ಮಂಗಳೂರು : ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂ ಹಿನ್ನೆಲೆ ಊಟವಿಲ್ಲದೆ ಪರದಾಡುತ್ತಿದ್ದ ನಿರ್ಗತಿಕರಿಗೆ ಪಾಂಡೇಶ್ವರದಲ್ಲಿರುವ ಹೋಟೆಲ್ ಶ್ರೀ ಗಣೇಶ್ ಹಾಗೂ ಪಾಂಡೇಶ್ವರ ಅಗ್ನಿಶಾಮಕ ಸಿಬ್ಬಂದಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ವಾರಾಂತ್ಯ ಕರ್ಫ್ಯೂ ಹಿನ್ನೆಲೆ ಎಲ್ಲವೂ ಸಂಪೂರ್ಣ ಬಂದ್ ಆಗಿದೆ. ನಗರದ ನೆಹರೂ ಮೈದಾನ ಪರಿಸರದಲ್ಲಿ ಸುಮಾರು 300ಕ್ಕೂ ಅಧಿಕ ಮಂದಿ ನಿರಾಶ್ರಿತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ.
ನಿನ್ನೆಯೂ ಇದೇ ರೀತಿ ಎಲ್ಲರಿಗೂ ಊಟದ ಪೊಟ್ಟಣ ವಿತರಿಸಿ ಹಸಿದ ಹೊಟ್ಟೆಯನ್ನು ತಣಿಸಿರುವ ಪಾಂಡೇಶ್ವರದಲ್ಲಿರುವ ಹೋಟೆಲ್ ಶ್ರೀ ಗಣೇಶ್ ಹಾಗೂ ಪಾಂಡೇಶ್ವರ ಅಗ್ನಿಶಾಮಕ ಸಿಬ್ಬಂದಿ ಇಂದೂ ಕೂಡ ಊಟ ವಿತರಿಸಿದೆ.