ETV Bharat / city

ಮಂಗಳೂರಿನಲ್ಲಿ ಉದ್ಯಮಿ ನಾಪತ್ತೆ - Mangalore South Police Station

ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‌ನಲ್ಲಿರುವ ಬಟ್ಟೆ ಅಂಗಡಿಯೊಂದರ ಪಾಲುದಾರ ಉದ್ಯಮಿಯಾಗಿರುವ ಸಲೀಂ ಅಹ್ಮದ್ ಅವರು ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

businessman-lost-in-mangalore
ನಾಪತ್ತೆಯಾಗಿರುವ ಸಲೀಂ ಅಹ್ಮದ್
author img

By

Published : Dec 23, 2020, 12:28 PM IST

ಮಂಗಳೂರು: ಬಟ್ಟೆ ಅಂಗಡಿಯೊಂದರ ಪಾಲುದಾರ ಉದ್ಯಮಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಲೀಂ ಅಹ್ಮದ್ (35) ನಾಪತ್ತೆಯಾಗಿರುವ ಉದ್ಯಮಿ. ನಗರದ ಸೆಂಟ್ರಲ್ ಮಾರ್ಕೆಟ್‌ನಲ್ಲಿರುವ ಬಟ್ಟೆ ಅಂಗಡಿಯೊಂದರ ಪಾಲುದಾರ ಉದ್ಯಮಿಯಾಗಿರುವ ಇವರು, ನಗರದ ಮಾರ್ನಮಿಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸಲೀಂ ಅಹ್ಮದ್​ ಡಿಸೆಂಬರ್ 21ರ ಬೆಳಗ್ಗೆ 8:30ಕ್ಕೆ ಮನೆಯಿಂದ ತೆರಳಿದವರು ಮತ್ತೆ ಮನೆಗೆ ವಾಪಸಾಗಿಲ್ಲ. ಮೊಬೈಲ್ ಕೂಡಾ ಸ್ವಿಚ್‌ಆಫ್ ಆಗಿದೆ. ಈ ಬಗ್ಗೆ ಸ್ಥಳೀಯರಲ್ಲಿ ಹಾಗೂ ಮಂಗಳೂರು ನಗರದಲ್ಲಿ ಹುಡುಕಾಟ ನಡೆಸಲಾಗಿದೆ. ಆದರ, ಸಲೀಂ ಅಹ್ಮದ್ ಸುಳಿವು ಈವರೆಗೆ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಾಣೆಯಾದವರ ವಿವರ : ನಾಪತ್ತೆಯಾಗಿರುವ ಸಲೀಂ ಅಹ್ಮದ್ 5.10 ಅಡಿ ಎತ್ತರವಿದ್ದು, ಗೋಧಿ ಮೈಬಣ್ಣ, ಸಪೂರ ಶರೀರ, ದುಂಡು ಮುಖ ಹೊಂದಿದ್ದಾರೆ. ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಿ ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತವರು ಮಂಗಳೂರು ಪೊಲೀಸ್ ನಿಯಂತ್ರಣ ಕೊಠಡಿ (0824-2220800) ಅಥವಾ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ (0824-2220518) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.