ETV Bharat / city

ಮಂಗಳೂರು ಮನಪಾದಿಂದ ದಿನಸಿ ವಸ್ತುಗಳ ಸಂಗ್ರಹಣಾ ಕೇಂದ್ರ ಪ್ರಾರಂಭ: ಮೊದಲ ದಾನಿಯಿಂದ 5ಕ್ವಿಂಟಾಲ್ ಅಕ್ಕಿ ದೇಣಿಗೆ

ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ತೊಂದರೆಯಾಗದಂತೆ ಮಂಗಳೂರು ಮಹಾನಗರ ಪಾಲಿಕೆ ದಿನಸಿ ವಸ್ತುಗಳ ಸಂಗ್ರಹಣಾ ಕೇಂದ್ರವನ್ನು ತೆರೆದಿದೆ.

Grocery things center
ದಿನಸಿ ವಸ್ತುಗಳ ಸಂಗ್ರಹಣಾ ಕೇಂದ್ರ
author img

By

Published : Mar 31, 2020, 9:39 AM IST

ಮಂಗಳೂರು: ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ತೊಂದರೆಯಾಗದಂತೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ದಿನಸಿ ವಸ್ತುಗಳ ಸಂಗ್ರಹಣಾ ಕೇಂದ್ರವನ್ನು ತೆರೆದಿದೆ.

ದಾನಿಯಿಂದ ಮೊದಲ 5ಕ್ವಿಂಟಾಲ್ ಅಕ್ಕಿ ದೇಣಿಗೆ

ದಾನಿಗಳಿಂದ ದಿನ ನಿತ್ಯದ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಣೆ ಮಾಡುವುದರೊಂದಿಗೆ ಅಗತ್ಯ ಇರುವವರಿಗೆ ಈ ದಿನಸಿ ಸಾಮಗ್ರಿಗಳನ್ನು ಹಂಚಲಾಗುವ ವಿಶೇಷ ಯೋಜನೆಯನ್ನು ಕೈಗೊಳ್ಳಲಾಗಿದ. ಈ ಸಂಗ್ರಹಣಾ ಕೇಂದ್ರಕ್ಕೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ‌. ಈ ಬಗ್ಗೆ ಯಾವುದೇ ಸಂದೇಹವಿದ್ದಲ್ಲಿ 1077 ಸಂಖ್ಯೆಗೆ ಕರೆ ಮಾಡಬಹುದು. ದಿನಸಿ ಸಾಮಗ್ರಿಗಳನ್ನು ದಾನ ಮಾಡಲು ಬಯಸುವವರು ಜಿಲ್ಲಾಡಳಿತದ ವತಿಯಿಂದ ತೆರೆಯಲಾಗಿರುವ ಸಂಗ್ರಹಣಾ ಕೇಂದ್ರದಲ್ಲಿ ಅಕ್ಕಿ, ತೊಗರಿ ಬೇಳೆ, ದವಸ ಧಾನ್ಯಗಳು, ಸನ್ ಫ್ಲವರ್ ಆಯಿಲ್, ಸಾಂಬಾರ ಪದಾರ್ಥಗಳ ಪ್ಯಾಕ್, ಗರಂ ಮಸಾಲೆ, ಉಪ್ಪಿನಕಾಯಿ, ದೀರ್ಘಕಾಲ ಬಾಳಿಕೆ ಬರುವ ತರಕಾರಿಗಳನ್ನು ನೀಡಬಹುದು ಎಂದು ಜಿಲ್ಲಾಧಿಕಾರಿಯವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಮಾತನಾಡಿ, ದಿನಸಿ ವಸ್ತುಗಳ ಸಂಗ್ರಹಣಾ ಕೇಂದ್ರ ಆರಂಭಿಸಿರುವ ಬಗ್ಗೆ ಮೊನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದೆ. ಈ ಪೋಸ್ಟ್ ತುಂಬಾ ಲೈಕ್ ಆಗಿತ್ತು, ಶೇರ್ ಕೂಡಾ ಆಗಿತ್ತು. ಆದರೆ ಇಂದು ದಾನ ಸಂಗ್ರಹ ಕಾರ್ಯ ಮೊದಲ ಬಾರಿಗೆ ಆಗಿದೆ. ನಮ್ಮ ಮನವಿಗೆ ಸ್ಪಂದಿಸಿದ ಮೂಲತಃ ಮಂಗಳೂರಿನ ಕಿನ್ನಿಗೋಳಿ ಮೂಲದವರಾದ ಬೆಂಗಳೂರು ಸಾಫ್ಟ್‌ವೇರ್ ಉದ್ಯೋಗಿ ಹೇಮಚಂದ್ರ ಎಂಬವರು ಮೊದಲಬಾರಿಗೆ 5 ಕ್ವಿಂಟಾಲ್ ಅಕ್ಕಿಯನ್ನು ದೇಣಿಗೆ ನೀಡಿದ್ದಾರೆ. ಇದನ್ನು ಸದ್ಬಳಕೆ ಮಾಡುತ್ತೇವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.