲೇಟ್ ಆಧಾರದಲ್ಲಿ ಸ್ವಯಂ ಪ್ರೇರಿತವಾಗಿ ಮಹಿಳಾ ಫಾರೆಸ್ಟ್ ಗಾರ್ಡನ್ನು ಠಾಣೆಗೆ ಕರೆದು
ದಂಡ ವಿಧಿಸಿದ್ದಾರೆ.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.