ETV Bharat / city

ವ್ಯಕ್ತಿಯನ್ನು ಸೊಂಡಿಲಲ್ಲಿ ಪಕ್ಕಕ್ಕೆಸೆದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆ ವ್ಯಕ್ತಿಯೋರ್ವನನ್ನು ಎತ್ತಿ ಎಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

elephant attack on man
ವ್ಯಕ್ತಿಯನ್ನು ಎತ್ತಿ ಎಸೆದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆ
author img

By

Published : Dec 9, 2021, 12:44 PM IST

Updated : Dec 9, 2021, 2:59 PM IST

ಮಂಗಳೂರು: ದ.ಕ.ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆ ದೇವಸ್ಥಾನದ ಪ್ರಾಂಗಣದೊಳಗಡೆ ವ್ಯಕ್ತಿಯೋರ್ವನನ್ನು ಸೊಂಡಿಲಿನಿಂದ ಎತ್ತಿ ಎಸೆದ ಘಟನೆ ನಡೆದಿದೆ‌. ಎರಡು ವಾರಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕೊಂದು ಇತ್ತೀಚೆಗೆ ವೈರಲ್ ಆಗಿತ್ತು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ 'ಯಶಸ್ವಿನಿ' ಎಂಬ ಆನೆಯಿಂದ ಎಸೆಯಲ್ಪಟ್ಟ ವ್ಯಕ್ತಿ ದೇವಸ್ಥಾನಕ್ಕೆ ರಾತ್ರಿಯ ಪೂಜೆಗೆಂದು ಬಂದಿದ್ದರು. ಅವರು ಆನೆಯ ಬಳಿಯಿಂದ ಹಾದು ಹೋಗುತ್ತಿರುವಾಗ ಹಠಾತ್ತನೆ ಸೊಂಡಿಲಿನಿಂದ ಎತ್ತಿ ಎಸೆದಿದೆ.

ವ್ಯಕ್ತಿಯನ್ನು ಎತ್ತಿ ಎಸೆದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆ ..

ಆನೆಯ ಮಾವುತ ಘಟನೆ ನಡೆದಿರುವುದು ನಿಜ ಎಂದು ಹೇಳಿದ್ದಾರೆ. ಆದರೆ ಆನೆ ಅವರನ್ನು ಎತ್ತಿ ಹಿಂದಕ್ಕೆ ಮೆಲ್ಲಗೆ ಎಸೆದಿರುವುದರಿಂದ ವ್ಯಕ್ತಿಗೆ ಯಾವುದೇ ತೊಂದರೆಯಾಗಿಲ್ಲ. ಈ ಕುರಿತು ಮಾವುತ ಪ್ರತಿಕ್ರಿಯಿಸಿ, ಆನೆಯಿಂದ ಎಸೆಯಲ್ಪಟ್ಟ ವ್ಯಕ್ತಿ ‌ಮದ್ಯ ಸೇವಿಸಿ ದೇವಸ್ಥಾನ ಪ್ರವೇಶಿಸಿದ್ದಾರೆ. ಆನೆಗೆ ಮದ್ಯದ ವಾಸನೆ ಆಗದಿರುವುದರಿಂದ ಈ ಘಟನೆ ನಡೆದಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

(ಇದನ್ನೂ ಓದಿ: ಜನರಲ್‌ ಬಿಪಿನ್‌ ರಾವತ್‌ ಅವರಿದ್ದ ಹೆಲಿಕಾಪ್ಟರ್‌ ಎಷ್ಟು ಸುರಕ್ಷಿತ? ವಿಶೇಷತೆಗಳೇನು? ಸಂಪೂರ್ಣ ವಿವರ)

Last Updated : Dec 9, 2021, 2:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.