ಮಂಗಳೂರು : ನಗರದಲ್ಲಿ ಮೀನುಗಾರಿಕಾ ಬೋಟ್ಗೆ ಹಡಗು ಡಿಕ್ಕಿಯಾದ ಪರಿಣಾಮ ಬೋಟ್ನಲ್ಲಿದ್ದ ಮೂವರು ಸಾವನ್ನಪ್ಪಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ದರಂತದಲ್ಲಿ ಒಂಬತ್ತು ಮಂದಿ ಕಣ್ಮರೆಯಾಗಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಅಲೆಕ್ಸಾಂಡರ್ ಸ್ಯಾರಂಗ್ (45) ಹಾಗೂ ಈತನ ಮಾವ (50) ಮತ್ತು ಮಾಣಿಕ್ ದಾಸ್(40) ಎಂಬುವರು ಮೃತಪಟ್ಟಿದಾರೆ. ಪಶ್ಚಿಮ ಬಂಗಾಳದ ಸುನಿಲ್ ದಾಸ್(34), ತಮಿಳುನಾಡಿನ ವೆಲ್ ಮುರುಗನ್ (37) ಎಂಬುವರನ್ನು ರಕ್ಷಣೆ ಮಾಡಲಾಗಿದೆ. ಬೋಟ್ನಲ್ಲಿದ್ದ 9 ಮಂದಿ ಕಣ್ಮರೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.
ಓದಿ-ಮಂಗಳೂರು ಕಡಲತೀರದಲ್ಲಿ ಬೋಟ್ಗೆ ಹಡಗು ಡಿಕ್ಕಿ : ಮೂವರು ಮೀನುಗಾರರು ಸಾವು, 9 ಮಂದಿ ಕಣ್ಮರೆ
ಘಟನೆ ಹಿನ್ನೆಲೆ : ನಿನ್ನೆ ಮಧ್ಯಾಹ್ನ ಕೇರಳದ ಕೊಯಿಕ್ಕೊಡ್‌ನಿಂದ ರಬಹ ಎಂಬ ಹೆಸರಿನ ಬೋಟ್ಗೆ ರಾತ್ರಿ 2.30ರ ವೇಳೆ ಮಂಗಳೂರಿನ ಆಳಸಮುದ್ರದಲ್ಲಿ 43 ನಾಟಿಕಲ್ ಮೈಲು ದೂರದಲ್ಲಿ ಸರಕು ಹಡಗೊಂದು ಡಿಕ್ಕಿ ಹೊಡೆದಿತ್ತು. ಬೋಟ್ನಲ್ಲಿ 7 ಮಂದಿ ತಮಿಳುನಾಡು ಮತ್ತು 7 ಜನ ಪಶ್ಚಿಮ ಬಂಗಾಳದ ಮೀನುಗಾರರಿದ್ದರು. ಡಿಕ್ಕಿ ರಭಸಕ್ಕೆ ಬೋಟ್ ಸಮುದ್ರದಲ್ಲಿ ಮಗುಚಿ ಬಿದ್ದಿದೆ.
ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ರಕ್ಷಿಸಿದ್ದಾರೆ. ಶೋಧದ ವೇಳೆ ಮೂವರ ಮೃತದೇಹ ಸಿಕ್ಕಿದೆ. ಒಂಬತ್ತು ಮಂದಿ ಕಣ್ಮರೆಯಾಗಿದ್ದು, ಕೆಲವರು ಮುಳುಗಿದ ಬೋಟ್ನಲ್ಲಿ ಸಿಲುಕಿರಬಹುದೆಂದು ಶಂಕಿಸಲಾಗಿದೆ. ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ, ಮೂರು ಹಡಗು ಮತ್ತು ಏರ್ ಕ್ರಾಪ್ಟ್ ಮೂಲಕ ಕಾರ್ಯಾಚರಣೆ ಮುಂದುವರಿಸಿದ್ದಾರೆ.