ETV Bharat / city

ಕಮಿಷನ್​​ ಆರೋಪ: ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ ಹರತಾಳು ಹಾಲಪ್ಪ - ಬೇಳೂರು ಗೋಪಾಲಕೃಷ್ಣ - ಹರತಾಳು ಹಾಲಪ್ಪ ಮೇಲೆ ಬೇಳೂರು ಗೋಪಾಲಕೃಷ್ಣ ಆರೋಪ

ಮರಳು ದಂಧೆಯಿಂದ ಕಮಿಷನ್​​ ಆರೋಪಕ್ಕೆ ಸಂಬಂಧಿಸಿದಂತೆ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಣೆ ಪ್ರಮಾಣ ಮಾಡಿದ್ದಾರೆ.

haratalu halappa and belooru gopalakrishna swear on god over commission allegation
ಶಾಸಕ ಹರತಾಳು ಹಾಲಪ್ಪ - ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ
author img

By

Published : Feb 12, 2022, 2:27 PM IST

ಧರ್ಮಸ್ಥಳ (ದಕ್ಷಿಣ ಕನ್ನಡ): ಶ್ರೀ ಕ್ಷೇತ್ರ ಧರ್ಮಸ್ಥಳ ಸತ್ಯ, ನ್ಯಾಯ, ನೀತಿಗೆ ಹೆಸರಾಗಿದ್ದು ಶ್ರೀ ಮಂಜುನಾಥ ಸ್ವಾಮಿಯ ಸಮ್ಮುಖದಲ್ಲಿ ನನ್ನ ಆತ್ಮಶುದ್ಧಿ ಹಾಗೂ ಪ್ರಾಮಾಣಿಕತೆಯನ್ನು ಪ್ರದರ್ಶಿಸುವ ಸಲುವಾಗಿ, ಮರಳು ಸಾಗಾಣಿಕೆ ಲಾರಿ ‌ಮಾಲೀಕರಿಂದ ಹಣ ಪಡೆದಿಲ್ಲ ಎಂದು‌ ಪ್ರಮಾಣ ಮಾಡಿದ್ದೇನೆ‌ ಎಂದು‌ ಶಾಸಕ ಹರತಾಳು ಹಾಲಪ್ಪ ಮಾಧ್ಯಮಗಳಿಗೆ ತಿಳಿಸಿದರು.

ಸಾಗರ ಹಾಗೂ ಹೊಸನಗರ ತಾಲೂಕಿನಲ್ಲಿ ಮರಳು ಸಾಗಣೆ ಲಾರಿ ಮಾಲೀಕರಿಂದ ಕಮಿಷನ್ ಪಡೆದಿದ್ದಾರೆ, ಪಡೆದಿಲ್ಲವಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಆರೋಪ ಹಾಗೂ ಆಹ್ವಾನದ ಹಿನ್ನೆಲೆ, ಸವಾಲು ಸ್ವೀಕರಿಸಿದ ಶಾಸಕ ಹರತಾಳು ಹಾಲಪ್ಪ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಿ ಮಾತನಾಡಿದರು.

ಶಾಸಕ ಹರತಾಳು ಹಾಲಪ್ಪ

ಮಾಜಿ ಶಾಸಕರ ಆಹ್ವಾನದಂತೆ‌ ಆರು ದಿನಗಳ‌ ಮೊದಲೇ ಅವರಿಗೆ ತಿಳಿವಳಿಕೆ ಪತ್ರದ ಮೂಲಕ ನೋಟಿಸ್​ ನಿಡಿ ಇಂದಿಗೆ ದಿನ ನಿಗದಿಪಡಿಸಲಾಗಿತ್ತು. ಅವರು ದಿನಾಂಕ ಹಾಗೂ ಸಮಯ ಬದಲಾವಣೆ ಪ್ರಯತ್ನದ ಮೂಲಕ ಜಾರಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆದರೂ ಇಂದು ಅವರು ಧರ್ಮಸ್ಥಳಕ್ಕೆ ಆಗಮಿಸುವ ಮಾಹಿತಿ ಲಭಿಸಿದೆ ಎಂದು ಬೇಳೂರು ಗೋಪಾಲಕೃಷ್ಣ ಆಮನಕ್ಕೂ ಮುನ್ನ ಈ ಹೇಳಿಕೆ ನೀಡಿದರು.

