ETV Bharat / city

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಎಂಟು ಶಾಲೆಗಳಿಗೆ ಹಾನಿ: ಶಿಕ್ಷಣ ವ್ಯವಸ್ಥೆ ಮೇಲೆ ದುಷ್ಪರಿಣಾಮ - National Highway Works

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಕೆಲವು ಶಾಲೆಗಳಿಗೆ ಭಾಗಶಃ ಪರಿಣಾಮ ಬೀರಿದರೆ, ಇನ್ನು ಕೆಲವು ಶಾಲೆಗಳು ಸಂಪೂರ್ಣವಾಗಿ ನೆಲಸಮಗೊಳ್ಳಲಿವೆ.

eight-schools-damaged-due-to-national-highway-works
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಎಂಟು ಶಾಲೆಗಳಿಗೆ ಹಾನಿ
author img

By

Published : Jul 14, 2022, 6:42 PM IST

ಮಂಗಳೂರು : ರಾಷ್ಟ್ರೀಯ ಹೆದ್ದಾರಿಯ ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಶಾಲೆಗಳು ಭೂಮಿ ಅಥವಾ ಆಸ್ತಿ ಕಳೆದುಕೊಳ್ಳುತ್ತಿದ್ದು, ಇದು ಶೈಕ್ಷಣಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಕೆಲವು ಶಾಲೆಗಳಿಗೆ ಭಾಗಶಃ ಪರಿಣಾಮ ಬೀರಿದರೆ, ಇನ್ನು ಕೆಲವು ಶಾಲೆಗಳು ಸಂಪೂರ್ಣವಾಗಿ ನೆಲಸಮಗೊಳ್ಳಲಿವೆ.

ಇಂತಹ ಶಾಲೆಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಇದಕ್ಕಾಗಿ ಎನ್‌ಎಚ್‌ಎಐ ಒಟ್ಟು 3.7 ಕೋಟಿ ರೂ.ಗಿಂತ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಕುಡುಪು ಮತ್ತು ತಿರುವೈಲ್‌ನ ಎರಡು ಶಾಲೆಗಳಿಗೆ ನಂತೂರ್‌ - ಸಾಣೂರು ಹೆದ್ದಾರಿ ಯೋಜನೆಗೆ ಭೂಮಿಯನ್ನು ಬಿಟ್ಟುಕೊಡಬೇಕು ಎಂದು ಹೇಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆದಿಲ, ಮಾಣಿ, ಬೆಳ್ತಂಗಡಿ, ಉಪ್ಪಿನಂಗಡಿ, ಪಡುಪಣಂಬೂರು ಮತ್ತು ಉಚ್ಚಿಲಗೂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ರಸ್ತೆ ಯೋಜನೆಗಳಿಗೆ ದಾರಿ ಮಾಡಿಕೊಡಲಿದ್ದು, ಪರಿಹಾರ ಈಗಾಗಲೇ ನೀಡಲಾಗಿದೆ ಎಂದು ದ.ಕ.ಜಿಲ್ಲೆಯ ಡಿಡಿಪಿಐಕೆ ಸುಧಾಕರ್ ತಿಳಿಸಿದ್ದಾರೆ.

ಇನ್ನೂ ಬಂಟ್ವಾಳ ತಾಲೂಕಿನ ಮಾಣಿ ಮತ್ತು ಕೆದಿಲದ ಶಾಲೆಗಳು ಕಾಂಪೌಂಡ್ ಗೋಡೆಗಳನ್ನು ಕಳೆದುಕೊಳ್ಳಲಿದ್ದು, ಅದನ್ನು ಪುನರ್ ನಿರ್ಮಿಸಲು ನಿರ್ಧರಿಸಲಾಗಿದೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಮತ್ತು ಮಂಗಳೂರು ಉತ್ತರದ ಪಡು ಪಣಂಬೂರಿನ ಶಾಲೆಗಳು ಕಟ್ಟಡದ ಗೋಡೆಗಳನ್ನು ಕಳೆದುಕೊಳ್ಳುತ್ತವೆ. ಇದಕ್ಕಾಗಿ ಎನ್‌ಎಚ್‌ಎಐ 1.7 ಕೋಟಿ ರೂ. ಪಾವತಿಸಿದ್ದು, ಶಾಲೆಯನ್ನು ಪುನರ್‌ ನಿರ್ಮಿಸಲು ಜಾಗ ಹುಡುಕುತ್ತಿದ್ದಾರೆ. ಇದಕ್ಕಾಗಿ ಜಮೀನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ.

ಪಡುಪಣಂಬೂರು ಶಾಲೆಯು ಒಂದಷ್ಟು ಭೂಮಿಯನ್ನು ಕಳೆದುಕೊಳ್ಳಲಿದ್ದು, ಅದನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿದೆ. ಅದೇ ರೀತಿ ಕುಡುಪು ಶಾಲೆ ಸಂಪೂರ್ಣ ಕೆಡವಲ್ಪಡಲಿದ್ದು, ತಿರುವೈಲ್ ಶಾಲೆ ಅಲ್ಪಸ್ವಲ್ಪ ಭೂಮಿಯನ್ನು ಕಳೆದುಕೊಳ್ಳಲಿದೆ. ಕುಡುಪು ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಕುರಿತು ಚರ್ಚೆಗಳು ನಡೆಯುತ್ತಿದೆ. ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗೆ ಕೆಲವು ಶಾಲೆಗಳಲ್ಲಿ ಶೈಕ್ಷಣಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿದೆ.

ಇದನ್ನೂ ಓದಿ : ಒಂಟಿ ತಾಯಿಯ ಮಗಳೆಂದು ಶಾಲೆಗೆ ಸೇರಿಸಿಕೊಳ್ಳಲು ನಿರಾಕರಿಸಿದ ಶಾಲೆ: ಮಹಿಳೆಯ ಗಂಭೀರ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.