ETV Bharat / city

ಸುಪ್ರೀಂ, ಸರ್ಕಾರದ ನಿಯಮ ಪಾಲನೆ.. ಆಜಾನ್​ಗೆ ಧ್ವನಿವರ್ಧಕ ನಿಲ್ಲಿಸಿದ ಕುದ್ರೋಳಿ ಜಾಮಿಯಾ ಮಸೀದಿ

ಆಜಾನ್​ ವೇಳೆ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಮತ್ತು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದ ಹಿನ್ನೆಲೆ ಕುದ್ರೋಳಿಯ ಜಾಮಿಯಾ ಮಸೀದಿಯಲ್ಲಿ ಧ್ವನಿವರ್ಧಕ ನಿಲ್ಲಿಸಲಾಗಿದೆ.

jamia-mosque
ಜಾಮಿಯಾ ಮಸೀದಿ
author img

By

Published : May 11, 2022, 4:52 PM IST

Updated : May 11, 2022, 5:33 PM IST

ಮಂಗಳೂರು: ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಂಗಳೂರಿನ ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ಇಂದಿನಿಂದಲೇ ಆಜಾನ್​ಗೆ ಬಳಸಲಾಗುತ್ತಿದ್ದ ಧ್ವನಿವರ್ಧಕವನ್ನು ಬಂದ್ ಮಾಡಲಾಗಿದೆ. ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ಪ್ರಾತ:ಕಾಲದಿಂದಲೇ ಆಜಾನ್​ಗೆ ಧ್ವನಿವರ್ಧಕ ಬಳಸುವುದನ್ನು ನಿಲ್ಲಿಸಲಾಗಿದೆ. ದಿನದ ಐದು ಹೊತ್ತಿನ ಆಜಾನ್ ವೇಳೆ ಧ್ವನಿವರ್ಧಕ ಬಳಸದಿರಲು ನಿರ್ಧರಿಸಲಾಗಿದೆ.

ಆಜಾನ್​ಗೆ ಧ್ವನಿವರ್ಧಕ ನಿಲ್ಲಿಸಿದ ಕುದ್ರೋಳಿ ಜಾಮಿಯಾ ಮಸೀದಿ

ಈ ಬಗ್ಗೆ ಮಾಹಿತಿ ನೀಡಿರುವ ಕುದ್ರೋಳಿ ಜಾಮಿಯಾ ಮಸೀದಿಯ ಅಧ್ಯಕ್ಷ ಕೆ.ಎಸ್. ಮಸೂದ್ ಅವರು, ಧ್ವನಿವರ್ಧಕ ಬಳಕೆ ಬಗ್ಗೆ ಸುಪ್ರೀಂಕೋರ್ಟ್​ ನೀಡಿದ ತೀರ್ಪಿನ ಆಧಾರದ ಮೇಳೆ ರಾಜ್ಯ ಸರ್ಕಾರವೂ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಮಸೀದಿಯಲ್ಲಿ ಇಂದಿನಿಂದಲೇ ಆಜಾನ್​ಗೆ ಧ್ವನಿವರ್ಧಕ ಬಳಕೆಯನ್ನು ಬಂದ್ ಮಾಡಲಾಗಿದೆ ಎಂದು ತಿಳಿಸಿದರು.

ಪ್ರತಿದಿನ ಐದು ಹೊತ್ತಿನ ಸಮಯದಲ್ಲೂ ಕೂಡ ಆಜಾನ್​ಗೆ ಧ್ವನಿವರ್ಧಕವನ್ನು ಬಳಸುವುದಿಲ್ಲ. ಸುಪ್ರೀಂ ಮತ್ತು ಸರ್ಕಾರದ ಆದೇಶಕ್ಕೆ ಗೌರವ ನೀಡಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಓದಿ: ಈ ಖಾತೆ ಸಾಕು ಅನ್ನಿಸಿಲ್ಲ.. ನಾನೀಗ ಗೃಹ ಖಾತೆಯಲ್ಲಿ 'ಎಕ್ಸ್‌ಪರ್ಟ್': ಸಚಿವ ಆರಗ ಜ್ಞಾನೇಂದ್ರ

Last Updated : May 11, 2022, 5:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.