ನಾನು ಹಣ ಪಡೆಯದಿರುವ ಕುರಿತು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದೇನೆ. ಆದರೆ, ಅವರಿಗೆ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ತಾಕತ್ತಿಲ್ಲ. ನಾನು‌ ಹಣ ಪಡೆದ ಕುರಿತು ಯಾವುದೇ ದಾಖಲೆಗಳಿದ್ದರೆ ನನ್ನ ವಿರುದ್ಧ ಕೇಸ್ ಹಾಕಲಿ‌‌ ಎಂದು ಸವಾಲು ಹಾಕಿದರು. ‌

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಆಪಾದನೆ ಮಾಡಿದ ಹಿನ್ನೆಲೆ, 40 ವರ್ಷಗಳಿಂದ ಸ್ನೇಹಿತರಾಗಿರುವ ವಿನಾಯಕ ರಾವ್ ಮತ್ತು ಅಣ್ಣಯ್ಯನ ಮಗ ರವೀಂದ್ರ ಅವರನ್ನೂ ಜೊತೆಗೆ ಕರೆದುಕೊಂಡು ಬಂದು ಪ್ರಮಾಣ ಮಾಡುವ ಮೂಲಕ ದೇವರ ಸಮ್ಮುಖದಲ್ಲಿ ನನ್ನ ಪ್ರಾಮಾಣಿಕತೆಯನ್ನು ತಿಳಿಸಿದ್ದೇನೆ ಎಂದರು‌.

ಬೇಳೂರು ಗೋಪಾಲಕೃಷ್ಣ ಹೇಳಿಕೆ: ಶಾಸಕ ಹರತಾಳು ಹಾಲಪ್ಪ ಅವರ ವಿರುದ್ಧ ಮರಳು ದಂಧೆಯಿಂದ ಕಮಿಷನ್ ತೆಗೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದೆ. ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಹೇಳಿದ್ದೆ. ಅದಲ್ಲದೇ ದುಡ್ಡು ಕೊಟ್ಟವರೂ ಕೂಡ ನನ್ನೊಟ್ಟಿಗೆ ಇದ್ದಾರೆ. ಇದು ನೂರಕ್ಕೆ ನೂರು ಸತ್ಯ. ಅವರು ಸುಮಾರು 300 ಲಾರಿ ಮಾಲೀಕರಿಂದ ಹಣ ಪಡೆದಿದ್ದಾರೆ. ಅದರಲ್ಲಿ 30 ಜನ ಅವರ ಪರವಾಗಿ ಸಾಕ್ಷಿ ನೀಡಬಹುದು.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ

ಮರಳು ನೀತಿಯನ್ನು ಯಾಕೆ ಸಡಿಲಗೊಳಿಸಿಲ್ಲ? ಸರ್ಕಾರಕ್ಕೆ ಹಣ ಕಟ್ಟಿ ಮರಳು ಯಾಕೆ ನೀಡುವುದಿಲ್ಲ. ಕಮಿಷನ್ ದಂಧೆಗಾಗಿ ಈ ರೀತಿ ನಡೆಯುತ್ತಿದೆ. ಈಗಾಗಲೇ ನಾನೂ ಕೂಡ ಮಂಜುನಾಥ ಸ್ವಾಮಿಯ ದರ್ಶನ ಮಾಡಿ ಅವರು ತಪ್ಪು ಮಾಡಿದ್ದಾರೆ ಎಂದು ಪ್ರಮಾಣ ಮಾಡಿದ್ದೇನೆ. ಆದರೆ, ಅವರು ಪ್ರಮಾಣ ಮಾಡಿ ಹೋಗಿದ್ದೇನೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಆ ಮಂಜುನಾಥನೇ ಸಾಕ್ಷಿ ಎಂದರು.

