ETV Bharat / city

ಗುಡ್ಡದ ಮೇಲೆ ಅರಳಿದ ಅಡಿಕೆ ತೋಟ : ರಾಮಕುಂಜದ ಎಂಜಿನಿಯರ್​​ನ ವಿಶಿಷ್ಟ ಸಾಧನೆ - Engineer planted a nut on the hill

ನಿವೃತ್ತ ಉಪನ್ಯಾಸಕ, ಜ್ಯೋತಿಷಿ ಮಾಧವ ಆಚಾರ್ಯ ಇಜ್ಜಾವು ಅವರ ಪುತ್ರ, ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿರುವ ಶಿವಪ್ರಸಾದ್‌ ಆಚಾರ್ಯ ಕಟ್ಟಡ ನಿರ್ಮಾಣ ವೃತ್ತಿಯವರು. ಜತೆಗೆ ಹಿರಿಯರಿಂದ ಬಂದ ಭೂಮಿಯಲ್ಲಿ ವಿಶೇಷವಾದ ರೀತಿಯಲ್ಲಿ ಅಡಿಕೆ ಕೃಷಿ ಮಾಡಲು ಮುಂದಾಗಿದ್ದಾರೆ..

Engineer planted a nut on the hill
ರಾಮಕುಂಜದಲ್ಲಿ ಗುಡ್ಡದ ಮೇಲೆ ಅರಳಿದ ಅಡಿಕೆ ತೋಟ
author img

By

Published : Jan 30, 2022, 12:39 PM IST

ಕಡಬ(ದಕ್ಷಿಣಕನ್ನಡ): ಅಡಿಕೆ ಬೆಳೆ ಒಳ್ಳೆಯ ಬೆಲೆ ಸಿಗುತ್ತಿರುವುದರಿಂದ ಕರಾವಳಿ ಭಾಗದ ಅನೇಕ ಯುವಕರು ಅಡಿಕೆ ಕೃಷಿಯತ್ತ ಒಲವು ತೋರುತ್ತಿದ್ದಾರೆ. ಇದೀಗ ಕಡಬ ತಾಲೂಕಿನ ರಾಮಕುಂಜದ ಎಂಜಿನಿಯರ್‌ವೊಬ್ಬರು ಗುಡ್ಡದ ಮೇಲೆ ಅಡಿಕೆ ತೋಟ ಅರಳಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ರಾಮಕುಂಜದಲ್ಲಿ ಗುಡ್ಡದ ಮೇಲೆ ಅರಳಿದ ಅಡಿಕೆ ತೋಟ

ಹಳೆನೇರೆಂಕಿ ಗ್ರಾಮದ ಇಜ್ಜಾವು ಶಿವಪ್ರಸಾದ್‌ ಆಚಾರ್ಯ ಎಂಬುವರು ಮನೆಯ ಹಿಂಬದಿಯ ಗುಡ್ಡದ ಮೇಲೆ ಸುಮಾರು 13 ಎಕರೆ ಜಾಗದಲ್ಲಿ ಪ್ರತ್ಯೇಕವಾದ ರೀತಿಯಲ್ಲಿ ಗುಂಡಿಗಳನ್ನು ತೋಡಿ ಅಡಿಕೆ ಗಿಡಗಳನ್ನು ನಾಟಿ ಮಾಡಿದ್ದಾರೆ.

ಗುಡ್ಡವನ್ನು ಇಳಿಜಾರು ರೀತಿಯಲ್ಲಿ ತಟ್ಟು ಮಾಡಿ, ನಡುನಡುವೆ ರಸ್ತೆ, ಎತ್ತರದಲ್ಲಿ ಭಾರೀ ಗಾತ್ರದ ನೀರಿನ ಟ್ಯಾಂಕ್‌ ನಿರ್ಮಿಸಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿದ್ದಾರೆ.

Engineer planted a nut on the hill
ಮೆಕ್ಯಾನಿಕಲ್‌ ಎಂಜಿನಿಯರ್‌ ಶಿವಪ್ರಸಾದ್‌ ಆಚಾರ್ಯ

ನಿವೃತ್ತ ಉಪನ್ಯಾಸಕ, ಜ್ಯೋತಿಷಿ ಮಾಧವ ಆಚಾರ್ಯ ಇಜ್ಜಾವು ಅವರ ಪುತ್ರ, ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿರುವ ಶಿವಪ್ರಸಾದ್‌ ಆಚಾರ್ಯ ಕಟ್ಟಡ ನಿರ್ಮಾಣ ವೃತ್ತಿಯವರು. ಜತೆಗೆ ಹಿರಿಯರಿಂದ ಬಂದ ಭೂಮಿಯಲ್ಲಿ ವಿಶೇಷವಾದ ರೀತಿಯಲ್ಲಿ ಅಡಿಕೆ ಕೃಷಿ ಮಾಡಲು ಮುಂದಾಗಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

