ಮಂಗಳೂರು: ಚಾಕೋಲೆಟ್ ಅಂದರೆ ಯಾರಿಗೆ ಇಷ್ಟವಿಲ್ಲ?. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಚಾಕೋಲೆಟ್ ಎಂದರೆ ಬಲುಪ್ರಿಯ. ಇಂತಹ ಚಾಕೋಲೆಟ್ ಪ್ರಿಯರಿಗೆಂದೇ ಮಂಗಳೂರಿನಲ್ಲಿ ಪ್ರದರ್ಶನ ನಡೆಯುತ್ತಿದೆ.
ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ನಿಂದ ಮಂಗಳೂರಿನ ಫಾರಂ ಪಿಜ್ಜಾ ಮಾಲ್ನಲ್ಲಿ ನಿಕೋಸ್ ಚಾಕೋಲೆಟ್ ಸ್ಟ್ರೀಟ್ ಎಂಬ ಪ್ರದರ್ಶನ ಆಯೋಜನೆಗೊಂಡಿದೆ. ಇಲ್ಲಿ ಬಗೆಬಗೆಯ ಚಾಕೋಲೆಟ್ ಉತ್ಪನ್ನಗಳು ಗಮನ ಸೆಳೆಯುತ್ತಿದೆ. ಸುಮಾರು 50 ಕ್ಕೂ ಅಧಿಕ ಮಳಿಗೆಗಳಲ್ಲಿ ಭಿನ್ನ ವಿಭಿನ್ನವಾದ ಚಾಕೋಲೆಟ್ಗಳು ಕಾಣಸಿಗುತ್ತವೆ.
ಫ್ರೆಂಚ್ ಮಾರ್ಗದರ್ಶಕರಿಂದ ವಿದೇಶದಲ್ಲಿ ಕಲಿತು ಯುವತಿಯೊಬ್ಬರು ತಯಾರಿಸಿದ 'ಫ್ರೆಂಚ್ ಮ್ಯಾಕ್ರೋಸ್' ಕಪ್ ಕೇಕ್, ಚಾಕೋಲೆಟ್ ಪುಡ್ಡಿಂಗ್, ನ್ಯುಟೆಲ್ಲಾ ಬ್ರೌನಿ, ಬಿಸ್ಕಪ್ ಬ್ರೌನಿ, ಚಾಕೋಲೆಟ್ ಪೇಸ್ತ್ರಿ, ವೈಟ್ ಅಲ್ಮೊಂಡ್ ಡ್ರಾಪ್, ಮಿಲ್ಕ್ ಅಲ್ಮೊಂಡ್ ಸ್ಲ್ಯಾಬ್, ಪಾನ್ ಚಾಕೋ ಮೊದಲಾದ ಚಾಕೋಲೆಟ್ಗಳು ಇಲ್ಲಿವೆ. ಇನ್ನು ಈ ಪ್ರದರ್ಶನಕ್ಕೆ ಚಾಕೋಲೆಟ್ ಪ್ರಿಯರು ಫಿದಾ ಆಗಿದ್ದಾರೆ. ಇಲ್ಲಿ ಸಿಗುವ ವಿವಿಧ ರೀತಿಯ ಚಾಕೋಲೆಟ್ ಸವಿದವರು ಖುಷಿಗೊಂಡಿದ್ದಾರೆ.
ಓದಿ: ಮಳೆ ಆರ್ಭಟ: ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಿ, 15 ದಿನ ಅಧಿಕಾರಿಗಳಿಗೆ ರಜೆ ಕೊಡಬೇಡಿ.. ಸಿಎಂ ಸೂಚನೆ