ಹರತಾಳು ಹಾಲಪ್ಪ ಆಣೆ ಪ್ರಮಾಣದ ಬಳಿಕ ದೇಗುಲಕ್ಕೆ ಆಗಮಿಸಿ, ಆರೋಪಗಳ ಕುರಿತು ಆಣೆ ಪ್ರಮಾಣ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದರು. ನಾನು ಇಲ್ಲಿಗೆ ಬರುವುದಿಲ್ಲ, ಪಲಾಯನವಾದಿ ಎಂದು ಅವರು ಹೇಳಿದ್ದಾರೆ. ಗೋವಾ ಚುನಾವಣೆ ಬಗ್ಗೆ ನಾನು ಹೋಗಬೇಕಾಗಿತ್ತು. ಆದರೆ ಇದಕ್ಕಾಗಿಯೇ ಅದನ್ನು ರದ್ದುಗೊಳಿಸಿ ಶ್ರೀ ಕ್ಷೇತ್ರಕ್ಕೆ ಬಂದಿದ್ದೇನೆ. ನಾವು ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ. ಎಲ್ಲರಿಗೂ ಇವತ್ತು ಬರುವಂತೆ ನೋಟಿಸ್ ಕೊಟ್ಟ ನಂತರ ಅವರು ಇರಬೇಕಿತ್ತು. ನಮಗಾಗಿ ಸ್ವಲ್ಪ ಕಾಯಬೇಕಿತ್ತು. ಎಲ್ಲರನ್ನೂ ಬರುವಂತೆ ಹೇಳಿ ಹಾಲಪ್ಪನವರು ಬೇಗ ಪ್ರಮಾಣ ಮಾಡಿ ಹೋಗಿದ್ದೇನೆ ಎಂದು ಹೇಳುತ್ತಿದ್ದಾರೆ ಎಂದರು.

ಇದನ್ನೂ ಓದಿ: ಮರಳು ದಂಧೆಯಿಂದ ಕಮಿಷನ್​​ ಆರೋಪ: ಧರ್ಮಸ್ಥಳದಲ್ಲಿ ಹಾಲಿ - ಮಾಜಿ ಶಾಸಕರ ಆಣೆ ಪ್ರಮಾಣ

ಹಲವು ದಿನಗಳ ವಾದ ವಿವಾದದ ಅಣೆ ಪ್ರಮಾಣವನ್ನು ಇವತ್ತು ಅಂತ್ಯಗೊಳಿಸಿದ್ದೇವೆ. ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದಿದ್ದೇವೆ ದೇವರ ದರ್ಶನ ಮಾಡಿದ್ದೇವೆ. ಆದರೆ ಹಾಲಪ್ಪ ನಮ್ಮನ್ನು ಇಲ್ಲಿಗೆ ಬರುವಂತೆ ತಿಳಿಸಿ, ಅವರೂ ಇರಬೇಕಿತ್ತು. ಆದರೆ ಅವರು ಬೇಗ ಆಗಮಿಸಿ, ಪ್ರಮಾಣ ಮಾಡಿ ಹೋಗಿದ್ದೇನೆ ಎಂದು ಹೇಳುತ್ತಿದ್ದಾರೆ. ಇಡೀ ರಾಜ್ಯ ನೋಡುತ್ತಿದೆ. ಈ ಸ್ಥಳ ನಂಬಿಕೆಯ ಮೂಲ ಸ್ಥಳವಾಗಿದೆ. ಇಲ್ಲಿ ಅವರು ಏನೂ ತಪ್ಪು ಮಾಡಿಲ್ಲ ಎಂದು ಹೇಳಿ ಹೋಗಿದ್ದಾರೆ. ಅದಕ್ಕೆ ಸಾಕ್ಷಿ ಮಂಜುನಾಥೇಶ್ವರ ಆಗಿದ್ದಾನೆ‌ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.