ETV Bharat / city

ಡ್ಯಾನ್ಸರ್ ಕಿಶೋರ್ ಶೆಟ್ಟಿ ಡ್ರಗ್ಸ್ ಕೇಸ್ :ಮುಂಬೈನಿಂದ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಪೆಡ್ಲರ್ ಬಂಧನ - ಮಂಗಳೂರು ಸುದ್ದಿ

ಮುಂಬೈನಿಂದ ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಮಂಗಳೂರಿನ ಬೆಂಗರೆ ನಿವಾಸಿ ಶಾನ್ ನವಾಝ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Drugs Peddler arrest for supplying drugs from Mumbai
ಮುಂಬೈನಿಂದ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಪೆಡ್ಲರ್ ಬಂಧನ
author img

By

Published : Sep 28, 2020, 9:55 PM IST

ಮಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ ಬಳಿಕ ಪ್ರಕರಣ‌ ಬೆನ್ನತ್ತಿರುವ ಸಿಸಿಬಿ ಪೊಲೀಸರು, ಮುಂಬೈನಿಂದ ಡ್ರಗ್ಸ್ ಪೂರೈಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಮಂಗಳೂರಿನ ಬೆಂಗರೆ ನಿವಾಸಿ ಶಾನ್ ನವಾಝ್ (35 ) ಬಂಧಿತ ಆರೋಪಿ. ಈತ ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗೆ ಮುಂಬೈನಿಂದ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ಈತನ ಮೇಲೆ ಈ ಹಿಂದೆ ನಾರ್ಕೋಟಿಕ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನದ ಬಳಿಕ ಅಕೀಲ್ ನೌಶೀಲ್, ತರುಣ್ ರಾಜ್, ಮಣಿಪುರದ ಅಸ್ಕಾ , ಮುಹಮ್ಮದ್ ಶಾಕೀರ್ ಎಂಬುವವರನ್ನು ಬಂಧಿಸಲಾಗಿತ್ತು.

ಇದೀಗ ಶಾನ್ ನವಾಝ್ ಬಂಧನದ ಮೂಲಕ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಶಾನ್ ನವಾಝ್ ಮುಂಬೈನಿಂದ ಮಂಗಳೂರಿನಲ್ಲಿರುವ ಶಾಕೀರ್​​ಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ಶಾಕೀರ್ ಅದನ್ನು ನೌಸೀಲ್ ಮತ್ತು ಕಿಶೋರ್​ಗೆ ಮಾರಾಟ ಮಾಡುತ್ತಿದ್ದ. ನೌಸೀಲ್ ಮತ್ತು ಕಿಶೋರ್ ಮಂಗಳೂರಿನಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಡ್ರಗ್ಸ್​ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.