ETV Bharat / city

ಎಪಿಎಂಸಿ ಮೂಲಕ ಸಂತೆ ಮಾರುಕಟ್ಟೆಗೆ 59 ಸಂಪರ್ಕ ರಸ್ತೆ ನಿರ್ಮಾಣ: ಪದ್ಮನಾಭ ರೈ - Central Market Mangalore

ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಬಂಟ್ವಾಳ ಎಪಿಎಂಸಿ ತೆಗೆದುಕೊಂಡ ಕ್ರಮ ರಾಜ್ಯದ ಇತರೆ ಎಪಿಎಂಸಿಗಳಿಗೂ ಪ್ರಯೋಜನವಾಯಿತು. ಮಾಜಿ ಸಚಿವ ಬಿ.ರಮಾನಾಥ ರೈ ಅವರ ಮುತುವರ್ಜಿಯಲ್ಲಿ ಇದು ಸಾಧ್ಯವಾಗಿದೆ ಎಂದು ನಿರ್ಗಮನ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ಹೇಳಿದ್ದಾರೆ.

Construction of 59 connecting roads to APMC from market: Padmanabha Rai
ಎಪಿಎಂಸಿ ಮೂಲಕ ಸಂತೆ ಮಾರುಕಟ್ಟೆಗೆ 59 ಸಂಪರ್ಕ ರಸ್ತೆ ನಿರ್ಮಾಣ: ಪದ್ಮನಾಭ ರೈ
author img

By

Published : Jun 18, 2020, 5:09 PM IST

ಬಂಟ್ವಾಳ (ದಕ್ಷಿಣ ಕನ್ನಡ): ಎಪಿಎಂಸಿಯಲ್ಲಿ ತನ್ನ ಎರಡು ಅವಧಿಯ ಅಧಿಕಾರದಲ್ಲಿ 1.7 ಕೋಟಿ ರೂ. ವೆಚ್ಚದ 59 ರಸ್ತೆಗಳನ್ನು ನಿರ್ಮಿಸಲಾಗಿದ್ದು, ಇದು ತಾಲೂಕಿನ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುತ್ತದೆ ಎಂದು ನಿರ್ಗಮನ ಅಧ್ಯಕ್ಷ ಪದ್ಮನಾಭ ರೈ ಹೇಳಿದ್ದಾರೆ.

ಮಾಣಿ, ಮಣಿನಾಲ್ಕೂರು ಮತ್ತು ಸಾಲೆತ್ತೂರುಗಳಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಲಾಗಿದೆ ಎಂದರು. ಕೈಕುಂಜೆಯಲ್ಲಿರುವ ಎಪಿಎಂಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಎಪಿಎಂಸಿ ತೆಗೆದುಕೊಂಡ ಕ್ರಮ ರಾಜ್ಯದ ಇತರೆ ಎಪಿಎಂಸಿಗಳಿಗೂ ಪ್ರಯೋಜನವಾಯಿತು. ಮಾಜಿ ಸಚಿವ ಬಿ.ರಮಾನಾಥ ರೈ ಅವರ ಮುತುವರ್ಜಿಯಲ್ಲಿ ಇದು ಸಾಧ್ಯವಾಯಿತು ಎಂದರು.

ಎಪಿಎಂಸಿ ಮಾರುಕಟ್ಟೆ ಜಮೀನನ್ನು ಮೇಲ್ಕಾರ್ ಸಮೀಪ ಗುರುತಿಸಲಾಗಿದ್ದು, ಎಪಿಎಂಸಿ ಹೆಸರಿಗೆ ಮೀಸಲಿಡಲಾಗಿದೆ. ನಬಾರ್ಡ್ ಯೋಜನೆಯಡಿ 75 ಲಕ್ಷ ರೂ. ವೆಚ್ಚದಲ್ಲಿ ಮಾಣಿ, ಮಣಿನಾಲ್ಕೂರುಗಳಲ್ಲಿ ಮುಚ್ಚು ಹರಾಜುಕಟ್ಟೆ ನಿರ್ಮಿಸಿ ಆಯಾ ಗ್ರಾ.ಪಂ ಗಳಿಗೆ ನಿರ್ವಹಣೆಗೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ರೈತ ಸಂಜೀವಿನಿ ಅಪಘಾತ ವಿಮೆಯಡಿ 9 ಫಲಾನುಭವಿಗಳಿಗೆ 9.4 ಲಕ್ಷ ರೂ. ವಿತರಣೆ, ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ 25 ಲಕ್ಷ ರೂ. ದೇಣಿಗೆ, 1.25 ಕೋಟಿ ರೂ. ವೆಚ್ಚದಲ್ಲಿ 1000 ಮೆಟ್ರಿಕ್ ಟನ್ ಸಾಮರ್ಥ್ಯದ ಗೋಡೌನ್ ನಿರ್ಮಾಣಕ್ಕೆ ಹಣ ಮೀಸಲು, ಕೃಷಿಕರಿಗೆ 6 ತಿಂಗಳು ಬಡ್ಡಿರಹಿತ ಸಾಲ ನೀಡುವ ಯೋಜನೆಗೆ ಗೋಡೌನ್ ಕೊರತೆಯಿಂದಾಗಿ ಖಾಸಗಿ ಬಾಡಿಗೆ ಪಡೆಯಲು ಪ್ರಸ್ತಾಪ, ತಾಲೂಕಿನ ಅಲ್ಲಲ್ಲಿ ಮಾರುಕಟ್ಟೆ ಸಪ್ತಾಹ, ಕ್ಯಾಂಪ್ಕೊ ಮೂಲಕ ರೈತರ ಬೆಳೆ ಮಾರಾಟಕ್ಕೆ ಅವಕಾಶವನ್ನು ತನ್ನ ಅವಧಿಯಲ್ಲಿ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮುಂದಿನ 20 ತಿಂಗಳ ಅವಧಿಯಲ್ಲಿ ನೂತನ ಅಧ್ಯಕ್ಷರು, ಸಮಿತಿಯೊಂದಿಗೆ ಸಹಕರಿಸಿ, ಬಾಕಿ ಉಳಿದ ಕಾಮಗಾರಿ ನಿರ್ವಹಣೆಗೆ ಸಹಕಾರ ನೀಡಲಿದ್ದೇವೆ ಎಂದು ತಿಳಿಸಿದರು. ಈ ವೇಳೆ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಸದಸ್ಯರಾದ ಪದ್ಮರಾಜ ಬಲ್ಲಾಳ, ಚಂದ್ರಶೇಖರ ರೈ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.