ETV Bharat / city

ಕೊರೊನಾ ನಿರ್ಬಂಧದ ಮಧ್ಯೆ ಅಕ್ರಮ ಗೋಮಾಂಸ ಸಾಗಾಟ: ಆರೋಪಿಗಳು ಪರಾರಿ - ಸುಳ್ಯ ಅಕ್ರಮ ಗೋಮಾಂಸ ಸಾಗಾಟ

ಕೊರೊನಾ ಕಾವಿನ ಮಧ್ಯೆ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಂಪಾಜೆ ಗ್ರಾಮದ ಕೊಯನಾಡು ಬಳಿ ನಡೆದಿದೆ.

illegal-cow-meat-transport-in-sulya-mangalore
ಅಕ್ರಮ ಗೋಮಾಂಸ ಸಾಗಟ
author img

By

Published : Apr 12, 2020, 12:43 PM IST

ದಕ್ಷಿಣ ಕನ್ನಡ : ಸುಳ್ಯ ಸಂಪಾಜೆ ಗ್ರಾಮದ ಕೊಯನಾಡು ಬಳಿ ಅಕ್ರಮ ಗೋಮಾಂಸ ಸಾಗಾಣಿಕೆ ಮಾಡುತ್ತಿದ್ದ ಕುರಿತು ಮಾಹಿತಿ ಪಡೆದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಮತ್ತು ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ.

ಕೊಯನಾಡಿನ ಕಲ್ಲಾಳದಿಂದ ದೇವರಕೊಲ್ಲಿಗೆ ಮಾಂಸ ಸಾಗಿಸುವ ಸುದ್ದಿ ಪೊಲೀಸ್ ಸಿಬ್ಬಂದಿಗೆ ದೊರಕಿತ್ತು. ಈ ವೇಳೆ ಪೊಲೀಸರ ಜೊತೆಗೂಡಿದ ಹಿಂದೂ ಜಾಗರಣ ವೇದಿಕೆ, ಭಜರಂಗದಳ ಕಾರ್ಯಕರ್ತರು ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ದೇವರಕೊಲ್ಲಿ ಎಂಬಲ್ಲಿ ಗೋಮಾಂಸ ಸಾಗಾಣಿಕೆ ಮಾಡುತ್ತಿದ್ದ ವಾಹನ ತಡೆದಿದ್ದಾರೆ. ಈ ಸಂದರ್ಭ ಆರೋಪಿಗಳು ಕಾರು ಮತ್ತು ಮಾಂಸವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.