ETV Bharat / city

ಹಿರಿಯ ನಾಗರಿಕರಿಗೆ ಸೋಂಕಿನ ಲಕ್ಷಣ ಕಂಡು ಬಂದ್ರೆ ತಕ್ಷಣ ತಪಾಸಣೆ ಮಾಡಿಸಿ : ದ.ಕ ಜಿಲ್ಲಾಧಿಕಾರಿ - District Collector Sindhu B. Rupesh meeting

ಡಾ.ಹಂಸರಾಜ್ ಆಳ್ವ ಮಾತನಾಡಿ, ಮಳೆಗಾಲದಲ್ಲಿ ಸಾಮಾನ್ಯ ಎಲ್ಲಾ ಮನೆಯಲ್ಲಿಯೂ ಸಾಮಾನ್ಯ ಜ್ವರ, ಶೀತ ಬರುತ್ತದೆ. ಆದರೆ, ಈ ತರಹ ಲಕ್ಷಣ ಕಂಡು ಬಂದಲ್ಲಿ ಅಂತವರನ್ನ ಪ್ರತ್ಯೇಕವಾಗಿ ಇರಿಸಿ ಶುಶ್ರೂಷೆ ಮಾಡಬೇಕು. ಅದೇ ರೀತಿ ಹಿರಿಯ ನಾಗರಿಕರಿಗೆ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿದ್ದಲ್ಲಿ ಉತ್ತಮ..

District Collector Sindhu B. Rupesh meeting with doctors
ಹಿರಿಯ ನಾಗರೀಕರಿಗೆ ಸೋಂಕಿನ ಲಕ್ಷಣ ಕಂಡುಬಂದಲ್ಲಿ ತಕ್ಷಣ ತಪಾಸಣೆ ಮಾಡಿಸಿಕೊಳ್ಳಿ: ದ.ಕ.ಜಿಲ್ಲಾಧಿಕಾರಿ
author img

By

Published : Jul 11, 2020, 9:46 PM IST

ಮಂಗಳೂರು: ಹಿರಿಯ ನಾಗರಿಕರಿಗೆ ಜ್ವರ, ಶೀತ ಮತ್ತಿತರ ಸೋಂಕಿನ ಲಕ್ಷಣ ಕಂಡು ಬಂದಲ್ಲಿ‌ ತಕ್ಷಣ ಆಸ್ಪತ್ರೆಗೆ ಬಂದು ತಪಾಸಣೆ ನಡೆಸುವುದು ಅತೀ ಅಗತ್ಯ. ಕಾಯಿಲೆ ಬಂದಾಗ ಆಸ್ಪತ್ರೆಗೆ ‌ಬರಲು ಹೆದರುವ ಅಗತ್ಯವಿಲ್ಲ. ಶೀಘ್ರವಾಗಿ ತಪಾಸಣೆ ಮಾಡಿ, ಚಿಕಿತ್ಸೆ ಪಡೆದಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ಹಿರಿಯ ನಾಗರಿಕರಿಗೆ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ತಕ್ಷಣ ತಪಾಸಣೆ ಮಾಡಿಸಿಕೊಳ್ಳಿ..

ದ.ಕ.ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿರುವ ಭೀತಿ ಹೋಗಲಾಡಿಸಲು, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಜ್ಞ ವೈದ್ಯರ ತಂಡದೊಂದಿಗೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಸಭೆ ನಡೆಸಿದರು.

ಡಾ.ಹಂಸರಾಜ್ ಆಳ್ವ ಮಾತನಾಡಿ, ಮಳೆಗಾಲದಲ್ಲಿ ಸಾಮಾನ್ಯ ಎಲ್ಲಾ ಮನೆಯಲ್ಲಿಯೂ ಸಾಮಾನ್ಯ ಜ್ವರ, ಶೀತ ಬರುತ್ತದೆ. ಆದರೆ, ಈ ತರಹ ಲಕ್ಷಣ ಕಂಡು ಬಂದಲ್ಲಿ ಅಂತವರನ್ನ ಪ್ರತ್ಯೇಕವಾಗಿ ಇರಿಸಿ ಶುಶ್ರೂಷೆ ಮಾಡಬೇಕು. ಅದೇ ರೀತಿ ಹಿರಿಯ ನಾಗರಿಕರಿಗೆ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿದ್ದಲ್ಲಿ ಉತ್ತಮ ಎಂದರು. ಉಳ್ಳಾಲದಲ್ಲಿ ರ್ಯಾಂಡಮ್ ತಪಾಸಣೆ ನಡೆಸಲಾಗುತ್ತದೆ. ಅದೇ ರೀತಿ ಮಂಗಳೂರಿನಲ್ಲಿ ಯಾಕೆ ತಪಾಸಣೆ ನಡೆಯುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮಲ್ಲಿ ಒಂದು ದಿನದಲ್ಲಿ ಕೇವಲ 500 ಮಂದಿಯ ಗಂಟಲು ದ್ರವ ತಪಾಸಣೆ ಮಾಡುವಷ್ಟು ಮಾತ್ರ ನಮ್ಮಲ್ಲಿ ಸಾಮರ್ಥ್ಯವಿದೆ ಎಂದರು.

ಡಾ.ಶರತ್ ಮಾತನಾಡಿ, ಮಂಗಳೂರಿನ ಎಲ್ಲಾ ಪ್ರದೇಶಗಳಿಂದಲೂ ಸೋಂಕಿತರು ಕಂಡು ಬರುತ್ತಿದ್ದಾರೆ ಎಂದು ಹೆದರುವ ಅಗತ್ಯವಿಲ್ಲ. ಆದರೆ, ಎಲ್ಲರೂ ಸೋಂಕಿತರೆಂಬಂತೆ ಬಿಂಬಿಸಿ, ಎಲ್ಲರಿಂದಲೂ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ. ‌ಯಾರೊಂದಿಗೂ ಮಾಸ್ಕ್ ಧರಿಸದೆ ಮಾತನಾಡಬಾರದು. ಮನೆಯಲ್ಲಿ ಯಾರಿಗೂ ಮಾಮೂಲಿ‌ ಶೀತ ಜ್ವರ ಬಂದರೂ ಸಾಕಷ್ಟು ಜಾಗ್ರತೆ ವಹಿಸಿ ಅವರಿಂದ ಸಾಕಷ್ಟು ದೂರ ಇರಲು ಪ್ರಯತ್ನಿಸಿ ಎಂದರು.

ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಸದಾಶಿವ ಮಾತನಾಡಿ, ದ.ಕ.ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ, ಜಿಲ್ಲಾಧಿಕಾರಿಯವರು ಈ ಅಧ್ಯಯನಕ್ಕಾಗಿ 13 ಮಂದಿ ವೈದ್ಯಾಧಿಕಾರಿಗಳ ತಂಡ ರಚಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 38 ಮಂದಿ‌ ಮೃತಪಟ್ಟಿದ್ದಾರೆ. ಈ ಬಗ್ಗೆ ವೈದ್ಯಾಧಿಕಾರಿಗಳ ತಂಡ ತನಿಖೆ ಮಾಡಲಿದೆ. ಜಿಲ್ಲೆಯಲ್ಲಿ ಮೃತಪಟ್ಟ 38 ಮಂದಿಯಲ್ಲಿ ಮೂವರು ಭಟ್ಕಳದವರು, ಒಬ್ಬರು ಚಿತ್ರದುರ್ಗದವರು, ಒಬ್ಬರು ಮಡಿಕೇರಿಯವರು ಹಾಗೂ ಉಳಿದವರು ದ.ಕ.ಜಿಲ್ಲೆಯವರಾಗಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.