ಮಂಗಳೂರು: ರಸ್ತೆಗೆ ಅಡ್ಡ ಬಂದ ನಾಯಿ ಜೀವ ಉಳಿಸಲು ಹೋಗಿ ಕೆಎಸ್ಆರ್ಟಿಸಿ ಬಸ್ಸೊಂದು ಚರಂಡಿಗಿಳಿದ ಘಟನೆ ಮಂಗಳೂರು ಹೊರವಲಯದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡಿನಲ್ಲಿ ನಡೆದಿದೆ.
ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಬಳ್ಳಾರಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಬಸ್ಸಿಗೆ ಏಕಾಏಕಿಯಾಗಿ ನಾಯಿಯೊಂದು ಅಡ್ಡ ಬಂದಿದೆ. ಚಾಲಕ ನಾಯಿ ಜೀವ ಉಳಿಸಲು ಹೋಗಿ ಬಸ್ ಎಡಕ್ಕೆ ತಿರುಗಿಸಿದ್ದಾನೆ. ಪರಿಣಾಮ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯಲ್ಲಿದ್ದ ಚರಂಡಿಗಿಳಿದು ವಾಲಿ ನಿಂತಿದೆ. ಅದೃಷ್ಟವಶಾತ್ ಬಸ್ ಪಲ್ಟಿಯಾಗದೇ ಬ್ಯಾಲೆನ್ಸ್ ಮಾಡಿ ನಿಂತಿದೆ. ಇದರಿಂದ ಯಾವುದೇ ಪ್ರಾಣಾಪಾಯವಿಲ್ಲದೇ ಪ್ರಯಾಣಿಕರು ಪಾರಾಗಿದ್ದಾರೆ.
ಓದಿ: ಗೋಮಾಂಸ ರಫ್ತು ಕೈಬಿಟ್ಟ ನಂತರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿ: ಸರ್ಕಾರಕ್ಕೆ ದೊರೆಸ್ವಾಮಿ ಪತ್ರ
ತಕ್ಷಣ ಸ್ಥಳಕ್ಕೆ ಸುರತ್ಕಲ್ ಸಂಚಾರಿ ಪೊಲೀಸರು ಆಗಮಿಸಿ, ಕ್ರೇನ್ ಮೂಲಕ ಬಸ್ ಮೇಲೆತ್ತಿದ್ದಾರೆ.