ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏರ್ ಪೋರ್ಟ್ ಕೌನ್ಸಿಲ್ ಇಂಟರ್ ನ್ಯಾಷನಲ್ ನಿಂದ ಆರೋಗ್ಯ ಮಾನ್ಯತೆ ಪಡೆದಿದೆ. ಸುರಕ್ಷಿತ ಪ್ರಯಾಣಕ್ಕಾಗಿ ಎಎಚ್‌ಎ ಕಾರ್ಯಕ್ರಮದಡಿ ಎಸಿಐ ಮೌಲ್ಯಮಾಪನ ಪ್ರಕ್ರಿಯೆ ನಡೆಸಿರುವ 118 ಪರಿಶೀಲನಾ ಅಂಕಗಳ ಆಧಾರಗಳ ಮೇಲೆ ಈ ಮಾನ್ಯತೆಯನ್ನು ನೀಡಲಾಗಿದೆ.
ಈ ಮಾನ್ಯತೆ ಮುಂದಿನ ಒಂದು ವರ್ಷ ಕಾಲ ಮಾನ್ಯವಾಗಿರುತ್ತದೆ. ಕೊರೊನಾ ಸೋಂಕು ಹರಡುವಿಕೆ ಹಾಗೂ ನಿಯಂತ್ರಣ ಸಾಧಿಸುವಲ್ಲಿ ಆರೋಗ್ಯ ಸುರಕ್ಷತಾ ಮಾನದಂಡಗಳನ್ನು ಸರಿಯಾಗಿ ಅನುಸರಿಸಿ ಸನ್ನಡತೆಯನ್ನು ಬಲಪಡಿಸಲು ಈ ವಿಮಾನ ನಿಲ್ದಾಣ ಬದ್ಧವಾಗಿದೆ ಎಂಬುದನ್ನು ಈ ಮಾನ್ಯತೆಯು ಖಾತರಿಪಡಿಸುತ್ತದೆ.
ಓದಿ-ಇಂದಿನಿಂದ ಅಧಿಕೃತವಾಗಿ ಗೋಹತ್ಯೆ ನಿಷೇಧ ಜಾರಿ; ಗೋ ಪೂಜೆ ಮಾಡಿ ಯಡಿಯೂರಪ್ಪ ಘೋಷಣೆ
ಎಸಿಐ ಮೌಲ್ಯಮಾಪನವು ವಿಮಾನ ನಿಲ್ದಾಣದ ನಿರ್ಗಮನ, ಆಗಮನ ದ್ವಾರ, ಎಲ್ಲಾ ಟರ್ಮಿನಲ್ ಪ್ರದೇಶಗಳಲ್ಲಿನ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ವರ್ಗಾವಣೆ, ಸಾರಿಗೆ ಸೇವೆಗಳು, ಆಹಾರ ಮತ್ತು ಪಾನೀಯ ಸೇವೆಗಳು, ಎಸ್ಕಲೇಟರ್‌ಗಳು ಮತ್ತು ಎಲಿವೇಟರ್‌ಗಳು, ವಿಶ್ರಾಂತಿ ಕೋಣೆಗಳು, ಸೌಲಭ್ಯಗಳು ಮತ್ತು ಬ್ಯಾಗೇಜ್ ಕ್ಲೈಮ್ ಪ್ರದೇಶಗಳಲ್ಲಿ ಕೈಗೊಂಡ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಒಳಗೊಂಡಿದೆ.