ETV Bharat / city

ಮಂಗಳೂರು: ಮನಪಾ ಅಧಿಕಾರಿಗಳ ಸೋಗಿನಲ್ಲಿ ಚಿನ್ನಾಭರಣ - ನಗದು ದೋಚಿದ ದುಷ್ಕರ್ಮಿಗಳು - ಮಂಗಳೂರಿನ ದಡ್ಡಲ್‍ಕಾಡ್‍

ಮಂಗಳೂರಿನ ದಡ್ಡಲ್‍ಕಾಡ್‍ನಲ್ಲಿರುವ ಒಂಟಿ ಮಹಿಳೆಯಿದ್ದ ಮನೆಯೊಂದಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಬಂದಿರುವ ದುಷ್ಕರ್ಮಿಗಳು ಚಿನ್ನಾಭರಣ ಹಾಗು ನಗದು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

mangalore
ಮಂಗಳೂರು
author img

By

Published : Nov 19, 2021, 10:56 AM IST

ಮಂಗಳೂರು: ಮಹಾನಗರ ಪಾಲಿಕೆಯ ಅಧಿಕಾರಿಗಳ ಸೋಗಿನಲ್ಲಿ ಮನೆಯೊಂದಕ್ಕೆ ಬಂದಿರುವ ದುಷ್ಕರ್ಮಿಗಳು ಚಿನ್ನಾಭರಣ ಹಾಗೂ ನಗದು ದೋಚಿರುವ(Cash And jewellery Robbery) ಘಟನೆ ಮಂಗಳೂರಿನ ಉರ್ವಸ್ಟೋರ್ ಸಮೀಪದ ದಡ್ಡಲ್‍ಕಾಡ್ ಎಂಬಲ್ಲಿ ನಡೆದಿದೆ.

ನ.16ರಂದು ಬೆಳಗ್ಗೆ 10:30ರ ಸುಮಾರಿಗೆ ದಡ್ಡಲ್‍ಕಾಡ್‍ನಲ್ಲಿರುವ ಒಂಟಿ ಮಹಿಳೆಯಿದ್ದ ಮನೆಯೊಂದಕ್ಕೆ ಇಬ್ಬರು ಆಗಂತುಕರು ಬಂದಿದ್ದಾರೆ‌. ತಮ್ಮನ್ನು ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳೆಂದು ಪರಿಚಯಿಸಿದ ಅವರು ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಲಿದ್ದೇವೆ ಎಂದಿದ್ದಾರೆ.

ಮಹಿಳೆಯನ್ನು ಮನೆಯ ಹಿಂಬದಿಗೆ ಕರೆದುಕೊಂಡು ಹೋಗಿ ಸ್ವಚ್ಛತೆ ಪರಿಶೀಲಿಸುವ ನಾಟಕವಾಡಿದ್ದಾರೆ. ಈ ಸಂದರ್ಭ ಮಹಿಳೆ ನೆರೆಮನೆಯವರನ್ನು ಕರೆದಿದ್ದಾರೆ. ಈ ಬಗ್ಗೆ ಸಂಶಯಗೊಂಡ ನೆರೆಮನೆಯವರು ಅವರಲ್ಲಿ 'ಗುರುತಿನ ಚೀಟಿ' ಕೇಳಿದ್ದಾರೆ.

ಆಗ ಆ ಇಬ್ಬರು 'ಅದು ಬೈಕ್‍ನಲ್ಲಿದೆ, ತರುತ್ತೇವೆ' ಎಂದು ಹೇಳಿ ಹೋದವರು ಪರಾರಿಯಾಗಿದ್ದಾರೆ. ಆದರೆ, ಸಂಜೆ ವೇಳೆಗೆ ಕಪಾಟು ನೋಡಿದಾಗ 68 ಗ್ರಾಂ ಚಿನ್ನಾಭರಣ ಹಾಗೂ 71 ಸಾವಿರ ರೂ. ನಗದು ಕಳವಾಗಿರುವುದು ಗಮನಕ್ಕೆ ಬಂದಿದೆ.

ಇಬ್ಬರು ಆಗಂತುಕರು ಮನೆಯ ಹಿಂಭಾಗಕ್ಕೆ ಕರೆದೊಯ್ದು ಮಹಿಳೆಯೊಂದಿಗೆ ಮಾತನಾಡುತ್ತಿದ್ದಾಗ ಆಕೆಯ ಗಮನಕ್ಕೆ ಬಾರದಂತೆ ಇನ್ನೋರ್ವ ಮನೆಯೊಳಗೆ ಪ್ರವೇಶಿಸಿ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಕಪಾಟಿನ ಕೀಯನ್ನು ಕಪಾಟಿನ ಮುಂಭಾಗವೇ ನೇತುಹಾಕಿದ್ದರಿಂದ ಸುಲಭವಾಗಿ ಕಳವು ಕೃತ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಮಂಗಳೂರು: DHL ಕಸ್ಟಮರ್ ಕೇರ್​​ ಹೆಸರಿನಲ್ಲಿ ಹಣ ವಂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.