ಕಡಬ(ದಕ್ಷಿಣಕನ್ನಡ): ಯುವತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಡಬ ತಾಲೂಕಿನ ರೆಂಜಿಲಾಡಿ ಎಂಬಲ್ಲಿ ನಡೆದಿದೆ.
ರೆಂಜಿಲಾಡಿ ಗ್ರಾಮದ ಹೊಸಮನೆ ನಿವಾಸಿ ಚೆನ್ನಪ್ಪ ಗೌಡ ಎಂಬುವವರ ಪುತ್ರಿ ಪುಷ್ಪಲತಾ ಯಾನೆ ದೀಕ್ಷಾ (25) ಮೃತ ಯುವತಿ. ಕಡಬದ ಶೋ ರೂಮ್ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ದೀಕ್ಷಾ, ತನ್ನ ಮನೆ ಸಮೀಪವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಆತ್ಮಹತ್ಯೆಗೆ ಪ್ರಚೋದನೆ ಆರೋಪ: 22 ಜನರ ವಿರುದ್ಧ ಪ್ರಕರಣ ದಾಖಲು