ETV Bharat / city

ನೀನ್‌ ಮಾಡಿದ್‌ ಅಡುಗೆ ಸರಿ ಇಲ್ವೆಂದು ಪತ್ನಿ ಕೊಲೆ ಮಾಡಿದ ಹೇಡಿ ಪತಿ ಅರೆಸ್ಟ್‌.. - etv bharat, kannada newspaper

ಅಡುಗೆ ಚೆನ್ನಾಗಿ ಮಾಡಿಲ್ಲವೆಂದು ಹೆಂಡತಿಯನ್ನು ಚೂರಿಯಿಂದ ಇರಿದು ಕೊಂದ ಪಾಪಿ ಪತಿ ಅರೆಸ್ಟ್​ ಆಗಿದ್ದಾನೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಈ ಘಟನೆ ನಡೆದಿದೆ.

ಪಾಪಿ ಪತಿ ಅರೆಸ್ಟ್
author img

By

Published : Jul 19, 2019, 1:57 PM IST

ಮಂಗಳೂರು: ಪತ್ನಿ ಅಡುಗೆ ಸರಿ ಮಾಡಿಲ್ಲವೆಂದ್ರೇ ಪತಿ ಅಬ್ಬಬ್ಬಾ ಅಂದ್ರೇ ಪತ್ನಿ ಮೇಲೆ ಒಂದಿಷ್ಟು ರೇಗಾಡ್ತಾನೆ. ಪಾಪದ ಗಂಡಂಡಿರು ಇದ್ರೇ ಅದನ್ನೂ ಮಾಡದೆ ತೆಪ್ಪಗೆ ಮಾಡಿದ್ದನ್ನ ತಿನ್ನುತ್ತಾರೆ. ಆದರೆ, ಇಲ್ಲೊಬ್ಬ ಹೇಡಿ ಗಂಡ, ಮಾಡಿದ ಅಡುಗೆಯೇ ಸರಿ ಇಲ್ಲ ಅಂತಾ ಪತ್ನಿಯನ್ನೇ ಕೊಲೆ ಮಾಡಿ ಕೊನೆಗೆ ಪುತ್ತೂರು ಗ್ರಾಮಾಂತರ ಪೊಲೀಸರ ಅತಿಥಿಯಾಗಿದ್ದಾನೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅರ್ಲಪದವಿನ ಕಲ್ಲ ಪದವು ಎಂಬಲ್ಲಿ ಈ ಘಟನೆ ನಡೆದಿದೆ. ಗಣೇಶ್​ ಎಂಬಾತ ಗುರುವಾರ ರಾತ್ರಿ ಪತ್ನಿ ಅಕ್ಷತಾಳಿ ಎಂಬುವರಿಗೆ ಚೂರಿಯಿಂದ ಇರಿದಿದ್ದ. ಗಾಯಗೊಂಡ ಅಕ್ಷತಾ ಪಕ್ಕದಲ್ಲಿರುವ ಅತ್ತೆ‌ ಮನೆಗೆ ಓಡಿ ಬಂದಿದ್ದಳು. ಅತ್ತೆ ಮನೆಯಲ್ಲಿ ಈಕೆಯ ತಾಯಿ ಕೂಡ ಇದ್ದರು. ಅಲ್ಲಿಗೆ ಬಂದ ಅಕ್ಷತಾ ತನ್ನ ಪತಿ ಅಡುಗೆ ಸರಿ ಮಾಡಿಲ್ಲ ಎಂದು ಚೂರಿಯಿಂದ ಇರಿದಿರುವುದಾಗಿ ತಿಳಿಸಿದ್ದಾಳೆ. ತಕ್ಷಣ ಆಕೆಯನ್ನು ಅಲ್ಲಿಂದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರೊಳಗೆ ಆಕೆ ಮೃತಪಟ್ಟಿದ್ದಳು. ಪತ್ನಿಗೆ ಚೂರಿಯಿಂದ ಇರಿದ ಬಳಿಕ ನಾಪತ್ತೆಯಾಗಿದ್ದ ಆರೋಪಿ ಗಣೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ.

Intro:ಮಂಗಳೂರು: ಅಡುಗೆ ಸರಿ ಮಾಡಿಲ್ಲ ಎಂದು ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ ಗಣೇಶ್ ನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.Body:ಈತ ಗುರುವಾರ ರಾತ್ರಿ ಪತ್ನಿ ಅಕ್ಷತಾಳಿಗೆ ಚೂರಿಯಿಂದ ಇರಿದಿದ್ದ. ಗಾಯಗೊಂಡ ಅಕ್ಷತಾ ಪಕ್ಕದಲ್ಲಿರುವ ಅತ್ತೆ‌ ಮನೆಗೆ ಓಡಿ ಬಂದಿದ್ದಳು. ಅತ್ತೆ ಮನೆಯಲ್ಲಿ ಈಕೆಯ ತಾಯಿ ಕೂಡ ಇದ್ದರು. ಅಲ್ಲಿಗೆ ಬಂದ ಅಕ್ಷತಾ ತನ್ನ ಪತಿ ಅಡುಗೆ ಸರಿ ಮಾಡಿಲ್ಲ ಎಂದು ಚೂರಿಯಿಂದ ಇರಿದಿರುವುದಾಗಿ ತಿಳಿಸಿದ್ದು, ಆಕೆಯನ್ನು ಅಲ್ಲಿಂದ ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿದ್ದಾಳೆ. ಪತ್ನಿಗೆ ಚೂರಿಯಿಂದ ಇರಿದ ಬಳಿಕ ನಾಪತ್ತೆಯಾಗಿದ್ದ ಆರೋಪಿ ಗಣೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
Reporter-vinodpuduConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.