ETV Bharat / city

'ದಿ ಕಾಶ್ಮೀರ ಫೈಲ್ಸ್' ವೀಕ್ಷಿಸಿದ ದ-ಕ ಮಠಾಧೀಶರು : ಸಿನಿಮಾ ನೋಡಿ ಕಣ್ಣಲ್ಲಿ ನೀರು ಬರುತ್ತೆ ಎಂದ ವಜ್ರದೇಹಿಶ್ರೀ - ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮಠಾಧೀಶರು

ಸಿನೆಪೊಲೀಸ್ ಚಿತ್ರ ಮಂದಿರದಲ್ಲಿ 'ದಿ ಕಾಶ್ಮೀರ ಫೈಲ್ಸ್' ಸಿನಿಮಾವನ್ನು ಯೋಗಾನಂದ ಸರಸ್ವತಿ ಸ್ವಾಮೀಜಿ, ಡಾ.ಧರ್ಮಪಾಲನಾಥ ಸ್ವಾಮೀಜಿ, ರಾಜಶೇಖರಾನಂದ ಸ್ವಾಮೀಜಿ, ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸೇರಿ ವಿವಿಧ ಸ್ವಾಮೀಜಿಗಳು ವೀಕ್ಷಿಸಿದರು..

ದಿ ಕಾಶ್ಮೀರ ಫೈಲ್ಸ್ ವೀಕ್ಷಿಸಿದ ದ-ಕ ಮಠಾಧೀಶರು
dakshina kannada district swamijis-watch the kashmir files
author img

By

Published : Mar 29, 2022, 3:22 PM IST

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮಠಾಧೀಶರು ಮಂಗಳೂರು ನಗರದ ಸಿಟಿ ಸೆಂಟರ್ ಮಾಲ್​​ನಲ್ಲಿರುವ ಸಿನೆಪೊಲೀಸ್ ಚಿತ್ರ ಮಂದಿರದಲ್ಲಿ 'ದಿ ಕಾಶ್ಮೀರ ಫೈಲ್ಸ್' ಸಿನಿಮಾ ವೀಕ್ಷಿಸಿದರು. ವಿಶ್ವ ಹಿಂದೂ ಪರಿಷತ್ ಮಠಾಧೀಶರಿಗೆ 'ದಿ ಕಾಶ್ಮೀರ ಫೈಲ್ಸ್' ವೀಕ್ಷಣೆಗೆ ವ್ಯವಸ್ಥೆ ಮಾಡಿತ್ತು.

ಕೊಂಡೆವೂರಿನ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಾವೂರು ಆದಿಚುಂಚನಗಿರಿ ಶಾಖಾ ಮಠದ ಡಾ.ಧರ್ಮಪಾಲನಾಥ ಸ್ವಾಮೀಜಿ, ಕದ್ರಿ ಯೋಗೀಶ್ವರ (ಜೋಗಿ) ಮಠದ ನಿರ್ಮಲನಾಥಜೀ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕೇಮಾರು ಮಠದ ಈಶವಿಠಲದಾಸ ಸ್ವಾಮೀಜಿ, ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ, ಒಡಿಯೂರಿನ ಸಾಧ್ವಿ ಮಾತಾನಂದಮಯಿ, ಚಿಲಿಂಬಿ ಮಠದ ವಿದ್ಯಾನಂದ ಸರಸ್ವತಿ, ಸ್ವಾಮೀಜಿಗಳು ಸೇರಿದಂತೆ ಸ್ವಾಮೀಜಿಗಳ ಶಿಷ್ಯ ವರ್ಗ ಸಹ ಸಿನಿಮಾ ವೀಕ್ಷಣೆ ಮಾಡಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, 'ದಿ ಕಾಶ್ಮೀರ ಫೈಲ್ಸ್' ಸಿನಿಮಾ ವೀಕ್ಷಿಸಿದ ಬಳಿಕ ರಕ್ತ ಕುದಿಯುವಂತಾಯಿತು. ಅಲ್ಲದೇ, ಸಿನಿಮಾ ನೋಡುವ ಸಂದರ್ಭ ಕಣ್ಣಲ್ಲಿ ನೀರು ಬರುತ್ತದೆ ಎಂದರು.

'ದಿ ಕಾಶ್ಮೀರ ಫೈಲ್ಸ್' ಚಿತ್ರ ವೀಕ್ಷಿಸಿದ ದ-ಕ ಮಠಾಧೀಶರು.. ಸಿನಿಮಾ ನೋಡಿ ಕಣ್ಣಲ್ಲಿ ನೀರು ಬರುತ್ತೆ ಎಂದ ವಜ್ರದೇಹಿಶ್ರೀ..

ದೇಶದ ಹಿಂದಿನ ಸರ್ಕಾರವು ಸಮಾಜವನ್ನು ಯಾವ ರೀತಿಯಲ್ಲಿ ನೋಡಿತು. ಭಯೋತ್ಪಾದನೆಯ ಕರಿನೆರಳಿನ ಛಾಯೆ ಭಾರತದ ಮೇಲೆ ಹೇಗೆ ಬಿತ್ತು. ಪಾಕಿಸ್ತಾನ ಕುಮ್ಮಕ್ಕು ನೀಡಿ ಹೇಗೆ ಭಯೋತ್ಪಾದನೆಯನ್ನು ಬೆಳೆಸಿತು ಎಂಬುದನ್ನು ಈ ಸಿನಿಮಾ ಮೂಲಕ ಅರ್ಥಮಾಡಿಕೊಳ್ಳಬಹುದು. ನೈಜ ಘಟನೆ ಆಧಾರಿತ ಸಿನಿಮಾ ನಿರ್ಮಿಸಿರುವ ನಿರ್ದೇಶಕರಿಗೆ ಹ್ಯಾಟ್ಸಪ್ ಹೇಳಬೇಕು ಎಂದು ವಜ್ರದೇಹಿಶ್ರೀ ಹೇಳಿದರು.

ಇದನ್ನೂ ಓದಿ: ಭಗವದ್ಗೀತೆ, ಕುರಾನ್​ನಲ್ಲಿ ಕೆಟ್ಟ ಸಂಗತಿ ಇದ್ದರೆ ಎರಡನ್ನೂ ಅರಬ್ಬೀ ಸಮುದ್ರಕ್ಕೆ ಬಿಸಾಕಿ : ಸಿ.ಟಿ.ರವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.