ಬಂಟ್ವಾಳ : ಎತ್ತಿನಹೊಳೆ ಯೋಜನೆ ವಿರುದ್ಧ ಅಂದು ನಳಿನ್ ಕುಮಾರ್ ಕಟೀಲ್ ಪಾದಯಾತ್ರೆ ಮಾಡಿದ್ದರು. ಈಗ ತಾಕತ್ತಿದ್ದರೆ ಯೋಜನೆಯನ್ನು ನಿಲ್ಲಿಸಲಿ. ಜನರನ್ನು ಮೋಸ ಮಾಡಿ ಮತಗಳಿಸುವ ತಂತ್ರವನ್ನು ಅವರು ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಬಿ.ರಮಾನಾಥ್ ರೈ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಯುವ ಕಾಂಗ್ರೆಸ್ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಯುವ ಚೈತನ್ಯ ಕಾಂಗ್ರೆಸ್ ಕಾರ್ಯಾಗಾರ ಹಾಗೂ ಪದಗ್ರಹಣ ಸಮಾರಂಭಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಎತ್ತಿನಹೊಳೆ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿರೋಧ ಮಾಡಿದವರು, ಇಂದು ಎತ್ತಿನಹೊಳೆಯನ್ನು ನಾವೇ ಮಾಡಿದ್ದು ಎನ್ನುತ್ತಾರೆ. ಅಂದು ನಳಿನ್ ಕುಮಾರ್ ಕಟೀಲ್ ಪಾದಯಾತ್ರೆ ಮಾಡಿದ್ರು. ಈಗ ಅವರಿಗೆ ಅಧಿಕಾರ ಇದ್ದರೆ ನಿಲ್ಲಿಸುವ ಪ್ರಯತ್ನ ಮಾಡಲಿ ಎಂದು ರೈ ಸವಾಲು ಹಾಕಿದರು.
ಇನ್ನು, ಹೆಣ್ಣು ಮಕ್ಕಳಿಗೆ ಮಾತೆ ಎಂದು ಕರೆಯುವವರ ನಡವಳಿಕೆಗಳು ಆ ರೀತಿ ಇಲ್ಲ. ಬಿಜೆಪಿಯವರು ಹೇಳುವುದು ಒಂದು, ಮಾಡುವುದು ಇನ್ನೊಂದು ಎಂದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಸುಧೀರ್ ಕುಮಾರ್ ಕೊಪ್ಪ, ಸುದೀಪ್‌ಕುಮಾರ್ ಶೆಟ್ಟಿ, ಬೇಬಿ ಕುಂದರ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಸೇರಿ ಇತರ ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ: ಅಧಿಕಾರಿಗಳು ಕೊಟ್ಟ ಉತ್ತರದ ಬಗ್ಗೆ ಶಿಕ್ಷಣ ಸಚಿವ ನಾಗೇಶ್‌ರಿಗೇ ಸ್ಪಷ್ಟತೆ ಇಲ್ವಂತೆ..