6 ಗಿಡಗಳ ನಡುವೆ ರಸ್ತೆ ನಿರ್ಮಾಣ : ಹಿಟಾಚಿ ಇದ್ದು, ಕೊರೊನಾ ಕಾಲದಲ್ಲಿ ಹಿಟಾಚಿಗೆ ಕೆಲಸ ಇರಲಿಲ್ಲ. ಈ ಸಮಯದಲ್ಲಿ ಸ್ವಂತ ಕೃಷಿಗೆ ಹಿಟಾಚಿ ಬಳಸಲು ನಿರ್ಧರಿಸಿ ಗುಡ್ಡವನ್ನು ತಟ್ಟು ಮಾಡುವ ಕೆಲಸ ಆರಂಭಿಸಿದ್ದರು. ಈ ಕಾರ್ಯಕ್ಕೆ ಸರಿ ಸುಮಾರು ಆರು ತಿಂಗಳು ಹಿಡಿಯಿತು. ಸುಮಾರು 2.5 ಅಡಿ ಅಗಲ, 2 ಅಡಿ ಆಳದ ಗುಂಡಿಗಳನ್ನು ತೋಡಿ ಅಡಿಕೆ ಗಿಡ ನೆಡಲಾಗಿದೆ. ಜತೆಗೆ 6 ಗಿಡಗಳ ನಡುವೆ ರಸ್ತೆ ನಿರ್ಮಿಸಲಾಗಿದೆ. ಭವಿಷ್ಯದಲ್ಲಿ ಗಿಡಗಳಿಗೆ ಔಷಧ ಸಿಂಪಡನೆ ಮಾಡಲು, ಅಡಿಕೆ ಫ‌ಸಲು ಕೊಯ್ಯಲು ಮತ್ತು ಸಾಗಾಟಕ್ಕೆ ಉಪಯೋಗಿಸುವ ದೂರದೃಷ್ಟಿಯಿಂದ ಈ ರಸ್ತೆ ನಿರ್ಮಿಸಲಾಗಿದೆ.

4 ಸಾವಿರ ಅಡಿಕೆ ಗಿಡ ನಾಟಿ : ವ್ಯವಸ್ಥಿತವಾಗಿ ನಿರ್ಮಿಸಲಾದ ತೋಟದಲ್ಲಿ ಅರ್ಧದಷ್ಟು ಮಂಗಳಾ ಮತ್ತು ಇನ್ನರ್ಧದಷ್ಟು ರತ್ನಗಿರಿ ತಳಿಯ ಸುಮಾರು 4 ಸಾವಿರ ಅಡಿಕೆ ಗಿಡಗಳನ್ನು ನಾಟಿ ಮಾಡಲಾಗಿದೆ. ಗುಡ್ಡದ ಎತ್ತರದಲ್ಲಿ 30 ಅಡಿ ಸುತ್ತಳತೆ ಮತ್ತು 25 ಅಡಿ ಆಳದ ಟ್ಯಾಂಕ್‌ ನಿರ್ಮಿಸಿದ್ದು, ಟ್ಯಾಂಕ್‌ನ ಸುತ್ತ 14 ಅಡಿಗಳಷ್ಟು ಮಣ್ಣು ಹಾಗೇ ಬಿಡಲಾಗಿದೆ. 2 ಕೊಳವೆ ಬಾವಿಗಳಿಂದ ಈ ಟ್ಯಾಂಕ್‌ಗೆ ನೀರು ತುಂಬಲಾಗುತ್ತದೆ.

ಶಿವಪ್ರಸಾದ್‌ ರೂಪಿಸಿರುವ ವಿಶೇಷ ತೋಟ ಸಾಮಾಜಿಕ ಜಾಲ ತಾಣದಲ್ಲಿ ಗಮನ ಸೆಳೆದಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅಡಿಕೆ ತೋಟದ ವಿಹಂಗಮ ನೋಟದ ವಿಡಿಯೋ ಜನಮೆಚ್ಚುಗೆ ಗಳಿಸಿದೆ.

ಭವಿಷ್ಯದ ಮುಂದಾಲೋಚನೆಯಂತೆ ಒಂದು ಗಿಡಕ್ಕೆ ಎರಡು ಡ್ರಿಪ್‌ ಅಳವಡಿಸಲಾಗಿದೆ. ಒಂದು ತಾಸಿನಲ್ಲಿ 8 ಲೀಟರ್‌ ನೀರು ಗಿಡಕ್ಕೆ ಬೀಳುತ್ತದೆ. ಅಷ್ಟೂ ನಾಲ್ಕು ಸಾವಿರ ಗಿಡಗಳಿಗೆ ಕೇವಲ ಒಂದು ತಾಸಿನಲ್ಲಿ ನೀರು ಉಣಿಸಲಾಗುತ್ತದೆ. ವಿಶೇಷವೆಂದರೆ ಇದೇ ಹನಿ ನೀರು ವ್ಯವಸ್ಥೆಯಲ್ಲಿ 20 ಸಾವಿರ ಗಿಡಗಳಿಗೆ ಏಕಕಾಲದಲ್ಲಿ ನೀರುಣಿಸಬಹುದು.

ಮಾತ್ರವಲ್ಲದೇ ಈ ಹನಿ ನೀರಾವರಿ ಯೋಜನೆಯಲ್ಲಿ ವೆಂಚರ್‌ ಅಳವಡಿಸಲಾಗಿದೆ. ಅದರ ಮೂಲಕ ಗಿಡಗಳಿಗೆ ರಸಗೊಬ್ಬರವನ್ನು ದ್ರವರೂಪದಲ್ಲಿ ಪೂರೈಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಈಗಿನ ನಿರ್ವಹಣೆ ದಿನದಲ್ಲಿ ಕೇವಲ ಒಂದು ತಾಸು ಅಷ್ಟೇ.. ಈ ಅಡಿಕೆ ತೋಟದ ನಿರ್ಮಾಣಕ್ಕೆ ಸುಮಾರು 20 ಲಕ್ಷ ರೂ. ಖರ್ಚು ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ : 2.9ರಷ್ಟು ತೀವ್ರತೆ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.